For Quick Alerts
  ALLOW NOTIFICATIONS  
  For Daily Alerts

  'ಮಹಾನ್​ ಕಲಾವಿದ': ಹೊಸ ಅವತಾರದಲ್ಲಿ ಲೀಲಾ ಪತಿ ಎಜೆ

  |

  ದಿಲೀಪ್​ ರಾಜ್​ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಸಿದ್ದರೂ ಕೂಡ, ಸದ್ಯ ಎಜೆ ಎಂಬ ಹೆಸರಿನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಹಿಟ್ಲರ್​ ಕಲ್ಯಾಣ'ದ ಮೂಲಕ ಖ್ಯಾತಿ ಪಡೆದಿರುವ ದಿಲೀಪ್​ ರಾಜ್​ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

  ಪೋಷಕ ನಟನಾಗಿ ಕಿರುತೆರೆಯ ಪಾತ್ರಗಳನ್ನು ನಿರ್ವಹಿಸುತ್ತಿದ್ದ ದಿಲೀಪ್​ ರಾಜ್​ 'ಬಾಯ್​ಫ್ರೆಂಡ್'​​​ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಬಳಿಕ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ 'ಮಿಲನ', 'ಲವ್​ ಗುರು' 'ಯೂಟರ್ನ್'​ ಚಿತ್ರದಲ್ಲಿ ಪ್ರಮುಖ ಕಾಣಿಸಿಕೊಂಡಿಸಿದ್ದರು. ಮೊದಲಿನಿಂದಲೂ ಬೆಳ್ಳಿ ತೆರೆಯ ಸಂಪರ್ಕವಿರುವ ದಿಲೀಪ್​ ರಾಜ್​ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

  ನಟನೆ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್​ ರಾಜ್​, ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಿಗೆ ಬಂಡವಾಳ ಹಾಕಿದ್ದರು. ಸದ್ಯ 'ಹಿಟ್ಲರ್​ ಕಲ್ಯಾಣ'ದ ಲೀಲಾ ಪತಿ ಎಜೆ ಪಾತ್ರ ನಿರ್ವಹಿಸುತ್ತಿರುವ ದಿಲೀಪ್​ ರಾಜ್​ ಕಿರುತೆರೆ ಜೊತೆಗೆ ಹಿರಿತೆರೆ ಮೇಲೂ ಮಿಂಚಲು ಸಿದ್ಧರಾಗಿದ್ದರು, 'ಮಹಾನ್​ ಕಲಾವಿದ' ಚಿತ್ರದಲ್ಲಿ ನಾಯಕ ನಟರಾಗಿದ್ದಾರೆ. ಈ ಚಿತ್ರದ ಪೋಸ್ಟರ್​ ಈಗಾಗಲೇ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ದಿಲೀಪ್​ ರಾಜ್​ ಹೊಸ ಅವತಾರಕ್ಕೆ ಹಾಗೂ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  ದಿಲೀಪ್​ ರಾಜ್​ ನಟನೆಯ 'ಮಹಾನ್​ ಕಲಾವಿದ' ಚಿತ್ರಕ್ಕೆ ಮೊದಲು ಕಲಾವಿದ ಎಂದು ಹೆಸರಿಡಲಾಗಿತ್ತು. ಆದರೆ ಈಗಾಗಲೇ ಕ್ರೇಜಿ ಸ್ಟಾರ್​ ರವಿಚಂದ್ರನ್ ನಟನೆ ಕಲಾವಿದ ಚಿತ್ರ ತೆರೆ ಕಂಡು ಹಿಟ್​ ಆಗಿದೆ. ದಿಲೀಪ್​ ರಾಜ್​ ಚಿತ್ರಕ್ಕೆ ರವಿಚಂದ್ರನ್​ ಅವರ ಸಲಹೆ ಮೇರೆಗೆ ಸದ್ಯ ಮಹಾನ್​ ಕಲಾವಿದ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ.

  'ಮಹಾನ್​ ಕಲಾವಿದ' ಚಿತ್ರವು ಒಬ್ಬ ಕಲಾವಿದನ ಬದುಕು, ಆತನ ಕಷ್ಟ, ಚಿತ್ರರಂಗ ಅಥವಾ ನಟನಾ ರಂಗದಲ್ಲಿ ಆತ ಬದುಕ ಬೇಕಾದರೆ ಪಡಬೇಕಾದ ಶ್ರಮವನ್ನು ತೋರಿಸಲಿದ್ದು, ಓರ್ವ ಕಲಾವಿನ ಬದುಕಿನ ಸುತ್ತವೇ ಕಥೆ ಸುತ್ತಲಿದೆ. 'ಮಹಾನ್​ ಕಲಾವಿದ' ಚಿತ್ರಕ್ಕೆ ಅಭಯ್​ ಚಂದ್ರ ಆ್ಯಕ್ಷನ್​ ಕಟ್​ ಹೇಳಿದ್ದು, ಅವರೇ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದಾರೆ. ಇನ್ನು ಭರತ್​. ಬಿ ಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ದಿಲೀಪ್​ ರಾಜ್​ ಜೊತೆ ಜಾಹ್ನವಿ ರಾಯಲ್​ ಹಾಗೂ ಪಲ್ಲವಿ ರಾಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ.

  English summary
  Hitler Kalyana serial hero Dilip raj play lead role in new movie Mahan Kalavida.Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X