ಕೆಂಪು ಕ್ರಾಂತಿಗೆ ನಾಂದಿ ಹಾಡಿದ ಹಿತಾ ಚಂದ್ರಶೇಖರ್
ಪ್ಯಾಡ್ ಮ್ಯಾನ್ ಬಿಡುಗಡೆ ಮುಂಚಿನಿಂದಲೂ ಬಾರಿ ಸದ್ದು ಮಾಡುತ್ತಿರುವ ಚಿತ್ರ. ಪ್ಯಾಡ್ ಮ್ಯಾನ್ ಬಗ್ಗೆ ಪುಸ್ತಕಗಳಲ್ಲಿ ಪೇಪರ್ ನಲ್ಲಿ ಓದಿದ್ದರು ಇಂತಹ ಕಥೆಯನ್ನ ತೆರೆ ಮೇಲೆ ತರುವಂತಹ ಪ್ರಯತ್ನವನ್ನ ಯಾರು ಕೂಡ ಮಾಡಿಯೇ ಇರಲಿಲ್ಲ. ಬಾಲಿವುಡ್ ಮಂದಿಯ ಈ ಪ್ರಯತ್ನಕ್ಕೆ ಇಡೀ ಸಿನಿಮಾರಂಗವೇ ಸಂತಸ ವ್ಯಕ್ತ ಪಡಿಸಿತ್ತು..
ಪ್ಯಾಡ್ ಮ್ಯಾನ್ ಸಿನಿಮಾದ ಪ್ರಚಾರದ ಕೆಲಸ ನೋಡಿ ಅದೆಷ್ಟೋ ಹೆಣ್ಣು ಮಕ್ಕಳ ಆಶ್ಚರ್ಯ ಪಟ್ಟಿದ್ದರು. ಇನ್ನು ಒಂದಿಷ್ಟು ಜನರು ಅಯ್ಯೋ ನಮ್ಮ ಕನ್ನಡದವರು ಯಾಕೆ ಈ ರೀತಿ ಸಿನಿಮಾಗಳನ್ನ ಮಾಡಲು ಮುಜುಗರ ಪಟ್ಟುಕೊಳ್ಳುತ್ತಾರೆ ಅನ್ನೋ ಯೋಚನೆ ಮಾಡಿದ್ದರು. ಆದರೆ ನಮ್ಮಲ್ಲೂ ರೆವಲ್ಯೂಷನ್ ಶುರುವಾಗಿದೆ.
ನಾವು ಕೂಡ ಮುಕ್ತವಾಗಿ ಮುಟ್ಟಿನ ವಿಚಾರವನ್ನ ಮಾತನಾಡುತ್ತೇವೆ ಎಂದು ನಟಿ ಹಿತಾ ಚಂದ್ರಶೇಖರ್ ಎಲ್ಲರಿಗೂ ಸಂದೇಶ ಸಾರಲು ಬರುತ್ತಿದ್ದಾರೆ. ದಿ ರೆಡ್ ರೆವಲ್ಯೂಷನ್ ಹೆಸರಿನಲ್ಲಿ ಹಿತಾ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಏನಿದು ರೆವಲ್ಯೂಷನ್ ? ಯಾವ ರೀತಿಯ ಜಾಗೃತಿ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ .

ರೆವಲ್ಯೂಷನ್ ಮಾಡುತ್ತಿರುವ ಹಿತಾ
ಕನ್ನಡದ ನಟಿ ಹಿತಾ ಚಂದ್ರಶೇಖರ್ ಕೆಂಪು ಕ್ರಾಂತಿ ಪ್ರಾರಂಭ ಮಾಡಿದ್ದಾರೆ. ಹೆಣ್ಣು ಮಕ್ಕಳು ಮುಟ್ಟಾಗುವುದು ನೈಸರ್ಗಿಕ ಪ್ರಕ್ರಿಯೆ. ಅದು ನಾಚಿಕೆ ಪಡುವಂತಹ ವಿಚಾರ ಅಲ್ಲ. ಎಲ್ಲರೂ ಇದರ ಬಗ್ಗೆ ಮುಕ್ತವಾಗಿ ಮಾತನಾಡವಂತೆ ಆಗಬೇಕು ಎನ್ನುವುದನ್ನು ದಿ ರೆಡ್ ರೆವಲ್ಯೂಷನ್ ಮೂಲಕ ಹೇಳಲು ಹೊರಟಿದ್ದಾರೆ.

ಇನ್‌ಸ್ಟಾಗ್ರಾಂ ನಲ್ಲಿ ಅಭಿಯಾನ
ವಿಭಿನ್ನ ರೀತಿಯ ಕೆಂಪು ಬಣ್ಣದ ಬಟ್ಟೆಯನ್ನ ಧರಿಸಿ ಜಾಗೃತಿ ಅಭಿಯಾನವನ್ನ ಪ್ರಾರಂಭ ಮಾಡಿರುವ ಹಿತಾ ಚಂದ್ರಶೇಖರ್ ಅವರ ಜೊತೆಯಲ್ಲಿ ಎಲ್ಲರೂ ಕೈ ಜೋಡಿಸ ಬಹುದಾಗಿದೆ. ನೀವು ಧರಿಸುವ ಬಟ್ಟೆ, ಚಪ್ಪಲಿ, ನೈಲ್ ಪಾಲೀಶ್ ಹೀಗೆ ಹೆಣ್ಣು ಮಕ್ಕಳು ಬಳಸುವ ಕೆಂಪು ಬಣ್ಣದ ಅಗತ್ಯ ವಸ್ತುಗಳ ಜೊತೆ ಫೋಟೋ ತೆಗೆದುಕೊಂಡು ಹ್ಯಾಷ್ ಟ್ಯಾಗ್ ಬಳಸಿ ದಿ ರೆಡ್ ರೆವಲ್ಯೂಷನ್ ಎಂದು ಹಾಕಿ ಟ್ಯಾಗ್ ಮಾಡಬೇಕು.

ಮುಟ್ಟಾಗುವುದು ಆರೋಪ ಅಲ್ಲ
ಕಾಲ ಬದಲಾಗಿದೆ ಎಲ್ಲರಿಗೂ ಎಲ್ಲಾ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ಯ ಇದೆ. ಮುಟ್ಟಾಗುವುದು ಯಾವುದೇ ಆರೋಪವಲ್ಲ. ನಾಚಿಕೆ ಪಟ್ಟುಕೊಳ್ಳದೆ ಮುಟ್ಟಿನ ಬಗ್ಗೆ ಮಾತನಾಡುವಂತಾಗಬೇಕು ಎನ್ನುವುದು ಇದರ ಉದ್ದೇಶ.

ಕೆಂಪು ಕ್ರಾಂತಿಗೆ ದೊರಕಿತು ಉತ್ತಮ ಪ್ರತಿಕ್ರಿಯೆ
ದಿ ರೆಡ್ ರೆವಲ್ಯೂಷನ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಿತಾ ಚಂದ್ರಶೇಖರ್ ಅವರೊಂದಿಗೆ ಸಾಕಷ್ಟು ಜನರು ಕೈ ಜೋಡಿಸಿದ್ದು ಕೆಂಪು ಬಣ್ಣದ ಜೊತೆಯಲ್ಲಿರುವ ಪೋಟೋಗಳನ್ನ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೌಡ್ ಮಾಡುತ್ತಿದ್ದಾರೆ.


Click it and Unblock the Notifications











