For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಹೊಂಬಾಳೆ ಫಿಲ್ಮ್ಸ್; ನಾಯಕ ಯಾರು?

  |

  ಕನ್ನಡ ಸಿನಿಮಾರಂಗದ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಕೂಡ ಒಂದು. ಕನ್ನಡದ ಈ ನಿರ್ಮಾಣ ಸಂಸ್ಥೆ ಗಡಿಗೂ ಮೀರಿ ಸದ್ದು ಮಾಡುತ್ತಿದೆ ಎಂದರೆ ಕಾರಣ ಕೆಜಿಎಫ್ ಸಿನಿಮಾ. ಹೌದು, ಕೆಜಿಎಫ್ ಸಿನಿಮಾ ಮಾಡಿ ಭಾರತೀಯ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾಗಿದೆ.

  ಯುವರತ್ನ, KGF ನಂತರ ಮತ್ತೊಂದು ದೊಡ್ಡ ಸಿನಿಮಾ ಮಾಡಲು ಮುಂದಾದ ಹೊಂಬಾಳೆ ಫಿಲಂಸ್

  ಈ ಬಗ್ಗೆ ಖುದ್ದು ನಿರ್ಮಾಣ ಸಂಸ್ಥೆಯೇ ಬಹಿರಂಗ ಪಡಿಸಿದೆ. ಹೊಂಬಾಳೆ ಫಿಲ್ಮ್ಸ ಸದ್ಯ ಬಹುನಿರೀಕ್ಷೆಯ 'ಯುವರತ್ನ' ಮತ್ತು 'ಕೆಜಿಎಫ್-2' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಯುವರತ್ನ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೂ ಕೆಜಿಎಫ್-2 ಕೂಡ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ ಎರಡೂ ಸಿನಿಮಾದ ಕೆಲಸ ಮುಗಿಯುತ್ತಿರುವ ಹಿನ್ನಲೆ ಹೊಂಬಾಳೆ ಫೆಲ್ಮ್ಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ತಯಾರಿ ನಡೆಸಿದೆ. ಮುಂದೆ ಓದಿ..

  ಹೈದರಾಬಾದ್‌ಗೆ ಬಂದಿಳಿದ ರಾಕಿ ಭಾಯ್: ಏರ್‌ಪೋರ್ಟ್‌ ಫೋಟೋ ವೈರಲ್

  ಡಿಸೆಂಬರ್ 2ಕ್ಕೆ ಹೊಸ ಸಿನಿಮಾ ಘೋಷಣೆ

  ಡಿಸೆಂಬರ್ 2ಕ್ಕೆ ಹೊಸ ಸಿನಿಮಾ ಘೋಷಣೆ

  ಈ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಡಿಸೆಂಬರ್ 2ರಂದು ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. 'ಪ್ರೀತಿಯ ಪ್ರೇಕ್ಷಕರೇ, ನಮ್ಮ ಸಿನಿಮಾಗಳನ್ನು ಯಾವಾಗಲು ನಮಗಿಂತ ಹೆಚ್ಚು ನೀವು ಇಷ್ಟ ಪಟ್ಟಿದ್ದೀರಿ. ಇದೆ ಪ್ರೀತಿಯನ್ನು ಮುಂದುವರೆಸಲು, ಪ್ರೀತಿಪಾತ್ರರಾಗಲು ನಾವು ನಮ್ಮ ಮುಂದಿನ ಇಂಡಿಯನ್ ಫಿಲ್ಮ್ಸ್ ನೊಂದಿಗೆ ಬರುತ್ತಿದ್ದೇವೆ. ಡಿಸೆಂಬರ್ 2ರಂದು ಮಧ್ಯಾಹ್ನ 02;09ಕ್ಕೆ ಅನೌನ್ಸ್ ಮಾಡುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

  ಯುವರತ್ನ ಪ್ರೊಮೊ ಬಿಡುಗಡೆ: ಯೂತ್‌ಫುಲ್ ಲುಕ್‌ನಲ್ಲಿ ಪುನೀತ್

  ಪುನೀತ್-ಆನಂದರಾಮ್ ಸಿನಿಮಾ ನಿರ್ಮಾಣ ಮಾಡ್ತಾರಾ?

  ಪುನೀತ್-ಆನಂದರಾಮ್ ಸಿನಿಮಾ ನಿರ್ಮಾಣ ಮಾಡ್ತಾರಾ?

  ಹೊಂಬಾಳೆ ಫೋಲ್ಮ್ಸ ನಿಂದ ಹೊಸ ಸಿನಿಮಾ ಬರ್ತಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಯಾವ ನಟನಿಗೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಮಾಡಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಯುವರತ್ನ ಸಿನಿಮಾ ಬಳಿಕ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಬ್ಬರ ಹ್ಯಾಟ್ರಿಕ್ ಸಿನಿಮಾಗೆ ಹ್ಯಾಟ್ರಿಕ್ ನಿರ್ಮಾಣ ಮಾಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

  ಮತ್ತೆ ರಾಕಿಂಗ್ ಸ್ಟಾರ್ ಗೆ ಬಂಡವಾಳ ಹೂಡುವ ಸಾಧ್ಯತೆ?

  ಮತ್ತೆ ರಾಕಿಂಗ್ ಸ್ಟಾರ್ ಗೆ ಬಂಡವಾಳ ಹೂಡುವ ಸಾಧ್ಯತೆ?

  ಇನ್ನೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಜೊತೆ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ. ಯಶ್ ಮತ್ತು ನರ್ತನ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುವ ಸಾಧ್ಯತೆಯೂ ಇದೆ.

  ಪರಭಾಷಾ ನಟರ ಜೊತೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ

  ಪರಭಾಷಾ ನಟರ ಜೊತೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ

  ಕನ್ನಡ ನಟರನ್ನು ಬಿಟ್ಟು, ಟಾಲಿವುಡ್ ಹಾರುತ್ತಾರಾ ಎನ್ನುವ ಅನುಮಾನ ಸಹ ಮೂಡಿಸಿದೆ. ಪರಭಾಷೆಯ ಸ್ಟಾರ್ ನಟನಿಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದರೂ ಅಚ್ಟರಿ ಇಲ್ಲ. ಇದ್ಲೆಲ ಸದ್ಯ ಹರಿದಾಡುತ್ತಿರುವ ವದಂತಿಗಳಷ್ಟೆ. ಆದರೆ ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವುದು ಡಿಸೆಂಬರ್ 2 ರಂದು ಬಹಿರಂಗವಾಗಲಿದೆ. ಅಲ್ಲಿಯ ವರೆಗೂ ಕಾಯಲೇ ಬೇಕು.

  English summary
  After KGF Hombale Films Next Pan-Indian Film Announcement on December 2 at 2.09pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X