HMPV ವೈರಸ್ ಭೀತಿ? ಚೀನಾದ ವಾಸ್ತವ ಚಿತ್ರಣ ತೆರೆದಿಟ್ಟ ಅನುಷಾ ರೈ

ಕೋವಿಡ್ 19 ಬಳಿಕ ಇದೀಗ HMPV ವೈರಸ್ ಭೀತಿ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು, ಗುಜರಾತ್‌ ಒಂದು, ತಮಿಳುನಾಡಿನಲ್ಲಿ 2 ಪ್ರಕರಣ ವರದಿಯಾಗಿದೆ. ನಗರದಲ್ಲಿ ಇಬ್ಬರು ಮಕ್ಕಳಲ್ಲಿ ಚೀನಾದ ವೈರಸ್ ಪತ್ತೆ ಆಗಿದೆ. ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ 3 ತಿಂಗಳ ಮಗು ಹಾಗೂ 8 ತಿಂಗಳ ಮಗುವಿಗೆ ವೈರಸ್ ಸೋಂಕು ತಲುಲಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ದೇಶದ ಮಾಧ್ಯಮಗಳಲ್ಲಿ ಈ ವೈರಸ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಚೀನಾದಲ್ಲಿ ಇದರಿಂದ ಭಾರೀ ಸಮಸ್ಯೆ ಎದುರಾಗಿದೆ ಎನ್ನುವ ಅರ್ಥದಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಆದರೆ ಅದೇ ದೇಶದಲ್ಲಿರುವ ಕೆಲವರು ಯಾರು ಹೆದರಬೇಡಿ ಅಂತಕ ಸಮಸ್ಯೆ ಏನು ಇಲ್ಲ ಎಂದು ವಿಡಿಯೋ ಮಾಡಿ ಹೇಳುತ್ತಿದ್ದಾರೆ.

HMPV virus scare in China and Hong Kong Actress Anusha Rai gives a live report from there

ಸದ್ಯ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ ಚೀನಾ ಪಕ್ಕದ ಹಾಂಕಾಂಗ್ ಪ್ರವಾಸದಲ್ಲಿದ್ದಾರೆ. ಆಕೆ ಕೂಡ ಈ ಬಗ್ಗೆ ವೀಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. HMPV ವೈರಸ್ ಕಾರಣಕ್ಕೆ ಅಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎನ್ನುವ ಅರ್ಥದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಸಾಕಷ್ಟು ಜನ ಕನ್ನಡಿಗರು ಕೂಡ ಈ ಬಗ್ಗೆ ವೀಡಿಯೋ ಮಾಡಿ ಸ್ಪಷ್ಟನೆ ನೀಡುತ್ತಿದ್ದಾರೆ.

ಅನುಷಾ ಮಾತನಾಡಿ "ಸಾಕಷ್ಟು ಜನ ನನಗೆ ಮೆಸೇಜ್ ಮಾಡಿ ಹೇಳುತ್ತಿದ್ದೀರಾ? ನೀವು ಚಿತ್ರದಲ್ಲಿ ಇದ್ದೀರಾ? ಎಚ್ಚರ ಅಂತ. ನಾನು ಇರುವುದು ಹಾಂಕಾಂಗ್‌ನಲ್ಲಿ. ಇಲ್ಲಿ ಎಲ್ಲರೂ ನಾರ್ಮಲ್ ಆಗಿದ್ದಾರೆ. ಯಾವುದೇ ಪ್ಯಾಂಡಮಿಕ್ ಕಾಣಿಸುತ್ತಿಲ್ಲ. ಯಾರು ಕೂಡ ಮಾಸ್ಕ್ ಹಾಕಿಕೊಳ್ಳುವುದು, ಅಥವಾ ಟೆನ್ಷನ್‌ನಲ್ಲಿ ಇರುವಂತಹ ಪರಿಸ್ಥಿತಿ ಇಲ್ಲ, ಜನಜೀವನ ಸಹಜವಾಗಿಯೇ ಇದೆ" ಎಂದು ಹೇಳಿದ್ದಾರೆ.

ಎಲ್ಲರೂ ನನ್ನ ಬಗ್ಗೆ ವಿಚಾರಿಸುತ್ತಿದ್ದೀರಾ? ಅಲ್ಲಿರಬೇಡಿ ಬೇಗ ಬನ್ನಿ ಅಂತ ಹೇಳುತ್ತಿದ್ದೀರಾ. ಕಂಡಿತ ಬರ್ತೀನಿ. ಟೆನ್ಷನ್‌ ಬೇಡ. ನಾವು ಭಾರತೀಯರು ಸದಾ ಸೇಫ್ ಆಗಿ ಇರ್ತೀವಿ. ಅಂತಹ ಸಮಸ್ಯೆ ಇಲ್ಲಿ ಕಾಣುತ್ತಿಲ್ಲ" ಎಂದು ಅನುಷಾ ವಿವರಿಸಿದ್ದಾರೆ. ಚೀನ ಬಳಿಕ ಹಾಂಕಾಂಗ್‌ಗೂ HMPV ವೈರಸ್ ಲಗ್ಗೆ ಇಟ್ಟಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಲ್ಲಿ ಅಂತಹ ಪರಿಸ್ಥಿತಿ ಇದ್ದಂತೆ ಕಾಣುತ್ತಿಲ್ಲ.

ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಷ್ಟೇನೂ ಗಂಭೀರ ಸಮಸ್ಯೆ ತಂದೊಡ್ಡುವುದಿಲ್ಲ, ಕೋವಿಡ್ ವೈರಸ್ ಅಷ್ಟು ಅಪಾಯಕಾರಿ ಅಲ್ಲ ಎನ್ನಲಾಗ್ತಿದೆ. ಅಂದಹಾಗೆ ಇದು ಹೊಸ ವೈರಸ್ ಕೂಡ ಅಲ್ಲ, 2001ರಲ್ಲೇ ಈ ವೈರಸ್ ಕಾಣಿಸಿಕೊಂಡಿತ್ತು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ವೈರಸ್ ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ, ಮಾಸ್ಕ್ ಕಡ್ಡಾಯವಲ್ಲ. ಮುಂಜಾಗ್ರತೆ ವಹಿಸಿದರೆ ಸಾಕು ಎಂದು ಸಚಿವರು ಹೇಳಿದ್ದಾರೆ.

HMPV ವೈರಸ್ ಆತಂಕ ಶುರುವಾಗುತ್ತಿದ್ದಂತೆ ಚಿತ್ರರಂಗಕ್ಕೆ ಭೀತಿ ಶುರುವಾಗಿದೆ. ಕಾರಣ ಕೋವಿಡ್ ಪ್ಯಾಂಡಮಿಕ್ ಸಮಯದಲ್ಲಿ ಪದೇ ಪದೆ ಲಾಕ್‌ಡೌನ್ ಘೋಷಣೆ ಆಗಿತ್ತು. ಮುಖ್ಯವಾಗಿ ಜನ ಒಂದೆಡೆ ಹೆಚ್ಚು ಸೇರಬಾರದು ಎನ್ನಲಾಗಿತ್ತು. ಹಾಗಾಗಿ ಚಿತ್ರಮಂದಿರಗಳನ್ನು ತಿಂಗಳುಗಳ ಕಾಲ ಮುಚ್ಚುವಂತಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತಾ ಎಂದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಒಂದು ವೇಳೆ ಚಿತ್ರಮಂದಿರ ಮುಚ್ಚುವಂತೆ ಹೇಳಿದರೆ ಅದನ್ನು ಪಾಲಿಸಲೇಬೇಕು ಎಂದು ಚಿತ್ರಮಂದಿರದ ಮಾಲೀಕರು ಹೇಳುತ್ತಿದ್ದಾರೆ. ಆದರೆ ಅಂತಹ ಗಂಭೀರ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಚಿತ್ರಮಂದಿರ ಮುಚ್ಚಿ ಸಿನಿಮಾ ಸರಿಯಾಗಿ ಪ್ರದರ್ಶನ ಕಾಣದೇ ಚಿತ್ರರಂಗ ಸಾಕಷ್ಟು ನಷ್ಟ ಎದುರಿಸುವಂತಾಗಿತ್ತು.

More from Filmibeat

English summary
HMPV virus scare: Bigg Boss fame Anusha Rai reacts from Hong Kong during her tour;
Read more about: sandalwood bigg boss hmpv virus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X