ಹೊಂಬಾಳೆ ಸಂಸ್ಥೆಯ 'ಧೂಮಂ' ಕನ್ನಡ ಅವತರಣಿಗೆ ಕರ್ನಾಟಕದಲ್ಲಿ ಸಿಕ್ಕ ಸ್ಕ್ರೀನ್ಸ್ ಎಷ್ಟು?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮೊದಲ ಮಲಯಾಳಂ ಸಿನಿಮಾ 'ಧೂಮಂ'. 'ಲೂಸಿಯಾ' ಪವನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಒಂದ್ಕಡೆ ಪವನ್ ಕುಮಾರ್, ಇನ್ನೊಂದ್ಕಡೆ ಫಹಾಸ್ ಫಾಸಿಲ್. ಇಬ್ಬರೂ ಸಿನಿಮಾ ಆಯ್ಕೆಯಲ್ಲಿ ಡಿಫ್ರೆಂಟ್. ವಿಭಿನ್ನ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ಈ ಕಾಂಬಿನೇಷನ್ ಸಿನಿಮಾ ನಾಳೆ (ಜೂನ್ 23) ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರ್ ನಿರ್ಮಿಸಿರುವ ಈ ಸಿನಿಮಾ ಮಲಯಾಳಂ ಇಂಡಸ್ಟ್ರಿಯಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ. ಈಗಾಗಲೇ ಟ್ರೈಲರ್ ನೋಡಿದವರಿಗೆ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮಲಯಾಳಂ ನಟರ ಜೊತೆಗೆ ಕನ್ನಡದ ಕಲಾವಿದರೂ ಸೇರಿಕೊಂಡಿರುವುದರಿಂದ ಕನ್ನಡಿಗರಿಗೂ ಈ ಸಿನಿಮಾ ಹೊಸ ಅನುಭವ ಕೊಡುವ ಸಾಧ್ಯತೆಯಿದೆ.
ಕನ್ನಡಕ್ಕೆ ಡಬ್ ಆಗಿ ಸಿನಿಮಾ ಬಿಡುಗಡೆಯಾಗುತ್ತಿರುವುದಿಂದ ಕರ್ನಾಟಕದಲ್ಲಿ ಈ ಸಿನಿಮಾ ಎಷ್ಟು ಸ್ಕ್ರೀನ್ಸ್‌ನಲ್ಲಿ ರಿಲೀಸ್ ಆಗಬಹುದು? ಅನ್ನೋ ಕುತೂಹಲವಿತ್ತು. ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿ ಉಳಿದಿವೆ ಅನ್ನುವಾಗಲೇ ಎಷ್ಟು ಸ್ಕ್ರೀನ್ಸ್‌ನಲ್ಲಿ ರಿಲೀಸ್ ಆಗುತ್ತೆ ಅನ್ನೋ ಲೆಕ್ಕ ಸಿಕ್ಕಿದೆ.
'ಧೂಮಂ' ಸಿನಿಮಾದ ಕನ್ನಡ ಡಬ್ ವರ್ಷನ್ ಅನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಿ ಅಂತ ಕನ್ನಡಿಗರು ಬೇಡಿಕೆ ಇಟ್ಟಿದ್ದರು. ಅದರಂತೆಯೇ ಹೊಂಬಾಳೆ ಫಿಲ್ಮ್ಸ್ ಕರ್ನಾಟಕದಲ್ಲಿ ಸುಮಾರು 150ಕ್ಕೂ ಅಧಿಕ ಹೆಚ್ಚು ಸ್ಕ್ರೀನ್ಸ್‌ನಲ್ಲಿ ಪ್ರದರ್ಶನ ಕಾಣಲಿದೆ.
ಡಬ್ಬಿಂಗ್ ಸಿನಿಮಾಗಳನ್ನು ಇಷ್ಟೊಂದು ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡುವ ಸಾಹಸಕ್ಕೆ ಯಾರೂ ಮುಂದಾಗಿರಲಿಲ್ಲ. ಇತ್ತೀಚೆಗೆ ಅಂಗ ಸಂಸ್ಥೆಯಾಗಿರುವ ಕೆಆರ್‌ಜಿ ಸ್ಟುಡಿಯೋ 'ಆದಿಪುರುಷ್' ಕನ್ನಡ ವರ್ಷನ್ ಅನ್ನು 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿತ್ತು. ಈಗ 'ಧೂಮಂ' 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಿದ್ದಾರೆ. ಒಂದ್ವೇಲೆ ಈ ಸಿನಿಮಾ ಗೆದ್ದರೆ, ಡಬ್ಬಿಂಗ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ಹೊಸ ಮಾರ್ಕೇಟ್ ಸೃಷ್ಟಿಯಾಗಲಿದೆ.
'ಧೂಮಂ' ಸಿನಿಮಾದಲ್ಲಿ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಷನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಕಾಣಿಸಿಕೊಂಡಿದ್ದಾರೆ.
ಪವನ್ ಕುಮಾರ್ ನಿರ್ದೇಶಿಸಿದ 'ಲೂಸಿಯಾ' ಟ್ಯೂನ್ ಹಾಕಿದ್ದ ಪೂರ್ಣಚಂದ್ರ ತೇಜಸ್ವಿ ಮಲಯಾಳಂ ಸಿನಿಮಾ 'ಧೂಮಂ'ಗೆ ಸಂಗೀತ ನೀಡಿದ್ದಾರೆ. ಹೀಗಾಗಿ ನಾಳೆ (ಜೂನ್ 23) ರಿಲೀಸ್ ಆಗಲಿರುವ ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋ ಕುತೂಹಲವಿದೆ.


Click it and Unblock the Notifications