ಹಿತಾ ಚಂದ್ರಶೇಖರ್-ಕಿರಣ್ ಮದುವೆಗೆ ದಿನಾಂಕ ನಿಗದಿ ಆಯ್ತು

ಸಿಹಿ ಕಹಿ ಚಂದ್ರು-ಸಿಹಿ ಕಹಿ ಗೀತಾ ಪುತ್ರಿ.. ಕನ್ನಡ ನಟಿ ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ಶ್ರೀನಿವಾಸ್ ಮದುವೆ ದಿನಾಂಕ ನಿಗದಿ ಆಗಿದೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ.

ಮೂಲಗಳ ಪ್ರಕಾರ, ಡಿಸೆಂಬರ್ ಮೊದಲ ವಾರ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ವಿವಾಹ ಮಹೋತ್ಸವ ನಡೆಯಲಿದ್ದು, ದಿನಾಂಕವನ್ನ ಕುಟುಂಬ ವರ್ಗ ಬಹಿರಂಗ ಪಡಿಸಿಲ್ಲ.

ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇಬ್ಬರು ಪ್ರೀತಿ ಮಾಡುತ್ತಿರುವ ವಿಚಾರವನ್ನು ನಟಿ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು.

'1/4 ಕೆ.ಜಿ ಪ್ರೀತಿ', 'ದುನಿಯಾ-2', 'ಒಂಥರಾ ಬಣ್ಣಗಳು', 'ತುರ್ತು ನಿರ್ಗಮನ' ಸಿನಿಮಾಗಳಲ್ಲಿ ಹಿತಾ ಚಂದ್ರಶೇಖರ್ ಅಭಿನಯಿಸಿದ್ದಾರೆ. ಇನ್ನೂ 'ಹಾಗೇ ಸುಮ್ಮನೆ', 'ಪ್ರೀತಿಯಿಂದ ರಮೇಶ್', 'ನಿರುತ್ತರ' ಸಿನಿಮಾಗಳಲ್ಲಿ ಕಿರಣ್ ಶ್ರೀನಿವಾಸ್ ನಟಿಸಿದ್ದಾರೆ. 'ಒಂಥರಾ ಬಣ್ಣಗಳು' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹಿತಾ ಮತ್ತು ಕಿರಣ್ ನಡುವೆ ಪ್ರೀತಿಯ ಮೊಳಕೆಯೊಡೆದಿದೆ.

Hita Chandrashekar and Kiran Srinivas to get married in December

ಇಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿ ನೀಡಿದ್ದು, ಕಳೆದ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಇದೀಗ ಡಿಸೆಂಬರ್ ಮೊದಲ ವಾರದಲ್ಲಿ ಮದುವೆ ನೆರವೇರಲಿದೆ. ಸರಳವಾಗಿ ಸಾಂಪ್ರದಾಯಿಕವಾಗಿ ಹಿತಾ-ಕಿರಣ್ ವಿವಾಹ ಜರುಗಲಿದೆ.

More from Filmibeat

English summary
Kannada Actress Hita Chandrashekar and Kiran Srinivas to get married in December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X