ಕೆಜಿಎಫ್, ಕಾಂತಾರ ನೀಡಿದ ಹೊಂಬಾಳೆ ಫಿಲ್ಮ್ಸ್‌ನಲ್ಲಿ ಸಹಾಯಕ ನಿರ್ದೇಶಕರಾಗಬೇಕೇ...? ಇಲ್ಲಿದೆ ಸುವರ್ಣಾವಕಾಶ!
ಚಿತ್ರರಂಗದ ಮೋಹದಿಂದ ಮನೆ ಮಠ ಕಳೆದುಕೊಂಡು ಬೀದಿಗೆ ಬಂದವರು ಎಷ್ಟು ಮಂದಿಯೋ ...ಹಾಗೆಯೇ ಸಿನಿಮಾಗಳಿಂದಲೇ ಕೋಟಿ ಕೋಟಿ ಬಾಚಿಕೊಂಡು ಉತ್ತಮ ಸ್ಥಾನದಲ್ಲಿ ಇರುವವರು ಸಾಕಷ್ಟು ಜನ. ಆದರೆ, ಈ ಏಳು ಬೀಳುಗಳ ಚಿತ್ರೋದ್ಯಮದ ಬಗ್ಗೆ ಮಾತ್ರ ಮೋಹ ತಪ್ಪಿದ್ದಲ್ಲ. ನಟರಾಗಬೇಕು, ನಿರ್ದೇಶಕರಾಗಬೇಕು ಎಂದು ಗಾಂಧಿನಗರದಲ್ಲಿ ಸೈಕಲ್ ಹೊಡೆಯುವವರು ಸಾವಿರಾರು ಮಂದಿ ಇದ್ದಾರೆ.
ಅವಕಾಶಗಳು ಸಿಗದೇ ಅದೇಷ್ಟೋ ಪ್ರತಿಭಾನ್ವಿತರು ಕಳೆದು ಹೋಗಿದ್ದಾರೆ. ಮತ್ತೆ ಕೆಲವರು ಗಾಂಧಿ ನಗರದ ಗಲ್ಲಿಗಳಲ್ಲಿ ಸುತುತ್ತಿದ್ದಾರೆ. ಒಂದು ಒಳ್ಳೆ ಪ್ರೋಡಕ್ಷನ್ ಹೌಸ್‌ನಲ್ಲಿ ಕೆಲಸ ಸಿಕ್ಕರೆ ಸಾಕು ಎನ್ನುವ ನೂರಾರು ಮಂದಿಯನ್ನು ನೋಡಿದ್ದೇವೆ. ಈಗ ಕೆಜಿಎಫ್, ಕಾಂತಾರ, ರಾಜಕುಮಾರ, ಈಗ ಸಲಾರ್ ಹೀಗೆ ಸಾಲು ಸಾಲು ಉತ್ತಮ ಸಿನಿಮಾಗಳನ್ನಿ ನೀಡಿರುವ ಪ್ರೋಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ ಬನ್ನಿ ನಮ್ಮ ತಂಡ ಸೇರಿಕೊಳ್ಳಿ ಎಂದು ಕರೆಯುತ್ತಿದೆ.

ನಮ್ಮ ಸಿನಿಮಾ ಲೋಕಕ್ಕೆ ಕಾಲಿರಿಸಿ ಎಂದು ಆಹ್ವಾನ ನೀಡಿದ ಹೊಂಬಾಳೆ ಫಿಲ್ಮ್ಸ
ಹೌದು... ಕೆಜಿಎಫ್, ಕಾಂತಾರ, ರಾಜಕುಮಾರ ನೋಡಿ ಖುಷಿ ಪಟ್ಟವರಿಗೆ ಅಬ್ಬಾ ಅದೆಷ್ಟು ಚೆನ್ನಾಗಿ ಸಿನಿಮಾ ಬಂದಿದೆ ಎಂದು ಅನಿಸಿದರೇ, ನಿರ್ದೇಶಕರಾಗುವ ಕನಸು ಕಂಡವರಿಗೆ ಒಮ್ಮೆಯಾದರೂ ಅಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಚಿಗುರಿರುತ್ತೆ. ಈಗ ಅದೇ ಕನಸಿಗೆ ಬಂದರೆ, ಹೊಂಬಾಳೆ ಫಿಲ್ಮ್ಸ್ "ನಮ್ಮ ಸಿನಿಮಾ ಲೋಕಕ್ಕೆ ಕಾಲಿರಿಸಿ" ಎಂದು ಸಹಾಯಕ ನಿರ್ದೇಶಕರಿಗೆ ಆಹ್ವಾನ ನೀಡಿದೆ.
ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಿದೆ. "ನಿಮ್ಮ ಸೃಜನಶೀಲತೆ ಮತ್ತು ಕಥೆ ಹೇಳುವ ಉತ್ಸಾಹವನ್ನು ನಮ್ಮ ಸಿನಿಮಾ ಲೋಕಕ್ಕೂ ತನ್ನಿ. ನಮ್ಮ ರೋಚಕ ಸಿನಿಮಾ ಪ್ರಾಜೆಕ್ಟ್‌ಗಳ ಭಾಗವಾಗಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಇಲ್ಲಿ ನೀವು ಕಲಿಯಬಹುದು, ಬೆಳೆಯಬಹುದು ಮತ್ತು ಬೆಳ್ಳಿ ಪರದೆಯ ಮ್ಯಾಜಿಕ್‌ಗಳಿಗೆ ಕೊಡುಗೆ ನೀಡಬಹುದು" ಎಂದು ಹೇಳಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ದೇಶನ ತಂಡ ಸೇರುವುದು ಹೇಗೆ...?
ಹೊಂಬಾಳೆ ಫಿಲ್ಮ್ಸ್ ನಿರ್ದೇಶನ ತಂಡವನ್ನು ಸೇರಲು ಬರಸುವವರು ಇದೇ ನವೆಂಬರ್ 11ನೇ ತಾರೀಖಿನಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮಲ್ಲೇಶ್ವರನಲ್ಲಿರುವ ಜಿಎಂ ರೆಜೋಯ್ಜ್ ಡಿಜಿಟಲ್ ಆಡಿಟೋರಿಯಂ ಬ್ಯಾಕ್ವೆಟ್‌ನಲ್ಲಿ ಸಂದರ್ಶನ ನೀಡಬಹುದು.
ಅರ್ಹತೆಗಳು
*ಸಹಾಯಕ ನಿರ್ದೇಶಕರಾಗಲು ಈ ಮೊದಲು ಫೀಚರ್ ಲೆಂಗ್ತ್ ಫಿಲ್ಮ್‌ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿರಬೇಕು.
*ಫೀಚರ್ ಲೆಂತ್ ಸಿನಿಮಾಗಳ ಪ್ರೀ ಪ್ರೋಡಕ್ಷನ್, ಪ್ರೋಡಕ್ಷನ್ ಮತ್ತು ಪೋಸ್ಟ್ ಪ್ರೋಡಕ್ಷನ್ ಗಳಲ್ಲಿ ಅನುಭವವನ್ನು ಹೊಂದಿರಬೇಕು.
* ಕಿರುಚಿತ್ರಗಳನ್ನು ನಿರ್ದೇಶಿಸಿದ್ದರೆ ಮೊದಲು ಆದ್ಯತೆ ನೀಡಲಾಗುತ್ತದೆ.
ಹೊಂಬಾಳೆ ಫಿಲ್ಮ್ಸ್
ಹೊಂಬಾಳೆ ಫಿಲ್ಮ್ಸ್ ಪ್ರೋಡಕ್ಷನ್ ಹೌಸ್‌ಗೆ ಚಲನಚಿತ್ರ ನಿರ್ಮಾಪಕ, ವಿಜಯ್ ಕಿರಂಗಂದೂರು ಮತ್ತು ಚಲುವೇಗೌಡ ಅಡಿಪಾಯ ಹಾಕಿದ್ದಾರೆ. ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಕನ್ನಡಿಗರಿಗೆ, ಕನ್ನಡ ಸಿನಿಮಾಗಳಿಗೆ ಗಟ್ಟಿ ನೆಲೆ ರಚಿಸುವ ಗುರಿಯನ್ನು ಹೊಂದಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಿನ್ನಿಂದಲೆ ' ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದೆ.
ಮಾಸ್ಟರ್ ಪೀಸ್, ಯುವರತ್ನ, ರಾಜಕುಮಾರ, ಕೆಜಿಎಫ್: ಅಧ್ಯಾಯ 1, 2, ಕಾಂತಾರ ಸೇರಿದಂತೆ ಬ್ಲಾಕ್‌ಬಸ್ಟರ್‌ಗಳನ್ನು ನಿರ್ಮಿಸಿದೆ. ಈಗ ಬಹುನಿರೀಕ್ಷಿತ ಸಲಾರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ದೇಶದ ಅತ್ಯಂತ ಬೇಡಿಕೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.


Click it and Unblock the Notifications











