For Quick Alerts
  ALLOW NOTIFICATIONS  
  For Daily Alerts

  Big News: ಪ್ರಭಾಸ್ ಹೀರೋ ಎಂದು ಘೋಷಿಸಿದ ಹೊಂಬಾಳೆ ಫಿಲಂಸ್

  |

  ನಿರೀಕ್ಷೆಯಂತೆ ಹೊಂಬಾಳೆ ಫಿಲಂಸ್ ತಮ್ಮ ಮುಂದಿನ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ತೆಲುಗು ನಟ ಪ್ರಭಾಸ್ ಜೊತೆ ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುವುದು ಸಹ ಖಚಿತವಾಗಿದೆ.

  ಈ ಹಿಂದೆ ಹೇಳಿದಂತೆ ಡಿಸೆಂಬರ್ 2 ರಂದು ಮಧ್ಯಾಹ್ನ 2 ಗಂಟೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಪ್ರಾಜೆಕ್ಟ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಚಿತ್ರಕ್ಕೆ ಸಲಾರ್ ಎಂದು ಹೆಸರಿಟ್ಟು, ''THE MOST VIOLENT MEN.. CALLED ONE MAN.. THE MOST VIOLENT'' ಎಂದು ಅಡಿ ಬರಹ ನೀಡಲಾಗಿದೆ. ಮುಂದೆ ಓದಿ...

  ಎಷ್ಟು ಭಾಷೆಯಲ್ಲಿ ಬರಲಿದೆ ಗೊತ್ತಾ?

  ಎಷ್ಟು ಭಾಷೆಯಲ್ಲಿ ಬರಲಿದೆ ಗೊತ್ತಾ?

  ಸದ್ಯಕ್ಕೆ ಸಲಾರ್ ಸಿನಿಮಾ ಎಷ್ಟು ಭಾಷೆಯಲ್ಲಿ ಬರಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಭಾರತೀಯ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಇದು ಭಾರತೀಯ ಚಿತ್ರ ಎಂದು ಪ್ರಚಾರ ಮಾಡಲಾಗುತ್ತಿದೆ.

  ಪುನೀತ್-ಸಂತೋಷ್ ಆನಂದ್ ರಾಮ್ 'ಹ್ಯಾಟ್ರಿಕ್' ಪ್ರಾಜೆಕ್ಟ್ ಖಚಿತ ಪಡಿಸಿದ ಕಾರ್ತಿಕ್ ಗೌಡಪುನೀತ್-ಸಂತೋಷ್ ಆನಂದ್ ರಾಮ್ 'ಹ್ಯಾಟ್ರಿಕ್' ಪ್ರಾಜೆಕ್ಟ್ ಖಚಿತ ಪಡಿಸಿದ ಕಾರ್ತಿಕ್ ಗೌಡ

  ಜನವರಿಯಿಂದ ಚಿತ್ರೀಕರಣ ಆರಂಭ

  ಜನವರಿಯಿಂದ ಚಿತ್ರೀಕರಣ ಆರಂಭ

  ಸಲಾರ್ ಚಿತ್ರದ ಬಗ್ಗೆ ನಟ ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದು, ''ಇಂದು ನಾನು ಸಲಾರ್ ಜಗತ್ತಿಗೆ ಪ್ರವೇಶಿಸುತ್ತಿದ್ದೇನೆ. ಜನವರಿ ತಿಂಗಳಿನಿಂದ ಚಿತ್ರೀಕರಣ ಆರಂಭಿಸುತ್ತಿರುವುದಾಗಿ'' ತಿಳಿಸಿದ್ದಾರೆ.

  ಕೆಜಿಎಫ್ ಕೊನೆಯ ಹಂತದ ಶೂಟಿಂಗ್

  ಕೆಜಿಎಫ್ ಕೊನೆಯ ಹಂತದ ಶೂಟಿಂಗ್

  ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೊನೆಯ ಹಂತಕ್ಕೆ ಬಂದಿದೆ. ಸದ್ಯ ಹೈದರಾಬಾದ್‌ನಲ್ಲಿ ಯಶ್ ಮತ್ತು ಸಂಜಯ್ ದತ್ ಭಾಗದ ಶೂಟಿಂಗ್ ನಡೆಯುತ್ತಿದೆ. ಈ ತಿಂಗಳಿನಿಂದಲ್ಲಿ ಕೆಜಿಎಫ್ ಸಂಪೂರ್ಣವಾಗಿ ಮುಗಿಸಲಿರುವ ಪ್ರಶಾಂತ್ ನೀಲ್ ಹೊಸ ವರ್ಷದಿಂದ 'ಸಲಾರ್' ಆರಂಭಿಸಲಿದ್ದಾರೆ.

  ಹೊಂಬಾಳೆ ಫಿಲಂಸ್ ಘೋಷಣೆ ಮಾಡಲಿರುವ ಪ್ರಾಜೆಕ್ಟ್ ಇದೇನಾ?ಹೊಂಬಾಳೆ ಫಿಲಂಸ್ ಘೋಷಣೆ ಮಾಡಲಿರುವ ಪ್ರಾಜೆಕ್ಟ್ ಇದೇನಾ?

  ಆದಿಪುರುಷ್ ಸಿನಿಮಾ

  ಆದಿಪುರುಷ್ ಸಿನಿಮಾ

  ಸಲಾರ್ ಚಿತ್ರದ ಪೋಸ್ಟರ್ ನೋಡಿದ ಮೇಲೆ ಈ ಪ್ರಾಜೆಕ್ಟ್‌ ಮೇಲೆ ಕುತೂಹಲ ಹೆಚ್ಚಾಗಿದೆ. ಕೆಜಿಎಫ್ ನಿರ್ದೇಶಕನ ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರವನ್ನು ಬಹಳ ರಾ ಆಗಿ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಮತ್ತೊಂದೆಡೆ ಪ್ರಭಾಸ್ ನಟನೆಯ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಾಗ್ ಅಶ್ವಿನ್ ಜೊತೆಗಿನ ಪ್ರಾಜೆಕ್ಟ್ ಆರಂಭದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದಿಪುರುಷ್ ಸಿನಿಮಾ 2022ರಲ್ಲಿ ಬಿಡುಗಡೆಯಾಗುವುದಾಗಿ ತಿಳಿಸಿದೆ.

  English summary
  Hombale Films Next Movie Announced with Prabhas and Prashanth Neel, Titled as Salaar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X