BREAKING: ಈ ವರ್ಷ ಇಲ್ಲ 'ಕೆಜಿಎಫ್ 2': ಹೊಸ ಬಿಡುಗಡೆ ದಿನಾಂಕ ಘೋಷಣೆ

ಭಾರತದ ನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಬಿಡುಗಡೆ ಬಗ್ಗೆ ಸಾಕಷ್ಟು ಅನಿಶ್ಚತತೆ ಇತ್ತು. ಆದರೆ ಈಗ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ಹೊಸ ಬಿಡುಗಡೆ ದಿನಾಂಕವನ್ನು 'ಕೆಜಿಎಫ್ 2' ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಘೋಷಿಸಿದೆ.

Recommended Video

KGF 2 ನಿಂದ ಎಲ್ಲಾ ಟಿವಿ ದಾಖಲೆ 'ಜೀ ಕನ್ನಡ' ಹೆಸರಿಗೆ ಬರೋದು ಪಕ್ಕಾ ಆಯ್ತು

'ಕೆಜಿಎಫ್ 2' ಸಿನಿಮಾವು ಜುಲೈ 16ಕ್ಕೆ ಬಿಡುಗಡೆ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಈ ಹಿಂದೆ ಹೇಳಿತ್ತು. ಆದರೆ ಕೊರೊನಾ ಎರಡನೇ ಅಲೆಯ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿತ್ತು. ಹೊಸ ಬಿಡುಗಡೆ ದಿನಾಂಕ ಈಗಷ್ಟೆ ಚಿತ್ರತಂಡ ಘೋಷಿಸಿದೆ.

ಯಶ್‌ ಅವರ ರಾಖಿಭಾಯ್ ಅವತಾರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಈ ವರ್ಷ ಸಾಧ್ಯವಾಗುವುದಿಲ್ಲ. 'ಕೆಜಿಎಫ್ 2' ಸಿನಿಮಾವನ್ನು ಮುಂದಿನ ವರ್ಷ ಏಪ್ರಿಲ್ 14 ರಂದು ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಮ್ಸ್ ಇಂದು (ಆಗಸ್ಟ್ 22) ಟ್ವೀಟ್ ಮಾಡಿದೆ.

Hombale Films Announced That KGF 2 Movie Release On April 14, 2022

'ಕೆಜಿಎಫ್ 2' ಸಿನಿಮಾವು ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಅದನ್ನು ಸುಳ್ಳು ಮಾಡಿರುವ ಹೊಂಬಾಳೆ ಫಿಲಮ್ಸ್ ಸಿನಿಮಾ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.

ಇತರ ಭಾಷೆಯ ಹಲವು ಸಿನಿಮಾಗಳು ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ನಂತರ ಜನವರಿಯ ಸಂಕ್ರಾಂತಿಗೂ ಸಾಕಷ್ಟು ಸಿನಿಮಾಗಳು ಸಾಲುಗಟ್ಟಿವೆ. ಅಲ್ಲದೆ ಕೊರೊನಾ ಮೂರನೇ ಅಲೆಯ ಬಗ್ಗೆಯೂ ಆತಂಕವಿದೆ. ಈ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು ಸಿನಿಮಾ ಬಿಡುಗಡೆಯನ್ನು ಮುಂದಿನ ವರ್ಷದ ಏಪ್ರಿಲ್‌ಗೆ ಮುಂದೂಡಿದೆ ಚಿತ್ರತಂಡ. ಅದೂ ಅಂಬೇಡ್ಕರ್ ಜಯಂತಿಯಂದು ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ.

ಜುಲೈ 16ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಸಿನಿಮಾ ಸಂಪೂರ್ಣವಾಗಿ ರೆಡಿಯಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳು ಬಂದ್ ಆಗಿದ್ದಕಾರಣ ಸಿನಿಮಾ ಬಿಡುಗಡೆ ಸಾಧ್ಯವಾಗಲಿಲ್ಲ. ಆಗ ಟ್ವೀಟ್ ಮಾಡಿದ್ದ ಚಿತ್ರತಂಡ, ''ಚಿತ್ರಮಂದಿರವು ತುಂಬಿದ್ದಾಗ ಮಾತ್ರವೇ ಬರುತ್ತೇವೆ'' ಎಂದು ಹೇಳಿದ್ದರು. ಆ ಮೂಲಕ ಚಿತ್ರಮಂದಿರಗಳ ಮೇಲಿನ ಸಂಪೂರ್ಣ ನಿರ್ಬಂಧ ತೆಗೆದರಷ್ಟೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದಿತ್ತು ಚಿತ್ರತಂಡ.

Hombale Films Announced That KGF 2 Movie Release On April 14, 2022

'ಕೆಜಿಎಫ್ 2' ಸಿನಿಮಾವು ಭಾರತದ ಅತ್ಯಂತ ಹೆಚ್ಚು ನಿರೀಕ್ಷಿತ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಕೆಜಿಎಫ್ ಚಾಪ್ಟರ್ 1' ಮುಂದುವರೆದ ಭಾಗವಾದ ಈ ಸಿನಿಮಾದಲ್ಲಿ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ರವೀನಾ ಟಂಡನ್, ಪ್ರಕಾಶ್ ರೈ ಇನ್ನೂ ಹಲವು ಹೊಸ ನಟರು ಪವರ್‌ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಸಂಗೀತವನ್ನು ರವಿ ಬಸ್ರೂರು ನೀಡಿದ್ದಾರೆ. ಸಿನಿಮಾದ ದಕ್ಷಿಣ ಭಾರತ ಟಿವಿ ಹಕ್ಕುಗಳನ್ನು ಇತ್ತೀಚೆಗಷ್ಟೆ ಜೀ ಚಾನೆಲ್‌ಗೆ ಮಾರಾಟ ಮಾಡಲಾಗಿದೆ. ಆಡಿಯೋ ಹಕ್ಕನ್ನು ದಾಖಲೆ ಬೆಲೆಗೆ ಆನಂದ್ ಆಡಿಯೋ ಖರೀದಿಸಿದೆ.

More from Filmibeat

English summary
Hombale films announced that KGF 2 movie will release on April 14, 2022. earlier movie scheduled to release on July 16 but due to corona movie release postponed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X