ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ಮದುವೆಯ ಅದ್ಭುತ ಕ್ಷಣಗಳಿವು
ವರ್ಷದ ಹಿಂದೆ ಪ್ರೀತಿ ಮಾಡುತ್ತಿದ್ದ ಜೋಡಿ ಇದೀಗ ಸತಿ-ಪತಿಗಳಾಗಿದ್ದಾರೆ. ಲವ್ ಮಾಡುತ್ತಿದ್ದರೂ, ''ನಾವಿಬ್ಬರು ಸ್ನೇಹಿತರು'' ಅಂತ ಹೇಳಿಕೊಂಡು ಒಟ್ಟಿಗೆ ಓಡಾಡುತ್ತಿದ್ದ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಈಗ ದಂಪತಿಗಳಾಗಿ ಹೊಸ ಜೀವನ ಆರಂಭಿಸಿದ್ದಾರೆ.
ಡಿಸೆಂಬರ್ 1 ರಂದು ಬೆಂಗಳೂರಿನ ಪಂಚವಟಿ, ದಿ ಪೆವಿಲಿಯನ್ ನಲ್ಲಿ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ವಿವಾಹ ಮಹೋತ್ಸವ ಸಾಂಪ್ರದಾಯಿಕವಾಗಿ ನಡೆಯಿತು.
ತಮ್ಮ ಜೀವನದ ಅತ್ಯಮೂಲ್ಯ ದಿನದ ಅದ್ಭುತ ಕ್ಷಣಗಳನ್ನು ನಟಿ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ...

ತಾಳಿ ಕಟ್ಟುವ ಶುಭ ವೇಳೆ
ಡಿಸೆಂಬರ್ 1 ರಂದು ಬೆಳಗ್ಗೆ ಇದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್ ಕೊರಳಿಗೆ ಕಿರಣ್ ಶ್ರೀನಿವಾಸ್ ಮಾಂಗಲ್ಯಧಾರಣೆ ಮಾಡಿದರು. ತಾಳಿ ಕಟ್ಟುವ ಶುಭ ವೇಳೆಯಲ್ಲಿ ಸೆರೆಯಾಗಿರುವ ಫೋಟೋ ಇದು.

ಹಣೆಗೆ ಕುಂಕುಮ ಇಟ್ಟ ಪತಿ
ಮುಹೂರ್ತ ಸಮಾರಂಭಕ್ಕೆ ಕೆಂಪು ಬಣ್ಣದ ಬಾರ್ಡರ್ ಹೊಂದಿರುವ ಬಿಳಿ ಬಣ್ಣದ ರೇಶ್ಮೆ ಸೀರೆಯಲ್ಲಿ ವಧು ಹಿತಾ ಕಂಗೊಳಿಸಿದರೆ, ಬಿಳಿ ಬಣ್ಣದ ರೇಶ್ಮೆ ಪಂಚೆ-ಶಲ್ಯ ತೊಟ್ಟು ವರ ಕಿರಣ್ ಮಿಂಚಿದರು. ಮಾಂಗಲ್ಯಧಾರಣೆ ಮಾಡಿದ ನಂತರ ಸಾಂಪ್ರದಾಯಿಕವಾಗಿ ಪತ್ನಿ ಹಿತಾ ಹಣೆಗೆ ಪತಿ ಕಿರಣ್ ಕುಂಕುಮ ಇಟ್ಟರು.
ಮದುವೆ ಸಂಭ್ರಮದಲ್ಲಿ ನಟಿ ಹಿತಾ ಮತ್ತು ನಟ ಕಿರಣ್ ಶ್ರೀನಿವಾಸ್

ಮುಖದಲ್ಲಿ ಮಂದಹಾಸ
ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಆದ ಸಡಗರದಲ್ಲಿ ಹಿತಾ ಚಂದ್ರಶೇಖರ್... ಇನ್ನೂ ಇಷ್ಟ ಪಟ್ಟ ಹುಡುಗಿಗೆ ತಾಳಿ ಕಟ್ಟಿದ ಸಂಭ್ರಮದಲ್ಲಿ ಕಿರಣ್ ಶ್ರೀನಿವಾಸ್... ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿರುವ ಈ ಜೋಡಿಯ ಖುಷಿಗೆ ಪಾರವೆಲ್ಲಿ.?

ಅರುಂಧತಿ ನಕ್ಷತ್ರ ನೋಡಿದ ದಂಪತಿ
ಮದುವೆಯ ನಂತರ ವಧು-ವರರು ಅರುಂಧತಿ ನಕ್ಷತ್ರ ನೋಡುವುದು ಸಂಪ್ರದಾಯ. ಅದರಂತೆ ಮದುವೆಯ ಶಾಸ್ತ್ರ ಮುಗಿಯುತ್ತಿದ್ದಂತೆಯೇ, ಅರುಂಧತಿ ನಕ್ಷತ್ರವನ್ನ ದಂಪತಿ ನೋಡಿದರು.

ಸಂಭ್ರಮದ ಕ್ಷಣಗಳು
ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಮದುವೆಗೆ ಕುಟುಂಬಸ್ಥರು, ಬಂಧು-ಮಿತ್ರರು, ಕಿರುತೆರೆ-ಬೆಳ್ಳಿತೆರೆ ಲೋಕದ ಗಣ್ಯರು ಸಾಕ್ಷಿಯಾಗಿದ್ದರು. ವಿವಾಹದಲ್ಲಿ ಹಿತಾ ಮತ್ತು ಕಿರಣ್ ಸಂಭ್ರಮ ಪಟ್ಟ ಕ್ಷಣಗಳು ಕ್ಯಾಮರಾದಲ್ಲಿ ಸೆರೆ ಆಗಿರುವುದು ಹೀಗೆ...

ಸಂಗೀತ ಸಂಜೆಗೆ ಹಿತಾ ರೆಡಿ ಆಗಿದ್ದು ಹೀಗೆ...
ಮದುವೆಗೂ ಮುನ್ನ ನಡೆದ ಸಂಗೀತ ಸೆರೆಮನಿಗೆ ತಮ್ಮ ಲುಕ್ ಹೇಗಿರಬೇಕು ಅಂತ ಹಿತಾ ಕನಸು ಕಂಡಿದ್ದರೋ, ಅದನ್ನ ನನಸು ಮಾಡಿದವರು ಹಿತಾ ಸ್ಟೈಲಿಸ್ಟ್ ಮತ್ತು ಮೇಕಪ್ ಆರ್ಟಿಸ್ಟ್. ಕೆಂಪು ಬಣ್ಣದ ಗೌನ್ ಧರಿಸಿ ಸಂಗೀತ ಸಮಾರಂಭಕ್ಕೆ ಹಿತಾ ಮಿರಿ ಮಿರಿ ಮಿನುಗಿದರು.

ಲೈಟ್ಸ್-ಕ್ಯಾಮರಾ ಥೀಮ್
ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಸಂಗೀತ ಸಮಾರಂಭ ಲೈಟ್ಸ್-ಕ್ಯಾಮರಾ ಥೀಮ್ ನಲ್ಲಿ ನಡೆಯಿತು. ರೋಮ್ಯಾಂಟಿಕ್ ಹಾಡುಗಳಿಗೆ ಭಾವಿ ದಂಪತಿ ಹೆಜ್ಜೆ ಹಾಕಿದ್ದರು.

ಹ್ಯಾಪಿ ಮ್ಯಾರೀಡ್ ಲೈಫ್
'ಒಂಥರಾ ಬಣ್ಣಗಳು' ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಕಿರಣ್ ಶ್ರೀನಿವಾಸ್ ಮತ್ತು ಹಿತಾ ಚಂದ್ರಶೇಖರ್ ಇದೀಗ ನಿಜ ಜೀವನದಲ್ಲಿ ಜಂಟಿ ಆಗಿದ್ದಾರೆ. ಇದೀಗಷ್ಟೇ ಹೊಸ ಜೀವನ ಆರಂಭಿಸಿರುವ ಜೋಡಿಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.


Click it and Unblock the Notifications











