'ಕೆಜಿಎಫ್', 'ಸಲಾರ್' ಬಳಿಕ ಮತ್ತೆ ದೊಡ್ಡ ಚಿತ್ರಕ್ಕೆ ಕೈಹಾಕಿದ ಹೊಂಬಾಳೆ: ತಮಿಳು ನಿರ್ದೇಶಕಿ ಸಾರಥ್ಯ

ಮಾಸ್ ಎಂಟರ್ಟೈನರ್‌ಗಳು, ಸದಬಿರುಚಿಯ ಸಿನಿಮಾ ಎಲ್ಲವನ್ನೂ ಸಮತೋಲಿತವಾಗಿ ನೀಡುತ್ತಿರುವ ಹೊಂಬಾಳೆ ಫಿಲಮ್ಸ್ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

Recommended Video

ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಲ್ಲ | Nani | Ante Sundaraniki

ಕನ್ನಡ ಚಿತ್ರರಂಗದ ಮಾರುಕಟ್ಟೆ ಸ್ವತಃ ಚಿತ್ರರಂಗದವರೇ ಸಂಕುಚಿತ ಯೋಚನೆ ಹೊಂದಿರುವ ಸಮಯದಲ್ಲಿ 'ಕೆಜಿಎಫ್' ಸಿನಿಮಾಕ್ಕೆ ಭಾರಿ ಬಂಡವಾಳ ಹಾಕಿ, ದೊಡ್ಡ ಲಾಭವನ್ನೂ ಗಳಿಸಿ ಕನ್ನಡ ಚಿತ್ರರಂಗದ ಶಕ್ತಿಯನ್ನು ಇತರರಿಗೆ ಪರಿಚಯ ಮಾಡಿಕೊಟ್ಟಿರುವ ಜೊತೆಗೆ, ಕನ್ನಡ ಚಿತ್ರರಂಗದ ಮಾರುಕಟ್ಟೆಯ ವಿಸ್ತಾರವನ್ನು ನಮ್ಮವರಿಗೆ ಪರಿಚಯಿಸಿದ್ದು ಹೊಂಬಾಳೆ.

'ಕೆಜಿಎಫ್ 2' ಸಿನಿಮಾದ ಯಶಸ್ಸು ಗಳಿಸುತ್ತಿರುವ ವೇಳೆಯಲ್ಲಿಯೇ 'ಸಲಾರ್' ಅಂಥಹಾ ದೊಡ್ಡ ಬಜೆಟ್ ಸಿನಿಮಾದ ಜೊತೆಗೆ 'ರಾಘವೇಂದ್ರ ಸ್ಟೋರ್ಸ್', 'ಕಾಂತಾರ', 'ರಿಚರ್ಡ್ ಆಂಟೊನಿ' ಅಂಥಹಾ ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ಇದರ ಜೊತೆಗೆ ಇದೀಗ ಮತ್ತೊಂದು ದೊಡ್ಡ ಬಜೆಟ್ ಸಿನಿಮಾವನ್ನು ಹೊಂಬಾಳೆ ಇಂದಷ್ಟೆ ಘೋಷಿಸಿದೆ.

ತಮಿಳಿನ ನಿರ್ದೇಶಕಿ ಸುಧಾ ಕೊಂಗರಾ ಅವರೊಟ್ಟಿಗೆ ಹೊಸ ಸಿನಿಮಾವನ್ನು ಹೊಂಬಾಳೆ ಘೋಷಿಸಿದೆ. ಈ ಹಿಂದೆ 'ಸೂರರೈ ಪೊಟ್ರು' ಹಾಗೂ 'ಇರುದಿ ಸುತ್ರು' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಧಾ ಕೊಂಗರಾ ಇದೀಗ ಹೊಂಬಾಳೆ ಜೊತೆ ಕೈಜೋಡಿಸಿದ್ದು, ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರಲಿದೆ ಎನ್ನಲಾಗುತ್ತಿದೆ.

ಸತ್ಯ ಘಟನೆ ಆಧರಿಸಿದ ಸಿನಿಮಾ

ಸತ್ಯ ಘಟನೆ ಆಧರಿಸಿದ ಸಿನಿಮಾ

ಈ ಬಗ್ಗೆ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲಮ್ಸ್, ''ಕೆಲವು ಸತ್ಯ ಘಟನೆಗಳನ್ನು ಹೇಳಲೇ ಬೇಕು ಮತ್ತು ಸರಿಯಾಗಿ ಹೇಳಬೇಕು. ಹೊಂಬಾಳೆ ಫಿಲಮ್ಸ್ ನಮ್ಮ ಮುಂದಿನ ಸಿನಿಮಾವನ್ನು ನಿರ್ದೇಶಕಿ ಸುಧಾ ಕೊಂಗರ ಜೊತೆ ಮಾಡುತ್ತಿದ್ದೇವೆ ಎಂದು ಘೋಷಿಸಲು ಸಂತಸ ಪಡುತ್ತೇವೆ. ನಾವು ಈಗ ಹೇಳಲು ಹೊರಟಿರುವ ಕತೆ ಭಾರತದ ಗಮನವನ್ನು ಸೆಳೆಯಲಿದೆ, ನಮ್ಮ ಹಿಂದಿನ ಸಿನಿಮಾಗಳಂತೆ'' ಎಂದಿದೆ. ಸತ್ಯ ಘಟನೆಯೊಂದನ್ನು ಇಟ್ಟುಕೊಂಡು ಸುಧಾ ಕೊಂಗರ ಸಿನಿಮಾ ಮಾಡಲಿದ್ದು, ಈ ಸಿನಿಮಾದ ನಾಯಕ-ನಾಯಕಿಯನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದಂತೂ ಪಕ್ಕಾ ಎನ್ನಲಾಗುತ್ತಿದೆ.

ತಮಿಳು-ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣ

ತಮಿಳು-ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣ

ಮತ್ತೊಂದು ಮಾಹಿತಿ ಪ್ರಕಾರ, ಸಿನಿಮಾ ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ವಾಗಲಿದ್ದು, ತಮಿಳಿನ ಸ್ಟಾರ್ ನಟ ತಮಿಳಿನಲ್ಲಿಯೂ, ಕನ್ನಡದ ಸ್ಟಾರ್ ನಟರೊಬ್ಬರು ಕನ್ನಡ ಭಾಷೆಯಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾದ ಇನ್ನಿತರೆ ಮಾಹಿತಿಗಳು ಹೊರಬೀಳಲಿದೆ.

ನಾಲ್ಕು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ

ನಾಲ್ಕು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ

ಹೊಂಬಾಳೆ ಫಿಲಮ್ಸ್‌ ನಿರ್ಮಾಣದ 'ಕಾಂತಾರ' ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ಟ್ರೇಲರ್ ಭಾರಿ ಕುತೂಹಲ ಕೆರಳಿಸಿದೆ. ರಿಷಬ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸಿ ನಟನೆ ಸಹ ಮಾಡಿದ್ದು, ಸಿನಿಮಾವು ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಜಗ್ಗೇಶ್ ನಟಿಸಿ ಸಂತೋಶ್ ಆನಂದ್‌ ರಾಮ್ ನಿರ್ದೇಶನ ಮಾಡಿರುವ 'ರಾಘವೇಂದ್ರ ಸ್ಟೋರ್' ಟೀಸರ್ ಸಹ ಬಿಡುಗಡೆ ಆಗಿದ್ದು, 'ಕಾಂತಾರ' ಬಳಿಕ 'ರಾಘವೇಂದ್ರ ಸ್ಟೋರ್ಸ್' ಬಿಡುಗಡೆ ಆಗುವ ಸಾಧ್ಯತೆ ಇದೆ. ಆ ಬಳಿಕ ಪ್ರಭಾಸ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನದ ಮಾಡಿರುವ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದೆ. ಅಂತಿಮವಾಗಿ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಲಿರುವ 'ರಿಚರ್ಡ್ ಆಂಟೊನಿ' ಸಿನಿಮಾ ಬಿಡುಗಡೆ ಆಗಲಿದೆ.

'ದ್ವಿತ್ವ' ಸಿನಿಮಾ ಘೋಷಿಸಿದ್ದ ಹೊಂಬಾಳೆ

'ದ್ವಿತ್ವ' ಸಿನಿಮಾ ಘೋಷಿಸಿದ್ದ ಹೊಂಬಾಳೆ

ಕೆಲ ತಿಂಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಹೊಂಬಾಳೆ ಫಿಲಮ್ಸ್ ಸಿನಿಮಾ ಒಂದನ್ನು ಘೋಷಿಸಿತ್ತು. 'ಲೂಸಿಯಾ' ಖ್ಯಾತಿಯ ಪವನ್ ನಿರ್ದೇಶನದ 'ದ್ವಿತ್ವ' ಸಿನಿಮಾಕ್ಕೆ ಹೊಂಬಾಳೆ ಬಂಡವಾಳ ಹೂಡಲಿತ್ತು. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು, ಫೊಟೊಶೂಟ್ ನಡೆದು, ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಪುನೀತ್ ಇಲ್ಲವಾದರು ಹಾಗಾಗಿ ಆ ಸಿನಿಮಾ ಹಾಗೆಯೇ ಉಳಿದಿದೆ. ಆ ಸಿನಿಮಾವನ್ನು ಯಾರು ಮುಂದುವರೆಸುತ್ತಾರೆ ಕಾದು ನೋಡಬೇಕಿದೆ.

More from Filmibeat

English summary
Hombale films doing movie with Tamil director Sudha Kongara. Hombale said that movie is based on real incident. Cast yet to be announced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X