18 ದಿನಕ್ಕೆ 'ಬಘೀರ' ಗಳಿಕೆ ಎಷ್ಟು? ನಿರ್ಮಾಪಕ ವಿಜಯ್ ಕಿರಗಂದೂರ್ ಮಾಹಿತಿ
ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಆರ್ಭಟ ಚಿತ್ರಮಂದಿರಗಳಲ್ಲಿ ಮುಂದುವರೆದಿದೆ. ದೀಪಾವಳಿ ಸಂಭ್ರಮದಲ್ಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬಂದಿತ್ತು. ಪ್ರಶಾಂತ್ ನೀಲ್ ಬರೆದ ಕಥೆಗೆ ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದರು.
ರೋರಿಂಗ್ ಸ್ಟಾರ್ ಅಬ್ಬರಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಎರಡು ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಶ್ರೀಮುರಳಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮೇಕಿಂಗ್, ಆಕ್ಷನ್ ಎಲ್ಲವೂ ಸಿನಿರಸಿಕರಿಗೆ ಅದ್ಭುತ ಅನುಭವ ನೀಡುತ್ತದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದರೆ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಬಘೀರ' ಸಿನಿಮಾ ತೆರೆಗೆ ತಂದಿದೆ. ಚೇತನ್ ಡಿಸೋಜಾ ಭರ್ಜರಿ ಆಕ್ಷನ್ ಸೀಕ್ವೆನ್ ಕಂಪೋಸ್ ಮಾಡಿ ಗೆದ್ದಿದ್ದಾರೆ. ಪೊಲೀಸ್ ಅಧಿಕಾರಿ ವೇದಾಂತ್ ಕಾನೂನಾತ್ಮಕವಾಗಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ವಿಫಲನಾದಾಗ ಮಾರುವೇಷದಲ್ಲಿ ದುಷ್ಟರ ಬೇಟೆ ಆಡುವ ಸಿಂಪಲ್ ಕಥೆ ಚಿತ್ರದಲ್ಲಿದೆ. ಆದರೆ ಬಹಳ ಪರಿಣಾಮಕಾರಿಯಾಗಿ ಚಿತ್ರವನ್ನು ತೆರೆಗೆ ತರಲಾಗಿದೆ. ಅದಕ್ಕೆ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಬೆಳಕಿನ ಹಬ್ಬಕ್ಕೆ ಬಂದಿದ್ದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ 6 ದಿನಕ್ಕೆ 18ರಿಂ 20 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ನಿರ್ದೇಶಕರು ಮಾಹಿತಿ ನೀಡಿದ್ದರು. 'ಬಘೀರ' ಸಕ್ಸಸ್ ಮೀಟ್‌ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದ್ದರು. ಇದೀಗ ನಿರ್ಮಾಪಕ ವಿಜಯ್ ಕಿರಗಂದೂರ್ ಚಿತ್ರದ 16 ದಿನಗಳ ಗಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿದ್ದಾರೆ.

ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡ್ತಿದೆ. 'KGF' ಸರಣಿ ಚಿತ್ರಗಳ ಬಳಿಕ 'ಕಾಂತಾರ' ಚಿತ್ರ ನಿರ್ಮಿಸಿ ಗೆದ್ದಿತ್ತು. ಬಳಿಕ ತೆಲುಗಿನಲ್ಲಿ 'ಸಲಾರ್' ಸಿನಿಮಾ ಮಾಡಿ ಸಂಸ್ಥೆ ಗೆಲುವಿನ ನಗೆ ಬೀರಿದೆ. ಹೊಂಬಾಳೆ ಮುಟ್ಟಿದೆಲ್ಲಾ ಚಿನ್ನ ಎನ್ನುವಂತಾಗಿದೆ.
ಸದ್ಯ 'ಕಾಂತಾರ'-1 ಚಿತ್ರಕ್ಕೆ ಸಂಸ್ಥೆ ಕೈ ಹಾಕಿದೆ. 'ಸಲಾರ್-2' ಸಿನಿಮಾ ಶುರುವಾಗಿದೆ. 'KGF'- 3 ಸಿನಿಮಾ ಕೂಡ ಘೋಷಣೆ ಆಗಿದೆ. ಸದ್ಯ 'ಬಘೀರ' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ 35 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇನ್ನು ಶೀಘ್ರದಲ್ಲೇ ವೆಬ್ ಸೀರಿಸ್ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಪ್ರಭಾಸ್ ಕಾಂಬಿನೇಷನ್‌ನಲ್ಲಿ 3 ಸಿನಿಮಾಗಳನ್ನು ಘೋಷಣೆ ಮಾಡಿರುವ ಬಗ್ಗೆಯೂ ಮಾತನಾಡಿದ್ದಾರೆ. ಪ್ರಭಾಸ್ ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ಕೊಂಚ ನಾಚಿಕೆ ಸ್ವಭಾವದವರು. ಆದರೆ ಒಬ್ಬ ವ್ಯಕ್ತಿಯಾಗಿ ನಿಜಕ್ಕೂ ಜನರ ಕರೆಯುವಂತೆ ಆತ ಡಾರ್ಲಿಂಗ್. ನಮ್ಮ ಹಾಗೂ ಪ್ರಭಾಸ್ ನಡುವೆ ಉತ್ತಮ ಒಡನಾಟವಿದೆ. ಅವರು ತಮ್ಮೊಟ್ಟಿಗೆ ಮೂರಕ್ಕಿಂತ ಹೆಚ್ಚು ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ ಎಂದು ವಿಜಯ್ ಕಿರಗಂದೂರ್ ತಿಳಿಸಿದ್ದಾರೆ.
ಪ್ರಭಾಸ್ ಜೊತೆ 3 ಸಿನಿಮಾಗಳನ್ನು ಮಾಡಲು 600 ಕೋಟಿ ರೂ. ಸಂಭಾವನೆ ಕೊಟ್ಟಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಇಲ್ಲಿ ಸಂಭಾವನೆಗಿಂತ ಪ್ರಭಾಸ್ ಹಾಗೂ ನಮ್ಮ ಹೊಂಬಾಳೆ ಸಂಸ್ಥೆ ನಡುವಿನ ಬಾಂಧವ್ಯ ಬಹಳ ಮುಖ್ಯ ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ.
'ಕಾಂತಾರ'-1 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಳೆದ ವಾರ ಕೊಡಚಾದ್ರಿ ಬೆಟ್ಟದಲ್ಲಿ 1000 ಕ್ಕೂ ಅಧಿಕ ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಂಡು ಚಿತ್ರೀಕರಣ ನಡೆಸಿದೆವು. ಈಗಾಗಲೇ ಚಿತ್ರದ 40%ರಿಂದ 45% ರಷ್ಟು ಚಿತ್ರೀಕರಣ ಮುಗಿಸಿದೆ ಎಂದು ವಿಜಯ್ ಕಿರಗಂದೂರ್ ಮಾಹಿತಿ ನೀಡಿದ್ದಾರೆ.


Click it and Unblock the Notifications











