»   » ಸ್ನೇಹದ ಕಡಲಲ್ಲಿ ತೇಲುತ್ತಿದ್ದ ಕುಚ್ಚಿಕ್ಕೂ ಗೆಳೆಯರ 'ಕಿಚ್ಚಿ'ನ ಕಹಾನಿ

ಸ್ನೇಹದ ಕಡಲಲ್ಲಿ ತೇಲುತ್ತಿದ್ದ ಕುಚ್ಚಿಕ್ಕೂ ಗೆಳೆಯರ 'ಕಿಚ್ಚಿ'ನ ಕಹಾನಿ

Posted By:
Subscribe to Filmibeat Kannada

ದಚ್ಚು ಮತ್ತು ಕಿಚ್ಚ ಕನ್ನಡ ಚಿತ್ರರಂಗದ ದಿಗ್ಗಜರು. ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರು ಸ್ನೇಹದ ನಂತರ ಸ್ಯಾಂಡಲ್ ವುಡ್ ಗೆ ಇವರಿಬ್ಬರು ಮಾದರಿಯಾಗಿದ್ದರು. ಒಬ್ಬರನ್ನ ಒಬ್ಬರು ಬಿಟ್ಟುಕೊಡದಷ್ಟು ಸ್ನೇಹ ಇಬ್ಬರಲ್ಲಿ ಇತ್ತು. ಇಬ್ಬರು ಕಷ್ಟ ಪಟ್ಟು ಇಂಡಸ್ಟ್ರಿಯಲ್ಲಿ ನೆಲೆ ಕಂಡವರು. ಅಭಿಮಾನಿಗಳಿಂದಲೇ ಇಬ್ಬರು ಮೇಲೆ ಬಂದವರು. ಇಂದು ಅಭಿಮಾನಿಗಳಿಗೋಸ್ಕರವೇ ಸಿನಿಮಾ ಮಾಡುತ್ತಿರುವ ಸೂಪರ್ ಸ್ಟಾರ್ ಗಳು.[ದರ್ಶನ್ ಬಾಂಬ್ ಸಿಡಿಸುವ ಮೊದಲೇ ಮುನ್ಸೂಚನೆ ಕೊಟ್ಟಿದ್ದ 'ಡಿ ಕಂಪನಿ'! ]

ಆದ್ರೀಗ, ಈ ಇಬ್ಬರ ಗೆಳತನ ಬದಲಾಗಿದೆ. ನಾನೊಂದು ತೀರಾ, ನೀನೊಂದು ತೀರಾ ಎಂಬಂತಾಗಿದೆ. ಒಬ್ಬರನ್ನ ಒಬ್ಬರು ಕಂಡರೇ ಮುಖ ತಿರುಗಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ, ಸುದೀಪ್ ಮತ್ತು ದರ್ಶನ್ ಅವರ ಮಧ್ಯೆ ಇಷ್ಟೊಂದು ದೊಡ್ಡ ಮಟ್ಟದ ಬಿರುಕಿಗೆ ನಿಜವಾದ ಕಾರಣವೇನು ಎಂಬುದು ಯಾರೊಬ್ಬರಿಗೂ ಗೊತ್ತಿಲ್ಲ. ಆದ್ರೆ, ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಹೇಗಿತ್ತು ಎಂಬುದು ಗೊತ್ತಿದೆ. ದಚ್ಚು-ಕಿಚ್ಚನ ದೋಸ್ತಿ ಬಗ್ಗೆ ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ನಿಮಗಾಗಿ

'ಚಿನ್ನ' ಚಿನ್ನ ಎನ್ನುತ್ತಿದ್ದ ದೋಸ್ತಿಗಳು!

ಸಾಮಾನ್ಯವಾಗಿ ಫ್ರೆಂಡ್ಸ್ ಮಚ್ಚಾ, ಮಗ, ಗೆಳೆಯ ಎನ್ನುತ್ತ ಓಡಾಡುತ್ತಾರೆ. ಆದ್ರೆ, ಸುದೀಪ್ ಮತ್ತು ದರ್ಶನ್ ಪರಸ್ಪರ ಚಿನ್ನ-ಚಿನ್ನ ಎನ್ನುತ್ತಾ ತಮ್ಮ ಆತ್ಮೀಯತೆನ್ನ ತೋರಿಸಿಕೊಂಡಿದ್ದರು.[ಚಿನ್ನ ಚಿನ್ನ ಅಂತಿದ್ದಾರೆ ಕಣಣ್ಣೋ ಸುದೀಪ್, ದರ್ಶನ್]

ಸ್ನೇಹದ ಕಡಲಲ್ಲಿ ದಚ್ಚು-ಕಿಚ್ಚ!

ಸುದೀಪ್ ಚಿತ್ರಗಳಿಗೆ ದರ್ಶನ್ ಭೇಟಿ ಕೊಡುವುದು, ದರ್ಶನ್ ಚಿತ್ರದ ಹಾಡುಗಳನ್ನು ಸುದೀಪ್ ರಿಲೀಸ್ ಮಾಡುವುದು ಒಂದ್ಕಾಲದಲ್ಲಿ ಮಾಮೂಲಾಗಿತ್ತು. ಇವರಿಬ್ಬರ ಸ್ನೇಹ ನೋಡಿ ಅದೇಷ್ಟೋ ಜನ ಅಸಹ್ಯ ಪಟ್ಟುಕೊಂಡಿದ್ದರು ಇದ್ದಾರೆ ಅಂದ್ರೆ ನಿಜ.

ದರ್ಶನ್-ಸುದೀಪ್ ಸ್ನೇಹದಲ್ಲಿ ಬಿರುಕು!

ಈ ಮಧ್ಯೆ ಅದೇನ್ ಆಯ್ತೋ ಗೊತ್ತಿಲ್ಲ. ಸದಾ ಜೊತೆಯಾಗಿರುತ್ತಿದ್ದ ದರ್ಶನ್ ಮತ್ತು ಸುದೀಪ್ ಪರಸ್ಪರ ದೂರವಾದರು. ಒಬ್ಬರು ಇದ್ದ ಕಡೆ ಮತ್ತೊಬ್ಬರು ಬರುತ್ತಿರಲಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.[ಸುದೀಪ್-ದರ್ಶನ್ ನಡುವಿನ ವಿರಸದ ಬೆಂಕಿಗೆ ಇಂದು ಬಿಸಿ ಬಿಸಿ ತುಪ್ಪ!]

'ಸಿಸಿಎಲ್'ನಿಂದ ದರ್ಶನ್ ದೂರ!

ಕ್ರಿಕೆಟ್ ಮೇಲೆ ಆಸಕ್ತಿ ಇಲ್ಲವಾದರೂ ಸುದೀಪ್ ಗಾಗಿ ದರ್ಶನ್ ಸಿಸಿಎಲ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಿದರು. ಆದ್ರೆ, ಅದು ಕೇವಲ ಒಂದೇ ಆವೃತ್ತಿಗೆ ಸೀಮಿತವಾಯಿತು. ಒಟ್ಟಿಗೆ ಮ್ಯಾಚ್ ಆಡುತ್ತಿದ್ದ ಇಬ್ಬರು, ಮತ್ತೆ ಒಟ್ಟಾಗಿ ಮೈದಾನಕ್ಕೆ ಇಳಿಯಲಿಲ್ಲ.

ರಾಜ್ ಸ್ಮರಣಾರ್ಥದಲ್ಲೂ ಇದೇ ಕಥೆ!

ಡಾ.ರಾಜ್ ಕುಮಾರ್ ಸ್ಮರಣಾರ್ಥ ನಡೆದ ಮನರಂಜನಾ ಸಮಾರಂಭದಲ್ಲಿ ಒಂದೇ ಹಾಡಿಗೆ ಇಬ್ಬರೂ ಹೆಜ್ಜೆ ಹಾಕ್ಬೇಕಾದರೂ, ಸುದೀಪ್-ದರ್ಶನ್ ವೇದಿಕೆ ಮೇಲೆ ಒಟ್ಟಿಗೆ ಬರಲಿಲ್ಲ. ಡ್ಯಾನ್ಸ್ ಅಂತೂ ಮಾಡಲೇ ಇಲ್ಲ. ಹಾಡು ಶುರುವಾದಾಗ ಸುದೀಪ್ ಬಂದು ಕೈಬೀಸಿ ಹೋದರೆ, ಹಾಡಿನ ಕೊನೆಕೊನೆಯಲ್ಲಿ ಬುಲೆಟ್ ಪ್ರಕಾಶ್ ಜೊತೆಗೆ ದರ್ಶನ್ ಎಂಟ್ರಿಕೊಟ್ಟಿದ್ದು ಗಾಸಿಪ್ ಪಂಡಿತರ ಬಾಯಿಗೆ ಲಡ್ಡು ಬಿದ್ದಂಗಾಯ್ತು.

ಪತ್ರಿಕೆಗಳಲ್ಲಿ ವರದಿ ಆಯ್ತು!

ಸುದೀಪ್ ಹಾಗೂ ದರ್ಶನ್ ನಡುವೆ ಗೆಳೆತನ ಮುಗಿದ ಅಧ್ಯಾಯ ಅಂತ ಕೆಲ ಪತ್ರಿಕೆಗಳೂ ವರದಿ ಮಾಡಿದ್ದವು. ಅದನ್ನ ಓದಿ ಸುದೀಪ್-ದರ್ಶನ್ ಟ್ವಿಟ್ಟರ್ ನಲ್ಲಿ ಸಂದೇಶ ನೀಡಿದ್ದರು.

ಸುದೀಪ್ ಟ್ವೀಟ್...

''ನಾನು ಮತ್ತು ದರ್ಶನ್ ಯಾವತ್ತಿಗೂ ಒಳ್ಳೆಯ ಸ್ನೇಹಿತರು. ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ಬ್ಯೂಸಿಯಾಗಿರುವುದರಿಂದ ಜೊತೆಯಾಗಿ ಕಾಣಿಸಲು ಆಗಲಿಲ್ಲ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು'' ಅಂತ ಸುದೀಪ್ ಟ್ವೀಟ್ ಮಾಡಿದ್ದರು.[ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್]

ದರ್ಶನ್ ಟ್ವೀಟ್...

''ನಮ್ಮಿಬ್ಬರ ನಡುವೆ ಸರಿಯಿಲ್ಲ ಎನ್ನುವುದು ಶುದ್ಧ ಸುಳ್ಳು ಸುದ್ದಿ. ವಿಷಯ ಸರಿಯಾಗಿ ಅರಿಯದೇ ಇಂತಹ ಸುದ್ದಿಯನ್ನು ಹರಡಿಸಬೇಡಿ'' ಅಂತ ದರ್ಶನ್ ಕೂಡ ಟ್ವೀಟ್ ಮಾಡಿದ್ದರು.[ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?]

ಒಂದೇ ವೇದಿಕೆಯಲ್ಲಿದ್ದರು ಆತ್ಮೀಯತೆ ಇರಲಿಲ್ಲ!

ಎಲ್ಲಾ ಗಾಸಿಪ್ ಪಂಡಿತರ ಬಾಯಿಗೆ ಟ್ವೀಟ್ ಮೂಲಕ ಬೀಗ ಜಡಿದ ಮೇಲೆ 'ರಾಟೆ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಸುದೀಪ್-ದರ್ಶನ್ ಕಾಣಿಸಿಕೊಂಡಿದ್ದರು. ಆದ್ರೆ, ಮೊದಲಿನಂತೆ ಇಬ್ಬರು ಆತ್ಮೀಯತೆ ಇರಲಿಲ್ಲ!

ದರ್ಶನ್ ಕೊಟ್ಟ ಶಾಕ್!

ಅಲ್ಲಿಯವರೆಗೂ ಟ್ವಿಟ್ಟರ್ ನಲ್ಲಿ ಸುದೀಪ್ ರನ್ನ ದರ್ಶನ್, ದರ್ಶನ್ ರನ್ನ ಸುದೀಪ್ ಪರಸ್ಪರ ಫಾಲೋ ಮಾಡುತ್ತಿದ್ದರು. ಈ ಮಧ್ಯೆ ಏಕಾಏಕಿ ಸುದೀಪ್ ರನ್ನ ದರ್ಶನ್ unfollow ಮಾಡಿಬಿಟ್ಟರು. ಹೀಗಾಗಿ ಅದೇ ಹಳೇ ಗಾಳಿಸುದ್ದಿಗೆ ಮತ್ತೆ ರೆಕ್ಕೆ ಬಂದಾಯಿತು.

ಅಭಿಮಾನಿಗಳಲ್ಲಿ ಗೊಂದಲ!

ಇದಾದ ನಂತರ ಇಬ್ಬರ ಅಭಿಮಾನಿಗಳಲ್ಲೂ ಗೊಂದಲ ಮೂಡಿತು. ಇಬ್ಬರ ಮಧ್ಯೆ ಏನೋ ಆಗಿದೆ ಎಂಬುದು ಖಚಿತವಾಯಿತು. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಈ ಚರ್ಚೆಯನ್ನ ಮಾಡುತ್ತಲೇ ಇದ್ದರು.

'ಬಿಗ್ ಬಾಸ್'ಗೆ ದರ್ಶನ್ ಬರಲೇ ಇಲ್ಲ!

ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನ ಕರೆಯಿಸಿ ಎಂದು ಸುದೀಪ್ ಗೆ ಅಭಿಮಾನಿಗಳು ಕೇಳುತ್ತಲೇ ಇದ್ದರು. ಆದ್ರೆ, ಸುದೀಪ್ ಮಾತ್ರ ಬರ್ತಾರೆ, ಎಂದು ಹೇಳುತ್ತಲೇ ಇದ್ದರೇ ಹೊರತು ಇದುವರೆಗೂ ದರ್ಶನ್ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಲೇ ಇಲ್ಲ.

'ವಿಕೇಂಡ್ ವಿತ್ ರಮೇಶ್'ನಲ್ಲಿ ಸುದೀಪ್ ಬಗ್ಗೆ ಮಾತಾಡಿಲ್ಲ!

ಇನ್ನೂ ಕಿರುತೆರೆಯಲ್ಲಿ ರಮೇಶ್ ನಿರೂಪಣೆ ಮಾಡುವ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ ದರ್ಶನ್ ಇಬ್ಬರ ಬಾಗವಹಿಸಿದ್ದರು. ಆದ್ರೆ, ಸುದೀಪ್ ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಮಾತನಾಡಿದರು. ಬಟ್, ದರ್ಶನ್ ಕಾರ್ಯಕ್ರಮದಲ್ಲಿ ಸುದೀಪ್ ಬಗ್ಗೆ ಒಂದು ಮಾತು ಕೂಡ ಆಡಲಿಲ್ಲ.

ದರ್ಶನ್ ಬರ್ತ್ ಡೇ ಗೆ ಸುದೀಪ್ ವಿಶ್!

ಪ್ರತಿ ವರ್ಷದಂತೆ ಈ ವರ್ಷವೂ ದರ್ಶನ್ ಅವರ ಹುಟ್ಟುಹಬ್ಬಕ್ಕೆ, ಸುದೀಪ್ ಒಂದು ದಿನ ಮುಂಚೆಯೇ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದರು. ಆದ್ರೆ, ಸುದೀಪ್ ಅವರ ವಿಶ್ ಗೆ ದರ್ಶನ್ ಅವರು ಒಂದು ಥ್ಯಾಂಕ್ಸ್ ಕೂಡ ಹೇಳಿಲ್ಲ.

ಕೊನೆಗೂ ಸ್ನೇಹಿತರಲ್ಲ ಎಂದು ಹೇಳಿಬಿಟ್ಟ ದಾಸ!

ಹೀಗೆ ತುಂಬಾ ವರ್ಷಗಳಿಂದಲೂ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೂಹಗಳು ಮಾತ್ರ ಕೇಳಿಬರುತ್ತಿತ್ತು. ಆದ್ರೆ, ಅಂತಿಮವಾಗಿ ಸ್ವತಃ ದರ್ಶನ್ ಅವರೇ ಈ ವಿಚಾರವನ್ನ ಟ್ವೀಟ್ ಮಾಡುವುದರ ಮೂಲ ಖಚಿತಪವಿಸಿದರು.

ನಾವಿಬ್ಬರು ಸ್ನೇಹಿತರಲ್ಲ!

''ನಾನು ಸುದೀಪ್ ಸ್ನೇಹಿತರಲ್ಲ, ನಾವು ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನಟರಷ್ಟೇ, ಇವತ್ತಿಗೆ ಎಲ್ಲವನ್ನು ಕೊನೆಗೊಳಿಸಿ. ಇನ್ನುಂದೆ ನಮ್ಮಿಬ್ಬರ ಮಧ್ಯೆ ಗೆಳೆತನವಿರಲ್ಲ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ'' ಎಂದು ದರ್ಶನ್ ಅವರು ಸುದೀಪ್ ಅವರ ಸ್ನೇಹಕ್ಕೆ ಬ್ರೇಕ್ ಹಾಕಿದ್ದಾರೆ.

ಇಬ್ಬರು ಒಟ್ಟಾಗಿ ಇರಲಿ!

ಸದ್ಯ, ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಮುರಿದುಬಿದ್ದಿದೆ ಎಂಬುದು ನಿಜವಾಗಿದೆ. ಆದ್ರೆ, ಇದಕ್ಕೆ ಸುದೀಪ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಲ್ಲ. ಆದ್ರೆ, ಇಬ್ಬರ ಅಭಿಮಾನಿಗಳು ಮಾತ್ರ ದಶFನ್ ಮತ್ತು ಸುದೀಪ್ ಮತ್ತೆ ಒಂದಾಗಬೇಕು ಎಂಬ ಆಶಯ ಹೊಂದಿದ್ದಾರೆ.

English summary
All is Not well Relationship Between Challenging Star Darshan and Kiccha Sudeep. Here is the complete report on the Gossip History about Darshan and Kiccha Sudeep rift.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada