ಸೀಶೆಲ್ಸ್ ನಲ್ಲಿ ನವ ದಂಪತಿ ಹಿತಾ-ಕಿರಣ್ ಹನಿಮೂನ್

Recommended Video

Hitha Chandrashekar And Kiran Srinivas Seychelles Islands Romantic Honeymoon Photos

ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ಶ್ರೀನಿವಾಸ್ ರವರ ವಿವಾಹ ಮಹೋತ್ಸವ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿತ್ತು. ವೈವಾಹಿಕ ಬದುಕಿಗೆ ಕಾಲಿಟ್ಟ ಕ್ಯೂಟ್ ಕಪಲ್ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಇದೀಗ ಹನಿಮೂನ್ ಗಾಗಿ ಫಾರಿನ್ ಗೆ ಹಾರಿದ್ದಾರೆ.

ಹನಿಮೂನ್ ಗಾಗಿ ಹಿಂದೂ ಮಹಾ ಸಾಗರದಲ್ಲಿರುವ ಪುಟ್ಟ ದ್ವೀಪ ಸೀಶೆಲ್ಸ್ ಗೆ ಫ್ಲೈಟ್ ಹತ್ತಿದ್ದಾರೆ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್. ಆಫ್ರಿಕನ್ ಯೂನಿಯನ್ ಗೆ ಸೇರುವ ಸೀಶೆಲ್ಸ್ ಹನಿಮೂನ್ ಗಾಗಿ ಹೇಳಿ ಮಾಡಿಸಿದ ತಾಣ.

hita-chandrashekar-and-kiran-srinivas-honeymoon-in-seychelles

ಸೀಶೆಲ್ಸ್ ನಲ್ಲಿರುವ ಬೀಚ್ ರೆಸಾರ್ಟ್ ನಲ್ಲಿ ಹಿತಾ ಮತ್ತು ಕಿರಣ್ ರೋಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ. ಕೆಲ ಫೋಟೋಗಳನ್ನ ಇಬ್ಬರೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅಸಲಿಗೆ, ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 'ಒಂಥರಾ ಬಣ್ಣಗಳು' ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಇವರಿಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಇಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿ ಕೊಟ್ಟ ಮೇಲೆ ಮದುವೆ ಮಾಡಿಕೊಂಡ ಜೋಡಿ ಇದೀಗ ಹೊಸ ಬದುಕು ಆರಂಭಿಸಿದ್ದಾರೆ.

ಸೀಶೆಲ್ಸ್ ನಿಂದ ವಾಪಸ್ ಬಂದ ಮೇಲೆ ಹಿತಾ ಚಂದ್ರಶೇಖರ್, ಪತಿ ಕಿರಣ್ ಶ್ರೀನಿವಾಸ್ ಜೊತೆಗೆ ಮುಂಬೈಗೆ ಶಿಫ್ಟ್ ಆಗಲಿದ್ದಾರೆ.

More from Filmibeat

English summary
Kannada Actress Hita Chandrashekar and Kiran Srinivas Honeymoon in Seychelles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X