ಯಶ್ 'ಟಾಕ್ಸಿಕ್' ಅಖಾಡಕ್ಕೆ 'ಮ್ಯಾಡ್‌ಮ್ಯಾಕ್ಸ್', 'ಡಾರ್ಕ್‌ನೈಟ್' ತಂತ್ರಜ್ಞರು ಎಂಟ್ರಿ!

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಊಹಿಸಿದ್ದಕ್ಕಿಂತ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಅದಕ್ಕಾಗಿ ಚಿತ್ರತಂಡ ಭಾರೀ ಕಸರತ್ತು ನಡೆಸುತ್ತಿದೆ. ತೆರೆಮರೆಯಲ್ಲಿ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಯಾವುದೇ ಸುಳಿವು ಬಿಟ್ಟುಕೊಡದೇ ಸಿನಿಮಾ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆ.

ಇಷ್ಟು ದಿನ 'ಟಾಕ್ಸಿಕ್' ಸಿನಿಮಾ ಸ್ಟಾರ್‌ಕಾಸ್ಟ್ ಬಗ್ಗೆ ಗುಸುಗುಸು ಕೇಳಿಬರ್ತಿತ್ತು. ಆದರೆ ಚಿತ್ರತಂಡ ಯಾವುದನ್ನು ಸ್ಪಷ್ಟಪಡಿಸಲಿಲ್ಲ. ಇದೀಗ ತಂತ್ರಜ್ಞರ ಬಗ್ಗೆ ಊಹಾಪೋಹ ಶುರುವಾಗಿದೆ. ಹಾಲಿವುಡ್ ತಂತ್ರಜ್ಞರು ದಕ್ಷಿಣ ಭಾರತ ಸಿನಿಮಾಗಳಲ್ಲಿ ಕೆಲಸ ಮಾಡುವುದು ಹೊಸ ವಿಚಾರವೇನಲ್ಲ. ದೊಡ್ಡ ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡಿರುವ ಟಾಪ್ ತಂತ್ರಜ್ಞರನ್ನು 'ಟಾಕ್ಸಿಕ್' ಟೀಂ ಕನ್ನಡಕ್ಕೆ ಕರ್ಕೊಂಡ್ ಬರ್ತಿದೆ ಎನ್ನುವ ಗುಸುಗುಸು ಶುರುವಾಗಿದೆ.

Hollywood Dark Night Mad Max technians for Yash starrer toxic

ಇಂಗ್ಲೀಷ್ ಸೇರಿದಂತೆ ಯೂರೋಪ್ ಭಾಷೆಗಳಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಪ್ಲ್ಯಾನ್ ಮಾಡಲಾಗುತ್ತಿದೆ. ಡ್ರಗ್ಸ್ ಮಾಫಿಯಾ ಎನ್ನುವ ಯೂನಿವರ್ಸಲ್ ಸಬ್ಜೆಕ್ಟ್ ಅನ್ನು ಬಹಳ ದೊಡ್ಡಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಸದ್ಯ ಚಿತ್ರದ ಸ್ಟಂಟ್ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಟೀಂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಚಿತ್ರಕ್ಕೆ ಕೆಲಸ ಮಾಡಿದ್ದ ಸ್ಟೀವ್ ಗ್ರಿಫಿನ್ ಹಾಗೂ ಡಾರ್ಕ್ ನೈಟ್ ಚಿತ್ರದ ರುವಾರಿ ಟಾಮ್ ಸ್ಟ್ರೂಥರ್ಸ್ ಸೆಕೆಂಡ್ ಯೂನಿಟ್ ಡೈರೆಕ್ಟರ್ ಆಗಿ 'ಟಾಕ್ಸಿಕ್' ತಂಡ ಸೇರುತ್ತಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಇನ್ನು 'ಡಾರ್ಕ್ ನೈಟ್' ಸೀರಿಸ್, 'ಆಕ್ವಾಮನ್- 2', 'ಮ್ಯಾಡ್ ಮ್ಯಾಕ್ಸ್' ಚಿತ್ರಗಳಿಗೆ ಪ್ರೀ ವಿಷ್ಯುವಲ್‌ಸೈಷನ್ ತಂಡದಲ್ಲಿ ಕೆಲಸ ಮಾಡಿದ್ದ ಕಾರ್ಲೋಸ್ ಕ್ಯಾಸ್ಟಿಲ್ಲೊ, ಡೇಸಿಯೊ ಕ್ಯಾಬಲೆರೊ (ಸ್ಟಂಟ್ ಡಬಲ್), ಕ್ಲೌಡಿಯಾ ಹೈಂಜ್, ಶಿರಾಜ್ ಯಾಸಿನ್ ಕೂಡ 'ಟಾಕ್ಸಿಕ್' ಚಿತ್ರಕ್ಕೆ ಕೆಲಸ ಮಾಡುತ್ತಾರೆ ಎನ್ನಲಾಗ್ತಿದೆ.

'ಟಾಕ್ಸಿಕ್' ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಮ್ಮನಾಗಿದ್ದಾರೆ. ಡಿಸೆಂಬರ್ 8ರಂದು ಟೈಟಲ್ ಟೀಸರ್ ರಿಲೀಸ್ ಬಳಿಕ ಚಿತ್ರತಂಡ ಸೈಲೆಂಟ್ ಆಗಿತ್ತು. ಅಧಿಕೃತವಾಗಿ ಯಾವುದೇ ಅಪ್‌ಡೇಟ್ ನೀಡಲಿಲ್ಲ. ಚಿತ್ರದಲ್ಲಿ ಕರೀನಾ ಕಪೂರ್, ಕೈರಾ ಅದ್ವಾನಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಾಗಲೂ ಚಿತ್ರತಂಡ ಮೌನವಹಿಸಿತ್ತು. ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸುತ್ತಿರುವ ಬಗ್ಗೆ ಮಾತ್ರ ನಿರ್ಮಾಪಕರು ಪ್ರತಿಕ್ರಿಯಿಸಿದ್ದರು. ಇನ್ನುಳಿದಂತೆ ಯಾವುದೇ ಮಾಹಿತಿ ಅಧಿಕೃತವಾಗಿ ಬರಲಿಲ್ಲ.

Hollywood Dark Night Mad Max technians for Yash starrer toxic

ಚಿತ್ರದಲ್ಲಿ ಯಶ್ ಸಹೋದರಿ ಆಗಿ ಕರೀನಾ ಕಪೂರ್ ಮೊದಲಿಗೆ ನಟಿಸಲು ಒಪ್ಪಿದ್ದರು, ಬಳಿಕ ಡೇಟ್ಸ್ ಸಮಸ್ಯೆಯಿಂದ ಹಿಂದೆ ಸರಿದರು ಎನ್ನಲಾಗಿತ್ತು. ಕರೀನಾ ಜಾಗಕ್ಕೆ ನಯನತಾರಾ ಎಂಟ್ರಿ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ನಾಯಕಿಯಾಗಿ ಕೈರಾ ಅದ್ವಾನಿ ಕನ್ಫರ್ಮ್ ಎನ್ನಲಾಗ್ತಿದೆ. ಆದರೆ ಯಾವುದನ್ನೂ ಚಿತ್ರತಂಡ ಹೇಳಲಿಲ್ಲ. ಇದೀಗ ಸಿನಿಮಾ ಅಪ್‌ಡೇಟ್ ಸಿಗುವ ಸಮಯ ಬರ್ತಿದೆ ಎನ್ನುವ ಚರ್ಚೆ ಶುರುವಾಗ್ತಿದೆ.

ಜುಲೈ 31ಕ್ಕೆ ಕೈರಾ ಅದ್ವಾನಿ ಹುಟ್ಟುಹಬ್ಬ. ಅದೇ ಸಮಯದಲ್ಲಿ ಆಕೆ 'ಟಾಕ್ಸಿಕ್' ಸಿನಿಮಾ ಭಾಗವಾಗುವ ಬಗ್ಗೆ ಅಪ್‌ಡೇಟ್ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಅಂದಹಾಗೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಮಾನ್‌ಸ್ಟರ್ ಮೈಂಡ್ಸ್ ಬ್ಯಾನರ್‌ನಲ್ಲಿ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಯಶ್ ಸ್ಟೈಲಿಶ್ ಡಾನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Buzz; Hollywood top technians work for kannada film toxic;
Read more about: filmibeat original yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X