For Quick Alerts
  ALLOW NOTIFICATIONS  
  For Daily Alerts

  ವರಮಹಾಲಕ್ಷ್ಮಿಗೆ ರಿಲೀಸ್ ಆಗಲ್ಲ ರಾಘವೇಂದ್ರ ಸ್ಟೋರ್ಸ್: ಕಾರಣ ಏನು?

  |

  'ಕೆಜಿಎಫ್ 2' ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಬೇಕಿತ್ತು. ಆದರೆ, ಹೊಂಬಾಳೆ ಫಿಲ್ಮ್ಸ್ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಅಂತಿರಾ? ಅದುವೇ 'ರಾಘವೇಂದ್ರ ಸ್ಟೋರ್ಸ್'.

  ನವರಸ ನಾಯಕ ಜಗ್ಗೇಶ್ ಹಾಗೂ ಸಂತೋಷ್ ಆನಂದ್‌ ರಾಮ್ ಕಾಂಬಿನೇಷನ್‌ ಸಿನಿಮಾ 'ರಾಘವೇಂದ್ರ ಸ್ಟೋರ್ಸ್'. ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿಸಿದೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಹೇಳಿದಂತೆಯೇ 'ರಾಘವೇಂದ್ರ ಸ್ಟೋರ್ಸ್' ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೀಗ ಅಂದ್ಕೊಂಡ ಡೇಟ್‌ಗೆ ಸಿನಿಮಾ ರಿಲೀಸ್ ಆಗುತ್ತಿಲ್ಲ.

  ಮಾತು ಕೊಟ್ಟಂತೆ ತುಮಕೂರಿನ ಅಭಿಮಾನಿಯನ್ನು ಹುಡುಕಿ ಭೇಟಿ ಮಾಡಿದ ಜಗ್ಗೇಶ್!ಮಾತು ಕೊಟ್ಟಂತೆ ತುಮಕೂರಿನ ಅಭಿಮಾನಿಯನ್ನು ಹುಡುಕಿ ಭೇಟಿ ಮಾಡಿದ ಜಗ್ಗೇಶ್!

  ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದ್ದು ನವರಸ ನಾಯಕನ ಸಿನಿಮಾ ಬಗ್ಗೆ ಸುಳಿವು ನೀಡಿದೆ. ಈ ಮೂಲಕ 'ರಾಘವೇಂದ್ರ ಸ್ಟೋರ್ಸ್' ಹಬ್ಬಕ್ಕೆ ರಿಲೀಸ್ ಆಗುವುದಿಲ್ಲವೆಂದು ಹೇಳಿದೆ. ಆದರೆ, ಅದಕ್ಕೆ ಕಾರಣವೇನು ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.

  'ರಾಘವೇಂದ್ರ ಸ್ಟೋರ್ಸ್' ರಿಲೀಸ್ ಸದ್ಯಕ್ಕಿಲ್ಲ

  ಹೊಂಬಾಳೆ ಫಿಲ್ಮ್ಸ್ ದಿಢೀರನೇ ಒಂದು ಟ್ವೀಟ್ ಮಾಡಿದ್ದು, ಸಿನಿಮಾ 'ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ' ಎಂದು ಬರೆದುಕೊಂಡಿದೆ. ಈ ಮೂಲಕ ಈ ಹಿಂದೆ ಹೇಳಿದಂತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದರೆ, ಆಗಸ್ಟ್ 05, 2022ಕ್ಕೆ ರಿಲೀಸ್ ಆಗಬೇಕಿತ್ತು. ರಿಲೀಸ್ ಡೇಟ್‌ಗೆ ಎರಡು ವಾರಗಳಿರುವಾಗಲೇ ರಿಲೀಸ್ ಮಾಡದೆ ಇರಲು ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ.

  ರಾಯರ ಹೆಸರಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್ರಾಯರ ಹೆಸರಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್

  ಟ್ವೀಟ್‌ನಲ್ಲಿ ಹೇಳಿದ್ದಿದ್ದೇನು?

  ಟ್ವೀಟ್‌ನಲ್ಲಿ ಹೇಳಿದ್ದಿದ್ದೇನು?

  ಒಂದೂವರೆ ತಿಂಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ ಒಂದು ಟ್ವೀಟ್ ಮಾಡಿತ್ತು. ಅಂದರೆ, ಜೂನ್ 1, 2022ರಂದು "ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ!" ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಆಗಸ್ಟ್ 05ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದೇ ನವರಸ ನಾಯಕ ಜಗ್ಗೇಶ್ ಅಭಿಮಾನಿಗಳು ಕಾದು ಕೂತಿದ್ದರು. ಆದ್ರೀಗ ರೀ-ಟ್ವೀಟ್ ಮಾಡಿದ್ದು, ರಿಲೀಸ್ ಆಗುವುದಿಲ್ಲ ಎಂದು ಹೇಳಿದೆ. ಅದಕ್ಕೆ ಕಾರಣವೇನು? ಅನ್ನೋ ಚರ್ಚೆ ಶುರುವಾಗಿದೆ.

  ರಾಜ್ಯ ಸಭೆಯಲ್ಲಿ ಜಗ್ಗೇಶ್

  ರಾಜ್ಯ ಸಭೆಯಲ್ಲಿ ಜಗ್ಗೇಶ್

  ಸಿನಿಮಾ ಪ್ರಚಾರ ಮಾಡುವುದಕ್ಕೆ ಕನಿಷ್ಠ ಅಂದರೂ, 15 ದಿನಗಳು ಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಯಾಕೆಂದರೆ, ನವರಸ ನಾಯಕ ಜಗ್ಗೇಶ್ ರಾಜ್ಯಸಭೆ ಸದಸ್ಯರಾಗಿದ್ದಾರೆ. ಹೀಗಾಗಿ ಇಂದಿನಿಂದ ಆರಂಭ ಆಗಿರುವ ರಾಜ್ಯಸಭಾ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಜಗ್ಗೇಶ್ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಇದೂ ಒಂದು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

  ಬೇರೆ ಡೇಟ್‌ನಲ್ಲಿ ರಿಲೀಸ್ ಸಾಧ್ಯತೆ?

  ಬೇರೆ ಡೇಟ್‌ನಲ್ಲಿ ರಿಲೀಸ್ ಸಾಧ್ಯತೆ?

  ಇನ್ನೊಂದು ಕಡೆ ಜುಲೈ 28ಕ್ಕೆ 'ವಿಕ್ರಾಂತ್ ರೋಣ' ರಿಲೀಸ್ ಆಗುತ್ತಿದೆ. ಇನ್ನೊಂದು ಕಡೆ ಆಗಸ್ಟ್ 13ಕ್ಕೆ 'ಗಾಳಿಪಟ 2' ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳ ಮಧ್ಯೆ 'ರಾಘವೇಂದ್ರ ಸ್ಟೋರ್ಸ್' ರಿಲೀಸ್ ಬೇಡ ಎಂದು ಹೊಂಬಾಳೆ ನಿರ್ಧರಿಸಿದೆ ಎನ್ನಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಮಾತ್ರ ನಿಕರವಾದ ಕಾರಣ ನೀಡಿಲ್ಲ. ಹೀಗಾಗಿ ಮುಂದಿನಗಳಲ್ಲಿ ಇದಕ್ಕೆ ಕಾರಣವೇನು? ಎಂದು ತಿಳಿಯಬಹುದು.

  English summary
  Hombale Films Produced Jaggesh Starrer Raghavendra Stores Movie Postponed, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X