»   » ಸುದೀಪ್ ಮನೆಗೆ ಭೇಟಿ ನೀಡಿದ ಹಾಲಿವುಡ್ ನಿರ್ದೇಶಕ.!

ಸುದೀಪ್ ಮನೆಗೆ ಭೇಟಿ ನೀಡಿದ ಹಾಲಿವುಡ್ ನಿರ್ದೇಶಕ.!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯದಲ್ಲೇ ಹಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಆದ್ರೆ, ನಿಖರವಾಗಿ ಈ ಚಿತ್ರ ಯಾವಾಗ ಆರಂಭವಾಗಲಿದೆ ಎಂಬ ವಿಷ್ಯ ಗೌಪ್ಯವಾಗಿದೆ.

ಹೀಗಿರುವಾಗ, ಹಾಲಿವುಡ್ ನಿರ್ದೇಶಕ ಬೆಂಗಳೂರಿಗೆ ಆಗಮಿಸಿದ್ದು, ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ.

ಅಷ್ಟಕ್ಕೂ, ಸುದೀಪ್ ಯಾವಾಗ ಹಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿಲಿದ್ದಾರೆ? ಯಾವ ಗೆಟಪ್ ನಲ್ಲಿ ಮಿಂಚಲಿದ್ದಾರೆ ಎಂದು ಮುಂದೆ ಓದಿ.....

ಸುದೀಪ್ ಮನೆಗೆ ಹಾಲಿವುಡ್ ನಿರ್ದೇಶಕ

ಹಾಲಿವುಡ್ ನಿರ್ದೇಶಕ ಎಡ್ಡಿ ಆರ್ಯ ಅವರು ಸುದೀಪ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇವರಿಬ್ಬರು ಭೇಟಿ ಮಾಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟ ಕಿಚ್ಚ ಸುದೀಪ್ ಗೆ ಇದು 'ಸ್ವರ್ಗಕ್ಕೆ ಕಿಚ್ಚು ಹಚ್ಚು'ವ ಸಮಯ!

ಇಲ್ಲೇ ಫೋಟೋಶೂಟ್ ಮಾಡುವ ಸಾಧ್ಯತೆ.!

ಇಷ್ಟೋತ್ತಿಗಾಲೇ ಹಾಲಿವುಡ್ ಚಿತ್ರಕ್ಕಾಗಿ ಸುದೀಪ್ ಫೋಟೋಶೂಟ್ ಮಾಡಬೇಕಿತ್ತು. ಆದ್ರೆ, ಸುದೀಪ್ ಬಿಜಿಯಿದ್ದ ಕಾರಣ ಫೋಟೋಶೂಟ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಹಾಲಿವುಡ್ ನಿರ್ದೇಶಕರೇ ತಮ್ಮ ತಂಡದ ಜೊತೆ ಬೆಂಗಳೂರಿಗೆ ಬಂದಿದೆ. ಸೋ, ಎಲ್ಲ ಅಂದುಕೊಂಡಂತೆ ಆದ್ರೆ, ಇಲ್ಲಿಯೇ ಫೋಟೋಶೂಟ್ ಮಾಡುವ ಸಾಧ್ಯತೆ ಇದೆ.

ಹಾಲಿವುಡ್ ನಲ್ಲಿ ಕಿಚ್ಚ ಸುದೀಪ್ ನಟಿಸುವ ಸಿನಿಮಾ ಯಾವುದು.?

ಯಾವ ಸಿನಿಮಾ?

ಆಸ್ಟ್ರೇಲಿಯಾ ಮೂಲದ ಎಡ್ಡಿ ಆರ್ಯ ಎಂಬ ನಿರ್ದೇಶಕರ 'ರೈಸನ್' ಸಿನಿಮಾದಲ್ಲಿ ಸುದೀಪ್ ನಟಿಸುವುದು ಪಕ್ಕಾ ಆಗಿದೆ. 'ರೈಸನ್' ಚಿತ್ರದಲ್ಲಿ ಸುದೀಪ್ ಕಮಾಂಡೋ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.

ಶೂಟಿಂಗ್ ಆರಂಭವಾಗಿದೆ

'ರೈಸನ್' ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಆದ್ರೆ, ಸುದೀಪ್ ಅವರ ಭಾಗದ ಚಿತ್ರೀಕರಣ ಇನ್ನು ಆರಂಭವಾಗಿಲ್ಲ. ಆಸ್ಟ್ರೇಲಿಯಾದಲ್ಲಿ ಕಿಚ್ಚನ ಚಿತ್ರೀಕರಣ ಮಾಡಲಿದ್ದು, ಯಾವಾಗ ಹೋಗ್ತಾರೆ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಾಯಬೇಕಿದೆ

ಸದ್ಯಕ್ಕೆ, ಬಿಗ್ ಬಾಸ್ ಕನ್ನಡ 5, ದಿ ವಿಲನ್, ಪೈಲ್ವಾನ್ ಸಿನಿಮಾಗಳಲ್ಲಿ ನಟಿಸುತ್ತಿರುವ ಸುದೀಪ್, ಇವುಗಳ ಜೊತೆಯಲ್ಲೇ ಹಾಲಿವುಡ್ ಸಿನಿಮಾ ಮಾಡಬೇಕಿದೆ. ಹಾಲಿವುಡ್ ಚಿತ್ರದ ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಫಾಲೋ ಮಾಡುತ್ತೀರಿ.....

English summary
Hollywood Director Eddie Arya Meets Sudeep at JP Nagar Home and Discuss About Sudeep Hollywood Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada