ಅಂದು ಹೇಳಿದ್ದನ್ನು ಮಾಡಿ ತೋರಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್; ವೀಡಿಯೋ ವೈರಲ್

ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಬಹಳ ಮಹತ್ವಾಕಾಂಕ್ಷೆ ಉಳ್ಳವರು. ದೊಡ್ಡ ದೊಡ್ಡ ಕನಸು ಕಂಡು, ಅದನ್ನು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಾರೆ. ಯಶ್ ಪರಿಶ್ರಮ, ನಿರ್ಧಾರಗಳ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಮೂಲಕ ಮತ್ತೊಂದು ದಾಖಲೆಗೆ ಅವರು ಮುಂದಾಗಿದ್ದಾರೆ.

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡದ ಜೊತೆಗೆ ಇಂಗ್ಲೀಷ್‌ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಇಂತಹ ಪ್ರಯತ್ನ ನಡೆದಿಲ್ಲ. ಒಂದು ಬಹುಕೋಟಿ ವೆಚ್ಚದ ಕಮರ್ಷಿಯಲ್ ಚಿತ್ರವನ್ನು ಭಾರತದ ಭಾಷೆ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಕಟ್ಟಿಕೊಟ್ಟಿರಲಿಲ್ಲ.

Hollywood Actor Kyle Paul shares his working experience in Yash s Toxic

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಹಣ ಹೂಡಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ ಕಿಯಾರಾ ಅದ್ವಾನಿ ನಟಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಯನತಾರಾ ಬಣ್ಣ ಹಚ್ಚಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಯೂರೋಪಿನ ಕಲಾವಿದರನ್ನು ಕೂಡ 'ಟಾಕ್ಸಿಕ್' ಚಿತ್ರಕ್ಕಾಗಿ ಬಳಸಿಕೊಳ್ಳಲಾಗ್ತಿದೆ. ಯೂರೋಪಿಯನ್ ಭಾಷೆಗಳಿಗೆ ಸಿನಿಮಾ ಡಬ್ ಮಾಡುವ ಲೆಕ್ಕಾಚಾರ ನಡೀತಿದೆ. ಈಗಾಗಲೇ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಹಾಗೂ ನಟಿ ನಟಾಲಿ ಬರ್ನ್ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಇದೀಗ ಮತ್ತೊಬ್ಬ ಹಾಲಿವುಡ್ ನಟ ಕೈಲ್ ಪಾಲ್ 'ಟಾಕ್ಸಿಕ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ.

Take a Poll

ನಟ ಕೈಲ್ ಪಾಲ್ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕಾಗಿ ಕನ್ನಡ ಕಲಿತು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆ ವೀಡಿಯೋವನ್ನು ಯಶ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದು ನಿಜಕ್ಕೂ ಅದ್ಭುತ ಅನುಭವ ಎಂದು ತಿಳಿಸಿದ್ದಾರೆ.

"ಟಾಕ್ಸಿಕ್ ಚಿತ್ರದಲ್ಲಿ ಬಹಳ ಭಾವನಾತ್ಮಕ ಸನ್ನಿವೇಶಗಳಿವೆ. ಭಾರತದ ಭಾಷೆ ಕನ್ನಡದಲ್ಲಿ ಮಾತನಾಡಿದ್ದೆನೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ನಿರ್ದೇಶಕಿ ಬಹಳ ಸಹಕಾರ ಕೊಟ್ಟರು. ಬಹಳ ಸಮಯ ತಗೊಂಡು ನಟಿಸೋಕೆ ಹೇಳಿದರು, ಸದಾ ಹುರಿದುಂಬಿಸುತ್ತಿದ್ದರು" ಎಂದು ಹಾಲಿವುಡ್ ನಟ ಕೈಲ್ ಪಾಲ್ ಹೇಳಿದ್ದಾರೆ.

ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಮ್ಮ ಹೇಳಿದಂತೆ ಮಾಡುತ್ತಿದ್ದಾರೆ. ವಿದೇಶಿಗರು ಕನ್ನಡ ಮಾತನಾಡುವಂತೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಿಂದೆ ನೀವು ಬಾಲಿವುಡ್‌ಗೆ ಹೋಗ್ತೀರಾ? ಎಂದು ಯಶ್ ಅವರನ್ನು ಕೇಳಿದಾಗ "ನಾನು ಎಲ್ಲೂ ಹೋಗಿಲ್ಲ, ನಾನು ಇರೋ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೀನಿ ಹೋಗಿ" ಎಂದು ಮಾಧ್ಯಮದವರಿಗೆ ಹೇಳಿದ್ದರು. ಅದೇ ರೀತಿ 'ಟಾಕ್ಸಿಕ್' ಚಿತ್ರದ ಮೂಲಕ ಬಾಲಿವುಡ್ ಅಲ್ಲ, ಹಾಲಿವುಡ್ ಕಲಾವಿದರು, ತಂತ್ರಜ್ಞರು ಬೆಂಗಳೂರಿಗೆ ಬರುವಂತೆ ಮಾಡಿದ್ದಾರೆ.

ಮೊದಲಿನಿಂದಲೂ ಯಶ್ ಇದೇ ರೀತಿ ಬಹಳ ಕಾನ್ಫಿಡೆಂಟ್ ಆಗಿ ಮಾತನಾಡುತ್ತಾ ಬರ್ತಿದ್ದಾರೆ. ಪರಭಾಷಿಕರು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡಬೇಕು ಅಂತಹ ಸಿನಿಮಾ ಮಾಡ್ತೀನಿ ಎಂದಿದ್ದರು. ಅದರಂತೆ 'KGF' ಸಿನಿಮಾ ಬಂದು ಧೂಳೆಬ್ಬಿಸಿತ್ತು. ವಿದೇಶಿಗರು ಸಲಾಂ ರಾಕಿ ಭಾಯ್ ಎಂದಿದ್ದರು. 'KGF'-2 ಬಳಿಕ ಮುಂದೇನು? ಎಂದು ಅವರ ಆಪ್ತರು ಕೂಡ ಕೇಳಿದ್ದರಂತೆ. ಆ ರೀತಿ ಕೇಳಿದವರಿಗೆಲ್ಲಾ ತಕ್ಕ ಉತ್ತರ ಕೊಡಲು 'ಟಾಕ್ಸಿಕ್' ಎಂಬ ಅದ್ಧೂರಿ ಸಿನಿಮಾ ಮಾಡ್ತಿದ್ದಾರೆ.

More from Filmibeat

English summary
Toxic Actor Yash fulfilling his promises
Read more about: toxic yash hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X