For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ ಬಯೋಪಿಕ್ ಚಿತ್ರಕ್ಕಾಗಿ ಬಂದ ಹಾಲಿವುಡ್ ಮೇಕಪ್ ಕಲಾವಿದ

  |

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ನಡುವೆ ಜಯಲಲಿತಾ ಬಯೋಪಿಕ್ ಕುರಿತು ಸುದ್ದಿಯೊಂದು ಹರಿದಾಡಿತ್ತು.

  ಚಿತ್ರದ ನಿರ್ಮಾಪಕರು ಬಂಡವಾಳ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 55 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಬೇಕಾಗಿದೆ. ಅವರ ಬಳಿ ಅಷ್ಟೊಂದು ಹಣ ಇಲ್ಲ. ಹಾಗಾಗಿ, ಪ್ರಾಜೆಕ್ಟ್ ಸದ್ಯಕ್ಕೆ ನಿಂತಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ಇದೀಗ, ಈ ಬಗ್ಗೆ ನಿರ್ಮಾಪಕ ವಿಷ್ಣು ಇಂದುರಿ ಸ್ಪಷ್ಟನೆ ನೀಡಿದ್ದು, ಇದೆಲ್ಲವೂ ವದಂತಿ ಅಷ್ಟೆ ಎಂದಿದ್ದಾರೆ.

  ''ತಲೈವಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರತಂಡ ಮೈಸೂರಿನಲ್ಲಿ ಶೂಟಿಂಗ್ ಗಾಗಿ ಪ್ಲಾನ್ ಮಾಡುತ್ತಿದೆ. ದೀಪಾವಳಿ ಹೊತ್ತಿಗೆ ಚಿತ್ರೀಕರಣ ಆರಂಭಿಸುತ್ತೇವೆ'' ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

  ಇನ್ನು ಕಂಗನಾ ಅವರು ಈ ಚಿತ್ರದಲ್ಲಿ ವಯಸ್ಸಿನ ಆಧಾರದ ಮೇಲೆ ನಾಲ್ಕು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ, ಕಂಗನಾ ವಿಶೇಷವಾದ ಮೇಕ್ ಓವರ್ ಮಾಡಿಕೊಳ್ಳಲಿದ್ದಾರೆ. ಅದಕ್ಕಾಗಿ ಹಾಲಿವುಡ್ ಮೇಕಪ್ ಕಲಾವಿದ ಜಸೇನ್ ಕಾಲಿನ್ಸ್ ಬಂದಿದ್ದಾರೆ. ಈ ಹಿಂದೆ ಕ್ಯಾಪ್ಟನ್ ಮಾರ್ವೆಲ್, ಬ್ಲೇಡ್ ರನ್ನರ್ ಮತ್ತು ಹಂಗರ್ ಗೇಮ್ಸ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

  ತಲೈವಿ ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಜಯಲಲಿತಾ ಅವರ ಬಾಲ್ಯ, ಸಿನಿಮಾ ಕ್ಷೇತ್ರ ಹಾಗೂ ರಾಜಕೀಯಕ್ಕೆ ಸಂಬಂಧಪಟ್ಟಂತೆ ಜರ್ನಿ ಕಥೆ ಮಾಡಲಾಗಿದೆಯಂತೆ.

  ವಿಶೇಷ ಅಂದ್ರೆ ತಲೈವಿ ಚಿತ್ರದಲ್ಲಿ ಎಂಜಿಆರ್ ಪಾತ್ರವನ್ನ ಅರವಿಂದ ಸ್ವಾಮಿ ನಿರ್ವಹಿಸಲಿದ್ದಾರೆ. ಜಯಯಲಲಿತಾ ಅವರ ಜೀವನದಲ್ಲಿ ಎಂಜಿಆರ್ ಬಹಳ ಪ್ರಮುಖವಾದ ವ್ಯಕ್ತಿಯಾಗಿದ್ದಾರೆ.

  English summary
  Hollywood Makeup artist Jason Collins Joins With Thalaivi Team for kangana ranaut makeover.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X