ಬಾಲಿವುಡ್‌ಗೆ ಹೊರಟ 'ಹೊಂಬಾಳೆ ಫಿಲ್ಮ್ಸ್': ಸ್ಟಾರ್ ಹೀರೋಗೆ ಸಿನಿಮಾ ನಿರ್ಮಾಣ!
'ಕೆಜಿಎಫ್' ಸರಣಿ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಎಲ್ಲಾ ನಿರೀಕ್ಷೆಗಳನ್ನು ಮೀರಿ 'ಕೆಜಿಎಫ್ 1' ಮತ್ತು 2, ಎರಡೂ ಸಿನಿಮಾಗಳು ಕೂಡ ಸೂಪರ್ ಹಿಟ್ ಲಿಸ್ಟ್ ಸೇರಿವೆ. ಯಶ್ ಅಭಿನಯದ ಕನ್ನಡ ಈ ಸಿನಿಮಾ ಸಾಕಷ್ಟು ಹೊಸ ದಾರಿಗಳನ್ನು ತೆರೆದಿದೆ.
'ಕೆಜಿಎಫ್ 2' ಸಿನಿಮಾ ಕನ್ನಡ ಮಾತ್ರವಲ್ಲ, ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಕಿರೀಟ ಇದ್ದ ಹಾಗೆ. ಅಷ್ಟರ ಮಟ್ಟಿಗೆ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಇನ್ನು ಗಳಿಕೆ ವಿಚಾರದಲ್ಲಿ 'ಕೆಜಿಎಫ್ 2' ಜಾದು ಮಾಡಿದೆ. ಸಿನಿಮಾಗೆ ಎಷ್ಟು ದೊಡ್ಡಮಟ್ಟದಲ್ಲಿ ದುಡ್ಡು ಖರ್ಚು ಮಾಡಲಾಗಿದೆಯೋ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಸಿನಿಮಾ ಲಾಭ ತಂದು ಕೊಟ್ಟಿದೆ.
'ಕೆಜಿಎಫ್ 2' ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಭಾರತದಾದ್ಯಂತ ಸಿನಿಮಾದ ಬಗ್ಗೆ ಕ್ರೇಜ್ ಹಾಗೆ ಇದೆ. ಸಿನಿಮಾ ಇಂದು ಏನೇ ಆಗಿರಬಹುದು, ಸಿನಿಮಾ ಕಥೆ ಏನೇ ಆಗಿರಬಹುದು. ನಿರ್ದೇಶಕ, ನಟ ಯಾರೆ ಆಗಿರಬಹುದು. ಇದೆಲ್ಲ ಸಾಧ್ಯವಾಗಲು ಮುಖ್ಯ ಕಾರಣ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ.
Recommended Video


ಬಾಲಿವುಡ್ ಸಿನಿಮಾ ಮಾಡಲು ಹೊಂಬಾಳೆ ತಯಾರಿ!
ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಗೆದ್ದು ಬೀಗಿರುವ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗ ಹೊಸ ಹೆಜ್ಜೆ ಇಡುತ್ತಾ ಇದೆ. ಹೊಂಬಾಳೆ ಈಗ ಮುಂದಿನ ಹೆಜ್ಜೆಯನ್ನು ಸ್ಯಾಂಡಲ್‌ವುಡ್ ಅಲ್ಲ, ಬಾಲಿವುಡ್‌ನಲ್ಲಿ ಇಡುತ್ತಿದೆ. ಹೌದು ಹೊಂಬಾಳೆ ಸಂಸ್ಥೆ ಸದ್ಯ ಬಾಲಿವುಡ್‌ನಲ್ಲೂ ಶಾಖೆ ತೆರೆಯಲು ಮುಂದಾಗಿದ್ದು ಸ್ಟಾರ್ ಹೀರೋ ಜೊತೆಗೆ ಮಾತು ಕಥೆ ನಡೆಸಿದೆಯಂತೆ. ಈ ವಿಚಾರವನ್ನು ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಸಿನಿಮಾ ಮಾಡುತ್ತೇವೆ: ವಿಜಯ್ ಕಿರಗಂದೂರು!
ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು "ನಾವು ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಇದರ ಜೊತೆಗೆ ಹಿಂದಿ ಸಿನಿಮಾಗಳನ್ನು ಮಾಡುವ ಯೋಜನೆಯನ್ನು ಹೊಂದಿದ್ದೇವೆ. ಎಲ್ಲವೂ ಸರಿಯಾಗಿ ಹೊಂದಾಣಿಕೆ ಆದರೆ ಮುಂದಿನ 3, 4 ತಿಂಗಳಲ್ಲಿ ಸಿನಿಮಾ ಘೋಷಣೆ ಮಾಡುತ್ತೇವೆ. ಈ ಚರ್ಚೆ ಇದೀಗ ಆರಂಭಿಕ ಹಂತದಲ್ಲಿದೆ, ಆದರೆ ನಾವು ಖಂಡಿತವಾಗಿ, ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸುವ ಯೋಜನೆಯನ್ನು ಹೊಂದಿದ್ದೇವೆ" ಎಂದಿದ್ದಾರೆ.

ಶಾರುಕ್ ಖಾನ್‌ಗೆ ಹೊಂಬಾಳೆ ನಿರ್ಮಾಣ!
ಹೊಂಬಾಳೆ ಸಂಸ್ಥೆ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾ ಇದೆ. ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನುವ ವಿಚಾರ ಹೊರ ಬರುತ್ತಿದ್ದ ಹಾಗೆ ಇದರ ಜೊತೆಗೆ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಹೆಸರು ಕೂಡ ಕೇಳಿ ಬರುತ್ತಿದೆ. ಇನ್ನು ತಮ್ಮ ಸಿನಿಮಾಗಾಗಿ ನಿರ್ದೇಶಕರನ್ನು ಹುಡುಕುತ್ತಿರುವುದಾಗಿ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ.

ತಮಿಳು, ಮಲಯಾಳಂನಲ್ಲೂ ಹೊಂಬಾಳೆ ಸಿನಿಮಾ!
ಇನ್ನು ಕನ್ನಡದ ನಂತರ ತೆಲುಗಿನಲ್ಲಿ ನಟ ಪ್ರಭಾಸ್ ಸಿನಿಮಾ ನಿರ್ಮಾಣ ಮಾಡುತ್ತಿದೆ ಹೊಂಬಾಳೆ. ಜೊತೆಗೆ ತಮಿಳು, ಮಲಯಾಳಂನಲ್ಲೂ ಸಿನಿಮಾ ಮಾಡುತ್ತಿರುವ ಬಗ್ಗೆ ಹೇಳಿದ್ದಾರೆ. "ನಾವು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡುತ್ತಿದ್ದೇವೆ. ಬಿಟ್ಟರೆ ಸದ್ಯಕ್ಕೆ ಒಂದು ತಮಿಳು ಸಿನಿಮಾ ಮತ್ತು ಒಂದು ಮಲಯಾಳಂ ಸಿನಿಮಾ ಮಾಡುತ್ತಿದ್ದೇವೆ". ಎಂದು ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಹೇಳಿದ್ದಾರೆ.


Click it and Unblock the Notifications











