ಯುವ ಚೊಚ್ಚಲ ಚಿತ್ರದ ಅಪ್‌ಡೇಟ್ ಕೊಟ್ಟ ಹೊಂಬಾಳೆ; ಬೈಕ್, ಜಾಕೆಟ್, ಬೇಸ್‌ಬಾಲ್ ಬ್ಯಾಟ್, ಕಥೆ ಏನು?

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಯುವ ರಣಧೀರ ಕಂಠೀರವನಾಗಿ ಪ್ರೇಕ್ಷಕರ ಎದುರಿಗೆ ಬರಬೇಕಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಯುವ ರಾಜ್‌ಕುಮಾರ್ ಸಿನಿ ಜರ್ನಿಯ ಹಾದಿಯನ್ನೇ ಬದಲಿಸಿಬಿಟ್ಟಿತು. ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗಲು ಯುವ ರಾಜ್‌ಕುಮಾರ್ ಅಖಾಡಕ್ಕೆ ಇಳಿಯುವ ತೀರ್ಮಾನ ನಡೆಯಿತು.

ಪುನೀತ್ ರಾಜ್‌ಕುಮಾರ್‌ಗೆ ರಾಜಕುಮಾರ ಹಾಗೂ ಯುವರತ್ನ ರೀತಿಯ ಎರಡು ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಯುವ ರಾಜ್‌ಕುಮಾರ್ ಮೊದಲ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡರು. ಅಪ್ಪು ನಟನೆಯ ಒಟ್ಟು ಮೂರು ಚಿತ್ರಗಳಿಗೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಯಿತು.

Hombale Films officially announced the title release date of Yuva Rajkumar debut movie

ಹೀಗೆ ಯುವ ರಣಧೀರ ಕಂಠೀರವ ಬದಲಾಗಿ ಈ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾದರು. ಸೋಲೇ ಕಾಣದ ನಿರ್ದೇಶಕ ಹಾಗೂ ಪ್ರಸ್ತುತ ಕನ್ನಡ ಚಿತ್ರರಂಗದ ನಂಬರ್ ಒನ್ ಚಿತ್ರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಯುವ ರಾಜ್‌ಕುಮಾರ್ ಲಾಂಚ್ ಆಗಲಿದ್ದಾರೆ ಎಂಬ ಸುದ್ದಿ ತಿಳಿದ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಚಿತ್ರದ ಮೇಲೆ ನಿರೀಕ್ಷೆಯನ್ನು ಬೆಳೆಸಿಕೊಂಡರು.

ಇನ್ನು ಈ ಚಿತ್ರದ ಟೈಟಲ್ ಅತಿ ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದ್ದರೂ ಸಹ ಮಾರ್ಚ್ 3ರಂದೇ ಈ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ ಎಂಬ ಸುದ್ದಿ ನಿನ್ನೆಯಿಂದ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಅದರಂತೆ ಇಂದು ( ಮಾರ್ಚ್ 2 ) ಮಧ್ಯಾಹ್ನ 3.30ಕ್ಕೆ ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಮೊದಲ ಚಿತ್ರದ ಟೈಟಲ್ ಘೋಷಣೆ ಕುರಿತು ಅಪ್‌ಡೇಟ್ ಒಂದು ಬರಲಿದೆ ಎಂಬ ಸುದ್ದಿಯೂ ಸಹ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.

Hombale Films officially announced the title release date of Yuva Rajkumar debut movie

ಈ ಸುದ್ದಿಯಂತೆ ಘೋಷಣೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು. ಮಧ್ಯಾಹ್ನ 3.30ಕ್ಕೆ ಚಿತ್ರದ ಕುರಿತಾದ ಯಾವುದೇ ಪೋಸ್ಟ್ ಕೂಡ ಹೊಂಬಾಳೆ ಫಿಲ್ಮ್ಸ್ ಖಾತೆಯಿಂದ ಬರಲೇ ಇಲ್ಲ. ಕೊನೆಗೂ ತಡವಾಗಿ ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಚಿತ್ರದ ಕುರಿತಾಗಿ ಅಧಿಕೃತವಾಗಿ ಕೊಟ್ಟೇಬಿಟ್ಟಿದ್ದಾರೆ.

ಕೋಣೆಯೊಂದರಲ್ಲಿ ಬೈಕ್ ನಿಲ್ಲಿಸಿರುವ ಹಾಗೂ ಗೋಡೆ ಮೇಲೆ ಬೈಕ್ ರೈಡಿಂಗ್ ಜಾಕೆಟ್ ಒಂದನ್ನು ನೇತಾಕಿರುವ ಫೋಟೊ ಬ್ಯಾಕ್‌ಗ್ರೌಂಡ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟರ್‌ನ ತಲೆ ಭಾಗದಲ್ಲಿ 'ಬೆಳ್ಳಿ ಪರದೆಗೆ ಹೊಸದೊಂದು ಪರ್ವ' ಎಂದು ಬರೆದಿದೆ. ಯುವ ರಾಜ್‌ಕುಮಾರ್ ಅವರನ್ನು ಪರಿಚಯಿಸುತ್ತಿದ್ದು, ಚಿತ್ರದ ಶೀರ್ಷಿಕೆ ನಾಳೆ ( ಮಾರ್ಚ್ 3 ) ಸಂಜೆ 6.55ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಇನ್ನು ಈ ಪೋಸ್ಟರ್ ಹಂಚಿಕೊಳ್ಳುವಾಗ ಹೊಂಬಾಳೆ ಫಿಲ್ಮ್ಸ್ ಬಳಸಿರುವ ಸಾಲುಗಳು ಚಿತ್ರದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿವೆ. "ನಿಮ್ಮನ್ನು ಸೀಟ್‌ನ ಅಂಚಿಗೆ ತಂದು ಕೂರಿಸುವಂತಹ ಆಕ್ಷನ್ ಪ್ಯಾಕ್ಡ್ ರೈಡ್‌ಗೆ ಸಿದ್ಧರಾಗಿ. ನಿಮ್ಮ ಹೃದಯದ ವೇಗವನ್ನು ಹೆಚ್ಚಿಸುವ ಕಥೆಯನ್ನು ನಿಮಗಾಗಿ ಹೊತ್ತು ತರುತ್ತಿದ್ದೇವೆ. ನಾಳೆ ಸಂಜೆ 6.55ಕ್ಕೆ ಶೀರ್ಷಿಕೆ ಬಿಡುಗಡೆಯಾಗಲಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.

ಸದ್ಯ ಈ ಪೋಸ್ಟ್ ನೋಡಿದ ರಾಜ್‌ವಂಶ ಅಭಿಮಾನಿಗಳು ಚಿತ್ರದ ಬಗ್ಗೆ ತಂಡ ತುಂಬಾ ವಿಶ್ವಾಸವನ್ನು ಹೊಂದಿದ್ದು, ಸಂತೋಷ್ ಆನಂದ್‌ರಾಮ್ ಮತ್ತೊಂದು ಹಿಟ್ ಕೊಡಲಿದ್ದಾರೆ ಎಂದು ಊಹಿಸಿದ್ದಾರೆ. ಇನ್ನು ಮೊದಲೇ ಹೇಳಿದಂತೆ ಪೋಸ್ಟರ್‌ನಲ್ಲಿ ಬೈಕ್, ಜಾಕೆಟ್ ಇದ್ದು, ಹೊಂಬಾಳೆ ರೈಡ್ ಎಂಬ ಪದ ಬಳಸಿರುವುದನ್ನು ನೋಡಿದರೆ ಚಿತ್ರದಲ್ಲಿ ಯುವ ರಾಜ್‌ಕುಮಾರ್ ರೇಸರ್ ಇರಬಹುದಾ ಎಂಬ ಅನುಮಾನವನ್ನು ಮೂಡಿಸಿದೆ.

ಜತೆಗೆ ಪಕ್ಕದಲ್ಲಿಯೇ ಇರುವ ಮೇಜಿನ ಮೇಲೆ ಬೈಕ್‌ಗೆ ಸಂಬಂಧಿಸಿದ ಕೆಲ ಬಿಡಿಭಾಗಗಳಿದ್ದು, ಕೆಲ ಪುಸ್ತಕಗಳೂ ಸಹ ಇವೆ ಹಾಗೂ ಜತೆಗೆ ಬೇಸ್ ಬಾಲ್ ಬ್ಯಾಟ್ ಸಹ ಇದೆ. ಇದನ್ನೆಲ್ಲಾ ಗಮನಿಸಿದರೆ ಯುವ ರಾಜ್‌ಕುಮಾರ್ ಅವರದ್ದು ರೇಸಿಂಗ್ ಹುಚ್ಚಿರುವ ರಗಡ್ ವಿದ್ಯಾರ್ಥಿಯ ಪಾತ್ರವಿರಬಹುದು ಎನಿಸುತ್ತಿದೆ.

More from Filmibeat

English summary
Hombale Films officially announced the title release date of Yuva Rajkumar debut movie. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X