ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಹಿತಾ ಚಂದ್ರಶೇಖರ್
ಕನ್ನಡ ಹಿರಿಯ ನಟ ಹಾಗೂ ನಿರ್ದೇಶಕ ಸಿಹಿ ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಹಸೆಮಣೆ ಏರಲಿದ್ದಾರೆ ಎಂದು ಈ ಮೊದಲೇ ಸುದ್ದಿಯಾಗಿತ್ತು. ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಅಣಿಯಾಗುತ್ತಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಇಂದು ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ನಿಶ್ಚಿತಾರ್ಥ ನೆರವೇರಿದೆ. ಎರಡು ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
'ಹಾಗೆ ಸುಮ್ಮನೆ' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ಕಿರಣ್ ಮತ್ತು ಹಿತಾ ಇತ್ತೀಚಿಗೆ 'ಒಂಥರಾ ಬಣ್ಣಗಳು' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ಪರಸ್ಪರ ಪ್ರೀತಿಸುತ್ತಿದ್ದರು ಆ ವಿಷ್ಯ ಗೌಪ್ಯವಾಗಿಯೇ ಇತ್ತು. ಆದ್ರೆ, ನಟಿ ಸೋನು ಗೌಡ ಅವರು ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು.

ಈಗ ಅಧಿಕೃತವಾಗಿ ಎಂಗೇಜ್ ಮೆಂಟ್ ನಡೆದಿದ್ದು, ಸದ್ಯದಲ್ಲೇ ಈ ತಾರಾ ಜೋಡಿ ಹಸೆಮಣೆ ಏರಲಿದೆ. ಸದ್ಯಕ್ಕೆ ಮದುವೆ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಹಿತಾ ಚಂದ್ರಶೇಖರ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದರು.


Click it and Unblock the Notifications











