ಹೊಂಬಾಳೆ ಫಿಲ್ಮ್ಸ್‌ಯಿಂದ ಬಿಗ್ ಅನೌನ್ಸ್‌ಮೆಂಟ್: ಲಿಸ್ಟ್‌ನಲ್ಲಿ ಯಶ್, ಪ್ರಭಾಸ್!

'ಕೆಜಿಎಫ್' ಬಳಿಕ 'ಕೆಜಿಎಫ್ 2' ಮೇಲೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಆದರೆ ಎಲ್ಲಾ ನಿರೀಕ್ಷೆಗಳನ್ನು ಮೀರಿ 'ಕೆಜಿಎಫ್ ಚಾಪ್ಟರ್ 2' ಸೂಪರ್ ಹಿಟ್ ಲಿಸ್ಟ್ ಸೇರಿದೆ. ಯಶ್ ಅಭಿನಯದ ಕನ್ನಡ ಈ ಸಿನಿಮಾದ ಮೂಲಕ ಸೌತ್ ಸಿನಮಾರಂಗಕ್ಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಇದಕ್ಕೆ ಮುಖ್ಯ ಕಾರಣ ಇಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆ.

'ಕೆಜಿಎಫ್ 2' ಸಿನಿಮಾ ಕನ್ನಡ ಮಾತ್ರವಲ್ಲ, ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಕಿರೀಟ ಇದ್ದ ಹಾಗೆ. ಅಷ್ಟರ ಮಟ್ಟಿಗೆ ವಿಶ್ವವೇ ಇತ್ತ ತಿರುಗಿ ನೋಡುವಂತೆ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಗಳಿಕೆ ವಿಚಾರದಲ್ಲಿ 'ಕೆಜಿಎಫ್ 2' ಜಾದು ಮಾಡಿದೆ. ಸಿನಿಮಾಗೆ ಎಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಖರ್ಚು ಮಾಡಲಾಗಿದೆಯೋ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಸಿನಿಮಾ ಲಾಭ ತಂದು ಕೊಟ್ಟಿದೆ.

ಹೊಂಬಾಳೆ ಸಿನಿಮಾ ಒಂದೊಂದೇ ಹೆಜ್ಜೆಯನ್ನು ಮುಂದೆ ಇಡುತ್ತಿದೆ. ಇತ್ತೀಚೆಗೆ ಬಾಲಿವುಡ್‌ಗೆ ಹಾರುವ ಬಗ್ಗೆಯೂ ಸ್ಪಷ್ಟನೆ ಸಿಕ್ಕಿದೆ. ಈಗ ಮತ್ತೊಂದು ದೊಡ್ಡ ಯೋಜನೆಯನ್ನು ರಿವೀಲ್ ಮಾಡಲು ಮುಂದಾಗಿದ್ದು, ಜೂನ್ 10ರಂದು ದೊಡ್ಡ ಸರ್ಪ್ರೈಸ್ ಕೊಡಲಿದೆ.

ಜೂನ್ 10ಕ್ಕೆ ಹೊಂಬಾಳೆ ಹೊಸ ಯೋಜನೆ!

ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ಈಗಾಗಲೆ ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ. ಈಗ ಮತ್ತೊಂದು ಯೋಜನೆಯನ್ನು ಕೈಗೊಳ್ಳಲು ಹೊಂಬಾಳೆ ಸಂಸ್ಥೆ ಮುಂದಾಗಿದೆ. ಹೊಂಬಾಳೆ ವತಿಯಿಂದ ನಾಳೆ (ಜೂನ್ 10) ದೊಡ್ಡ ಸುದ್ದಿಯೊಂದು ಬರಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಹೊಂಬಾಳೆ ಪೇಜ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಂಡ ವಿಜಯ್ ಕಿರಗಂದೂರು!

ಚಿತ್ರತಂಡ ಟ್ವೀಟ್ ಮಾಡಿರುವ ಪೋಸ್ಟರ್ ಸಾಕಷ್ಟು ಕುತೂಹಲಗಳನ್ನು ಮೂಡಿಸಿದ್ದು, ನಾನಾ ಊಹೆಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಪೋಸ್ಟರ್ ಹಂಚಿಕೊಂಡು ಗ್ಲೋವ್ಸ್ ಆಫ್, ಆ್ಯಕ್ಷನ್ ಆನ್, ಹಂಟ್ ಬಿಗಿನ್ಸ್ ಎಂದು ಬರೆಯಲಾಗಿದೆ. ಜೊತೆಗೆ ಪೋಸ್ಟರ್‌ನಲ್ಲಿ 'ಸ್ವ್ಯಾಗ್, ಪಂಚ್, ಸ್ವಿಂಗ್' ಎಂದು ಬರೆಯಲಾಗಿದೆ. ಈ ಸಾಲುಗಳು ದೊಡ್ಡ ಮಟ್ಟದಲ್ಲಿ ಏನು ಹೇಳಲಿದೆ ಎನ್ನುವುದು ಮಾತ್ರ ಗೊತ್ತಾಗುತ್ತದೆ.

'ಸಲಾರ್' ಬಗ್ಗೆ ಅಪ್ಡೇಟ್ ಸಿಗುತ್ತಾ?

'ಸಲಾರ್' ಬಗ್ಗೆ ಅಪ್ಡೇಟ್ ಸಿಗುತ್ತಾ?

ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲಿ ಪ್ರಭಾಸ್ ಅಭಿನಯದ 'ಸಲಾರ್' ಕೂಡ ಒಂದು. ಇನ್ನು ಈಗ ರಿವೀಲ್ ಮಾಡಿರುವ ಪೋಸ್ಟರ್ ಕೂಡ 'ಸಲಾರ್' ಶೇಡ್‌ನಲ್ಲಿ ಇದೆ. ಹಾಗಾಗಿ 'ಸಲಾರ್' ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಬಹುದು ಎನ್ನಲಾಗಿದೆ. ಇನ್ನು ಆ್ಯಕ್ಷನ್ ಶುರು ಎನ್ನುವುದು ಈ ಚಿತ್ರಕ್ಕೆ ಮಾತ್ರ ಹೊಂದಾಣಿಯಾಗುತ್ತದೆ. ಹಾಗಾಗಿ ಪ್ರಭಾಸ್ ಅಭಿಮಾನಿಗಳು 'ಸಲಾರ್' ಬಗ್ಗೆ ಅಪ್ಡೇಟ್ ನೀಡುವಂತೆ ಕೋರುತ್ತಿದ್ದಾರೆ.

ಯಶ್ ಸಿನಿಮಾ ಅಥವಾ ಬಾಲಿವುಡ್!

ಯಶ್ ಸಿನಿಮಾ ಅಥವಾ ಬಾಲಿವುಡ್!

ಇನ್ನು ನಟ ಯಶ್ ಮುಂದಿನ ಸಿನಿಮಾ ಜೂನ್ 3ಕ್ಕೆ ಪ್ರಕಟಗೊಳ್ಳಲಿದೆ ಎನ್ನಲಾಗಿತ್ತು. ಆದರೆ ಅದು ಆಗಿಲ್ಲ. ಇನ್ನು ಯಶ್ ಮುಂದಿನ ಚಿತ್ರವನ್ನು ಹೊಂಬಾಳೆ ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿ ಕೂಡ ಇದೆ. ಹಾಗಾಗಿ ಯಶ್ ಮುಂದಿನ ಸಿನಿಮಾ ಪ್ರಕಟ ಮಾಡುವ ಸಾಧ್ಯತೆ ಕೂಡ ಇದೆ. ಇನ್ನು ಬಾಲಿವುಡ್‌ಗೆ ಎಂಟ್ರಿ ಕೊಡಲು ಹೊಂಬಾಳೆ ಸಿನಿಮಾ ಸಿದ್ಧವಾಗಿದ್ದು, ಬಾಲಿವುಡ್ ಚಿತ್ರದ ಪ್ರಕಟಣೆಯನ್ನು ತಳ್ಳಿ ಹಾಕುವಂತಿಲ್ಲ.

More from Filmibeat

English summary
Hombale Films Big Announcement On June 10th About Next Film, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X