For Quick Alerts
  ALLOW NOTIFICATIONS  
  For Daily Alerts

  ದೀಪಾವಳಿ ವಿಶೇಷವಾಗಿ ಕೊಯಂಬತ್ತೂರಿನ ಇಶಾ ಫೌಂಡೇಶನ್‌ನಲ್ಲಿ 'ಕಾಂತಾರ' ವಿಶೇಷ ಪ್ರದರ್ಶನ

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ 25ದಿನ ಪೂರೈಸಿ ಮುನ್ನುತ್ತಿದೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸುತ್ತಿದೆ. ಈಗಾಗಲೇ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ವಿದೇಶಗಳಲ್ಲೂ ಪ್ರೇಕ್ಷಕರು ಟಿಕೆಟ್‌ಗಾಗಿ ಕ್ಯೂ ನಿಂತಿದ್ದಾರೆ. ಇನ್ನು ಇಶಾ ಫೌಂಡೇಶನ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

  ಕರಾವಳಿಯ ಸಂಸ್ಕೃತಿ, ಆಚರಣೆ ಕೇಂದ್ರವಾಗಿಟ್ಟುಕೊಂಡು ಮಾಡಿರುವ 'ಕಾಂತಾರ' ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದಿದೆ. ಈ ಚಿತ್ರದಿಂದ ತುಳುನಾಡಿನ ಹೆಮ್ಮೆಯ ಭೂತ ಕೋಲ ಆಚರಣೆ ಇದೀಗ ಜಗತ್ ಪ್ರಸಿದ್ಧಿಯಾಗಿದೆ. ವಿದೇಶದ ಮಂದಿ ಕೂಡ ಭೂತ ಕೋಲದ ಬಗ್ಗೆ ಚರ್ಚಿಸುತ್ತಿದ್ದಾರೆ. ಇದರ ಹಿನ್ನೆಲೆ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಸಿನಿಮಾ ಪರಭಾಷೆಗಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿದೆ. ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಸಿನಿಮಾ 2ನೇ ವಾರವೂ ಭರ್ಜರಿ ಪ್ರದರ್ಶನ ಕಾಣ್ತಿದೆ. ದೀಪಾವಳಿ ಸಂಭ್ರಮದಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದೆ.

  ಎರಡೂ ಕಣ್ಣು ನಮ್ಮದೇ.. 'ಕಾಂತಾರ' ಕಿಚ್ಚು ಕಮ್ಮಿ ಆಗ್ತಿಲ್ಲ: 'ಗಂಧದಗುಡಿ'ಗೆ ಸ್ಕ್ರೀನ್ಸ್ ಸಿಕ್ತಿಲ್ಲ.. 'ಹೆಡ್‌ಬುಷ್' ಕಥೆಯೇನು?ಎರಡೂ ಕಣ್ಣು ನಮ್ಮದೇ.. 'ಕಾಂತಾರ' ಕಿಚ್ಚು ಕಮ್ಮಿ ಆಗ್ತಿಲ್ಲ: 'ಗಂಧದಗುಡಿ'ಗೆ ಸ್ಕ್ರೀನ್ಸ್ ಸಿಕ್ತಿಲ್ಲ.. 'ಹೆಡ್‌ಬುಷ್' ಕಥೆಯೇನು?

  ಈವರೆಗೆ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳದ ದೇಶಗಳಲ್ಲೂ 'ಕಾಂತಾರ' ತೆರೆಗಪ್ಪಳಿಸಿದೆ. ಪರಭಾಷಿಕರು ಕೂಡ ಪದೇ ಪದೇ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಕೊಯಂಬತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

  ಇಶಾ ಫೌಂಡೇಶನ್‌ನಲ್ಲಿ 'ಕಾಂತಾರ'

  ಇಶಾ ಫೌಂಡೇಶನ್‌ನಲ್ಲಿ 'ಕಾಂತಾರ'

  ಸಾಮಾನ್ಯವಾಗಿ ಇಶಾ ಫೌಂಡೇಶನ್‌ ಒಳಗೆ ಯಾವುದೇ ಸಿನಿಮಾ ಪ್ರದರ್ಶನ ಮಾಡುವುದಿಲ್ಲ. ಆದರೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರಕ್ಕೆ ಅಂತಾದೊಂದು ಗೌರವ ಧಕ್ಕಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಯೋಗಕೇಂದ್ರದಲ್ಲಿ ಹೊಂಬಾಳೆ ಸಂಸ್ಥೆ 'ಕಾಂತಾರ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಇಂತಹ ಅದ್ಭುತ ಸಿನಿಮಾ ನೀಡಿದ ಸಂಸ್ಥೆಗೆ ಹಾಗೂ ರಿಷಬ್ ಶೆಟ್ಟಿಗೆ ಧನ್ಯವಾದ ಎಂದು ಇಶಾ ಫೌಂಡೇಶನ್ ಅಫೀಷಿಯಲ್ ಪೇಜ್‌ನಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹೊಂಬಾಳೆ ಸಂಸ್ಥೆ ಅಂತಹ ಒಳ್ಳೆ ಜಾಗದಲ್ಲಿ ನಮ್ಮ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಪ್ರತಿಕ್ರಿಯಿಸಿದೆ.

  ಇಶಾ ಫೌಂಡೇಶನ್‌ನಲ್ಲಿ ಪ್ರದರ್ಶನ ಕಂಡ 2ನೇ ಚಿತ್ರ

  ಇಶಾ ಫೌಂಡೇಶನ್‌ನಲ್ಲಿ ಪ್ರದರ್ಶನ ಕಂಡ 2ನೇ ಚಿತ್ರ

  ಮೊದಲೇ ಹೇಳಿದಂತೆ ಇಶಾ ಯೋಗಕೇಂದ್ರದಲ್ಲಿ ಯಾವುದೇ ಸಿನಿಮಾ ಪ್ರದರ್ಶನ ಕಾಣುವುದಿಲ್ಲ. ಈ ಹಿಂದೆ ಕಂಗನಾ ರಾಣಾವತ್ ನಿರ್ದೇಶಿಸಿ ನಟಿಸಿದ್ದ 'ಮಣಿಕರ್ಣಿಕಾ' ಸಿನಿಮಾ ಪ್ರದರ್ಶನ ಕಂಡಿತ್ತು. ಚಿತ್ರದಲ್ಲ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕಥೆ ಹೇಳಲಾಗಿತ್ತು. ಆ ನಂತರ 'ಕಾಂತಾರ' ಚಿತ್ರಕ್ಕೆ ಆ ಅವಕಾಶ ಸಿಕ್ಕಿದೆ. ಇಶಾ ಫೌಂಡೇಶನ್‌ನಲ್ಲಿ ಸ್ಕ್ರೀನಿಂಗ್ ಆದ ಕನ್ನಡದ ಮೊದಲ ಸಿನಿಮಾ 'ಕಾಂತಾರ' ಎನಿಸಿಕೊಂಡಿದೆ.

  ಕೇರಳದಲ್ಲಿ ಹೆಚ್ಚಾಯ್ತು 'ಕಾಂತಾರ' ಬೇಡಿಕೆ

  ಕೇರಳದಲ್ಲಿ ಹೆಚ್ಚಾಯ್ತು 'ಕಾಂತಾರ' ಬೇಡಿಕೆ

  ಈಗಾಗಲೇ ಹಿಂದಿ, ತೆಲುಗು, ತಮಿಳು ಭಾಷೆಗೆ ಡಬ್ ಆಗಿ ಸಕ್ಸಸ್ ಕಂಡಿತ್ತು. ನಾಲ್ಕು ದಿನದ ಹಿಂದೆಯಷ್ಟೇ ಮಲಯಾಳಂ ವರ್ಷನ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ಬೇಡಿಕೆಗೆ ತಕ್ಕಂತೆ ಶೋಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ದೊಡ್ಡ ದೊಡ್ಡ ಥಿಯೇಟರ್‌ಗಳಲ್ಲೇ 'ಕಾಂತಾರ' ಸಿನಿಮಾ ಪ್ರದರ್ಶನ ಕಾಣುತ್ತಿದೆ. ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದರು.

  ಕರ್ನಾಟಕದಲ್ಲೂ 'ಕಾಂತಾರ' ದಾಖಲೆ

  ಕರ್ನಾಟಕದಲ್ಲೂ 'ಕಾಂತಾರ' ದಾಖಲೆ

  ರಾಜ್ಯದಲ್ಲಿ 25 ದಿನಗಳಲ್ಲಿ 77 ಲಕ್ಷಕ್ಕೂ ಹೆಚ್ಚು ಮಂದಿ 'ಕಾಂತಾರ' ಸಿನಿಮಾ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಹೊಂಬಾಳೆ ಸಂಸ್ಥೆ ಈವರೆಗೆ ನಿರ್ಮಿಸಿರುವ ಎಲ್ಲಾ ಸಿನಿಮಾಗಳ ದಾಖಲೆಯನ್ನು ಈ ವಿಚಾರದಲ್ಲಿ 'ಕಾಂತಾರ' ಮೀರಿಸಿದೆ. 'ರಾಜಕುಮಾರ' 65 ಲಕ್ಷ, KGF 75 ಲಕ್ಷ ಹಾಗೂ KGF- 2 ಚಿತ್ರವನ್ನು 72 ಲಕ್ಷ ಜನ ನೋಡಿದ್ದರು. ಶೀಘ್ರದಲ್ಲೇ 'ಕಾಂತಾರ' ಚಿತ್ರವನ್ನು 1 ಕೋಟಿ ಜನ ನೋಡುವ ಅಂದಾಜಿದೆ.

  ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?

  English summary
  Hombale Films organises a special screening of 'Kantara' at Isha Yoga Centre, Coimbatore on the festive occasion of Diwali. Know More.
  Tuesday, October 25, 2022, 17:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X