ಹೊಂಬಾಳೆ ಫಿಲಂಸ್ 12ನೇ ಚಿತ್ರ: ತಲೆಗೆ ಹುಳ ಬಿಟ್ಕೊಂಡ ಫ್ಯಾನ್ಸ್

'ಕೆಜಿಎಫ್ ಚಾಪ್ಟರ್ 2' ಬಿಡುಗಡೆ ಬಗ್ಗೆ ಅಪ್‌ಡೇಟ್ ಕೊಡಿ ಎಂದು ಚಿತ್ರಪ್ರೇಮಿಗಳು ವರ್ಷಗಳಿಂದ ಕಾಯ್ತಿದ್ದಾರೆ. ಆದರೆ, ಹೊಂಬಾಳೆ ಫಿಲಂಸ್ ಮಾತ್ರ ಒಂದರ ಹಿಂದೆ ಮತ್ತೊಂದರಂತೆ ಹೊಸ ಹೊಸ ಚಿತ್ರಗಳನ್ನು ಘೋಷಣೆ ಮಾಡ್ತಾನೆ ಇದೆ. ಕೊರೊನಾ ಬಿಕ್ಕಟ್ಟಿನಿಂದ ಕಂಗಲಾಗಿರುವ ಈ ಸಮಯದಲ್ಲಿ ಹೊಂಬಾಳೆ ಫಿಲಂಸ್ ಮೂರು ಹೊಸ ಪ್ರಾಜೆಕ್ಟ್ ಪ್ರಕಟಿಸಿ ಅಚ್ಚರಿ ಮೂಡಿಸಿತ್ತು. ಈಗ ಇನ್ನೊಂದು ಹೊಸ ಚಿತ್ರ ಕೈಗೆತ್ತಿಕೊಂಡಿದೆ.

Recommended Video

ಮತ್ತೊಂದು ಹೊಸ ಚಿತ್ರ ಘೋಷಣೆ ಮಾಡಿದ KGF ನಿರ್ಮಾಪಕ

ನಿರ್ಮಾಪಕ ವಿಜಯ್ ಕಿರಗಂದೂರ್ ಸಾರಥ್ಯದ ಹೊಂಬಾಳೆ ಫಿಲಂಸ್ ತನ್ನ 12ನೇ ಪ್ರಾಜೆಕ್ಟ್ ಘೋಷಣೆ ಮಾಡಿದೆ. ಸೆಪ್ಟೆಂಬರ್ 22 ರಂದು ಈ ಚಿತ್ರದ ಹೆಸರೇನು? ಹೀರೋ ಯಾರು? ನಿರ್ದೇಶಕ ಯಾರು ಎಂದು ಮಾಹಿತಿ ಸಿಗುವ ಸಾಧ್ಯತೆ. ಸದ್ಯಕ್ಕೆ ಈ ಚಿತ್ರ ಯಾರ ಜೊತೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

12ನೇ ಸಿನಿಮಾದ ಬಗ್ಗೆ ಪ್ರಕಟಣೆ ಮಾಡಿರುವ ಹೊಂಬಾಳೆ ಬಾಳೆ ಎಲೆಯ ಪೋಸ್ಟರ್ ರಿಲೀಸ್ ಮಾಡಿದೆ. ಆ ಪೋಸ್ಟರ್ ಮೇಲೆ ''ಪ್ರತಿಯೊಬ್ಬರಲ್ಲೂ ಹಸಿವಿದೆ. ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ'' ಎಂದು ಬರೆದಿದೆ. ಇದು ಮುಂದಿನ ಚಿತ್ರಕ್ಕೆ ಕೊಟ್ಟಿರುವ ಸುಳಿವು. ಅಷ್ಟಕ್ಕೂ, ಈ ಸಿನಿಮಾದ ಹೀರೋ ಯಾರಾಗಬಹುದು? ಮುಂದೆ ಓದಿ...

ಸೆಪ್ಟೆಂಬರ್ 22ಕ್ಕೆ ಹೆಚ್ಚಿನ ಮಾಹಿತಿ

ಸೆಪ್ಟೆಂಬರ್ 22ಕ್ಕೆ ಹೆಚ್ಚಿನ ಮಾಹಿತಿ

ಕೆಜಿಎಫ್, ರಾಜಕುಮಾರ, ಮಾಸ್ಟರ್ ಪೀಸ್, ಯುವರತ್ನ ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಈಗ 12ನೇ ಪ್ರಾಜೆಕ್ಟ್ ಘೋಷಣೆ ಮಾಡಿದ್ದು, ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೆಪ್ಟೆಂಬರ್ 22 ರಂದು ಮಧ್ಯಾಹ್ನ 3 ಗಂಟೆಗೆ ತಿಳಿಸಲಾಗುತ್ತದೆ.

ರಿಷಬ್ ಶೆಟ್ಟಿ ಜೊತೆ ಕಾಂತಾರ

ರಿಷಬ್ ಶೆಟ್ಟಿ ಜೊತೆ ಕಾಂತಾರ

ಆಗಸ್ಟ್ ತಿಂಗಳಲ್ಲಿ ಹೊಂಬಾಳೆ ಫಿಲಂಸ್ 11ನೇ ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರವನ್ನು ನಿರ್ದೇಶಕ ರಿಷಬ್ ಸೆಟ್ಟಿ ನಟಿಸಿ, ನಿರ್ದೇಶಿಸುತ್ತಿದ್ದಾರೆ. ಅಧಿಕೃತವಾಗಿ ಚಿತ್ರ ಸೆಟ್ಟೇರಿದ್ದು, ಶೂಟಿಂಗ್ ಸಹ ಪ್ರಾರಂಭಿಸಿದೆ. ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಪ್ತಮಿ ಗೌಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಡಾ ರಾಜ್ ಕುಮಾರ್ ಜೊತೆ 'ಒಂದು ಮುತ್ತಿನ ಕಥೆ' ಸಿನಿಮಾದಲ್ಲಿ ಅಭಿನಯಿಸಿದ್ದ ಅರ್ಚನಾ ಬಹಳ ವರ್ಷದ ನಂತರ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ರಕ್ಷಿತ್ ಜೊತೆ 'ರಿಚರ್ಡ್ ಆಂಟೋನಿ'

ರಕ್ಷಿತ್ ಜೊತೆ 'ರಿಚರ್ಡ್ ಆಂಟೋನಿ'

ಹೊಂಬಾಳೆ ಫಿಲಂಸ್ 10ನೇ ಸಿನಿಮಾ ರಿಚರ್ಡ್ ಅಂಟೋನಿ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವುದು ಈ ಚಿತ್ರದ ವಿಶೇಷ. 'ಉಳಿದವರು ಕಂಡಂತೆ' ಚಿತ್ರದ ಪ್ರಿಕ್ವೆಲ್ ಎಂದು ಹೇಳಲಾಗಿದೆ. ಬಹಳ ವರ್ಷದ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡ್ತಿರುವುದು ಹೆಚ್ಚಿನ ಕುತೂಹಲ ಮೂಡಿಸಿದೆ.

ತಲೆಗೆ ಹುಳ ಬಿಟ್ಕೊಂಡ ಅಭಿಮಾನಿಗಳು

ತಲೆಗೆ ಹುಳ ಬಿಟ್ಕೊಂಡ ಅಭಿಮಾನಿಗಳು

ಹೊಂಬಾಳೆ ಫಿಲಂಸ್ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳನ್ನು ಘೋಷಿಸುತ್ತಿರುವುದನ್ನು ಕಂಡ ಚಿತ್ರಪ್ರೇಮಿಗಳು ತಲೆಗೆ ಹುಳ ಬಿಟ್ಕೊಂಡಿದ್ದಾರೆ. ಮೊದಲು ಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್ ಕೊಡ್ರಿ, ಆಮೇಲೆ ಹೊಸ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಏಕಕಾಲದಲ್ಲಿ ಆರೇಳು ಚಿತ್ರಗಳನ್ನು ನಿರ್ಮಿಸುತ್ತಿರುವ ಹೊಂಬಾಳೆಯ ಆರ್ಥಿಕ ಸ್ಥಿತಿಗತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಹೊಸ ಸಿನಿಮಾ ಘೋಷಣೆಗೆ ಹಲವರು ಶುಭಕೋರಿದ್ದಾರೆ. ಇದೆಲ್ಲರ ನಡುವೆ 12ನೇ ಚಿತ್ರಕ್ಕೆ ಹೀರೋ ಯಾರಾಗಬಹುದು ಎಂಬ ಯೋಚನೆಯೂ ಶುರುವಾಗಿದೆ. ಇದಕ್ಕೆ ಸೆಪ್ಟೆಂಬರ್ 22 ರಂದು ಅಧಿಕೃತವಾಗಿ ಉತ್ತರ ಸಿಗಲಿದ್ದು, ಅಲ್ಲಿಯವರೆಗೂ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಹೊಂಬಾಳೆ 12ನೇ ಸಿನಿಮಾ ಸುದ್ದಿಯಲ್ಲಿರಲಿದೆ.

More from Filmibeat

English summary
Hombale Films 12th project title and first look to release on September 22nd at 3:10 PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X