For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಬಳಿಕ ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೊಂದು ಹೊಸ ಸಿನಿಮಾ; ನಾಯಕ ಯಾರು?

  |

  ಕನ್ನಡ ಸಿನಿಮಾರಂಗದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೊಂದು ಹೊಸ ಸಿನಿಮಾ ಬರ್ತಿದೆ. ಇತ್ತೀಚಿಗೆ ಸಲಾರ್ ಸಿನಿಮಾ ಅನೌನ್ಸ್ ಮಾಡಿದ ಬೆನ್ನಲ್ಲೇ ಮತ್ತೊಂದು ಸಿನಿಮಾ ಘೋಷಣೆ ಮಾಡುವುದಾಗಿ ಸಿನಿಮಾತಂಡ ಬಹಿರಂಗ ಪಡಿಸಿದೆ.

  ಸಲಾರ್ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲಂಸ್ | Filmibeat Kannada

  ಕೆಜಿಎಫ್ ಸಿನಿಮಾ ನಿರ್ಮಾಣ ಮಾಡುವ ಮೂಲಕ ಇಡೀ ದೇಶದಾದ್ಯಂತ ಗಮನ ಸೆಳೆದಿರುವ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾದ ಮೇಲೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. 7ನೇ ಸಿನಿಮಾದಲ್ಲಿ ಪ್ರಭಾಸ್ ನಾಯಕ ಎಂದು ಘೋಷಣೆ ಮಾಡಿ ಹೊಂಬಾಳೆ ಫಿಲ್ಮ್ಸ್ ಕನ್ನಡಿಗರಿಂದ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೀಗ ಅನೌನ್ಸ್ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ನಾಯಕ ಯಾರಾಗಲಿದ್ದಾರೆ ಎನ್ನುವುದು ಕಾತರ ಹೆಚ್ಚಾಗಿದೆ.

  Big News: ಪ್ರಭಾಸ್ ಹೀರೋ ಎಂದು ಘೋಷಿಸಿದ ಹೊಂಬಾಳೆ ಫಿಲಂಸ್

  ಡಿಸೆಂಬರ್ 17ಕ್ಕೆ ಹೊಸ ಸಿನಿಮಾ ಘೋಷಣೆ

  ಡಿಸೆಂಬರ್ 17ಕ್ಕೆ ಹೊಸ ಸಿನಿಮಾ ಘೋಷಣೆ

  ಅಂದಹಾಗೆ ಹೊಂಬಾಳೆ ಫಿಲ್ಮ್ಸ್ ಬಹಿರಂಗ ಮಾಡಿರುವ ಪೋಸ್ಟರ್ ನಲ್ಲಿ ಮುಂದಿನ ಸಿನಿಮಾವನ್ನು ಘೋಷಣೆ ಮಾಡಲು ಥ್ರಿಲ್ ಆಗಿದ್ದೇವೆ. ಡಿಸಂಬರ್ 17, ಬೆಳಗ್ಗೆ 11.59ಕ್ಕೆ ಘೋಷಣೆ ಮಾಡುತ್ತೇವೆ' ಎಂದು ಹೇಳಿದ್ದಾರೆ. ಇದೀಗ ಅಭಿಮಾನಿಗಳ ಚಿತ್ತ ಡಿಸೆಂಬರ್ 17ರ ಮೇಲಿದೆ.

  ಹೊಂಬಾಳೆ ಫಿಲ್ಮ್ಸ್ ನಿರ್ಮಾಣ 8ನೇ ಸಿನಿಮಾದಲ್ಲಿ ಅಪ್ಪು ನಾಯಕ?

  ಹೊಂಬಾಳೆ ಫಿಲ್ಮ್ಸ್ ನಿರ್ಮಾಣ 8ನೇ ಸಿನಿಮಾದಲ್ಲಿ ಅಪ್ಪು ನಾಯಕ?

  ಅಂದಹಾಗೆ ಸದ್ಯ ಅನೌನ್ಸ್ ಮಾಡುತ್ತಿರುವ ಹೊಸ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಅವರ 8ನೇ ಸಿನಿಮಾವಾಗಿದೆ. 7ನೇ ಸಿನಿಮಾ ಸಲಾರ್ ಇತ್ತೀಚಿಗಷ್ಟೆ ಘೋಷಣೆ ಮಾಡಿದ್ದಾರೆ. ಸಲಾರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. 8ನೇ ಸಿನಿಮಾ ಕನ್ನಡದಲ್ಲಿ ಮಾತ್ರ ತಯಾರಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಹೊಂಬಾಳೆ ಫಿಲ್ಮ್ಸ್ ನ 8ನೇ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಮುಖ್ಯ ಪಾತ್ರದಲ್ಲಿ ಖ್ಯಾತ ನಟ?

  ಹ್ಯಾಟ್ರಿಕ್ ಸಿನಿಮಾ

  ಹ್ಯಾಟ್ರಿಕ್ ಸಿನಿಮಾ

  ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಹ್ಯಾಟ್ರಿಕ್ ಸಿನಿಮಾಗೆ ತಯಾರಿ ನಡೆಯುತ್ತಿದೆ. ಯುವರತ್ನ ಸಿನಿಮಾ ಬಳಿಕ ಮತ್ತೆ ಈ ಜೋಡಿ ಮತ್ತೆ ಒಂದಾಗುತ್ತಿದೆ. ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾ ಮುಗಿಸುತ್ತಿದ್ದಂತೆ ಸಂತೋಷ್ ಆನಂದ್ ರಾಮ್ ನಿೊರ್ದೇಶನದ ಹಸ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇಬ್ಬರ ಹ್ಯಾಟ್ರಿಕ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

  ಇಂಡಿಯನ್ ಸಿನಿಮಾ ಎಂದು ಅರೇಬಿಯಾದ ಹೆಸರು ಯಾಕೆ ಇಟ್ಟಿದ್ದೀರಾ? ಹೊಂಬಾಳೆ ಫಿಲ್ಮ್ಸ್ ಗೆ ಸಂಬರ್ಗಿ ಪ್ರಶ್ನೆ

  ಶ್ರೀಮುರಳಿ ಜೊತೆ ಸಿನಿಮಾ

  ಶ್ರೀಮುರಳಿ ಜೊತೆ ಸಿನಿಮಾ

  ಡಿಸಂಬರ್ 17ರಂದು ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿರುವ ಕಾರಣ, ಡಿಸೆಂಬರ್ 17 ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟಿದ ದಿನ ಹಾಗಾಗಿ ಹೊಂಬಾಳೆ ಫಿಲ್ಮ್ಸ್ ನ 8ನೇ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಶ್ರೀಮುರಳಿ ಸದ್ಯ ಮದಗಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  After Salaar Hombale Films announcing their new film on December 17 at 11.59 am.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X