'ಕಾಂತಾರ ಚಾಪ್ಟರ್- 1' ಬರೆದ ದಾಖಲೆಗಳ ಪಟ್ಟಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಮಹತ್ವಾಕಾಂಕ್ಷೆಯ ಸಿನಿಮಾ 'ಕಾಂತಾರ - 1' ಸಿನಿಮಾ ದಾಖಲೆ ಮೇಲೆ ದಾಖಲೆ ಬರೀತಿದೆ. ಈಗಾಗಲೇ ವಿಶ್ವದಾದ್ಯಂತ ಸಿನಿಮಾ 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸದ್ಯ ಚಿತ್ರವನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲು ಕೆಲಸ ಆರಂಭವಾಗಿದೆ.

ಭಾರತೀಯ ಚಿತ್ರರಂಗದಲ್ಲಿ 'ಕಾಂತಾರ - 1' ಸಿನಿಮಾ ಸಂಚಲನ ಸೃಷ್ಟಿಸಿದೆ. 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಕರ್ನಾಟಕದಲ್ಲೇ ಹೊಸ ದಾಖಲೆ ಬರೆದಿದೆ. ಯಶ್ ನಟನೆಯ 'KGF'- 2 ಚಿತ್ರದ ಕೆಲ ದಾಖಲೆಗಳನ್ನು ಕೂಡ ರಿಷಬ್ ಸಿನಿಮಾ ಹಿಂದಿಕ್ಕಿದೆ. ಬರೀ ಮೈಸೂರಿನಲ್ಲಿ ಸಿನಿಮಾ 10 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

Hombale Films Sets New Benchmark Kantara-1 Crosses 717 Crore Worldwide Breaks Multiple Box Office Records

ಬಾಕ್ಸಾಫೀಸ್ ಕಲೆಕ್ಷನ್

ಹಲವು ಮೊದಲುಗಳಿಗೆ 'ಕಾಂತಾರ - 1' ಸಿನಿಮಾ ನಾಂದಿ ಹಾಡಿದೆ. ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಮ್ಮ ಸಿನಿಮಾಗಳ ಅಧಿಕೃತ ಬಾಕ್ಸಾಫೀಸ್ ಲೆಕ್ಕ ಕೊಡುತ್ತಿದೆ. ಮೊದಲ ವಾರವೇ ಸಿನಿಮಾ ವಿಶ್ವದಾದ್ಯಂತ 509.25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಎರಡು ಬಾರಕ್ಕೆ 717.50 ಕೋಟಿ ರೂ. ಗಳಿಸಿರುವುದಾಗಿ ಮಾಹಿತಿ ಸಿಕ್ಕಿತ್ತು.

ಕೇರಳದಲ್ಲಿ ಗಳಿಕೆ

ಕರ್ನಾಟಕ ಬಿಟ್ಟರೆ ಕೇರಳದಲ್ಲಿ 'ಕಾಂತಾರ- 1' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ದೇವರ ನಾಡಲ್ಲಿ ಸಿನಿಮಾ ಎರಡು ವಾರಕ್ಕೆ 55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ. 'ಕಾಂತಾರ- 1' ದಕ್ಷಿಣ ಭಾರತದ 4 ಸಿನಿಮಾ ಮಾರ್ಕೆಟ್‌ಗಳಲ್ಲಿ 50 ಕೋಟಿ ರೂ.ಗಳಿಕೆ ಮಾಡಿದ 4ನೇ ಸಿನಿಮಾ ಎನಿಸಿಕೊಂಡಿದೆ. ಇದಕ್ಕೂ ಮುನ್ನ 'ಬಾಹುಬಲಿ- 2', 'KGF'- 2' ಹಾಗೂ 'ಜೈಲರ್' ಈ ಸಾಧನೆ ಮಾಡಿದ್ದವು. 'ಪುಷ್ಪ'-2 ಸಿನಿಮಾ ಕೂಡ ಕೇರಳದಲ್ಲಿ 20 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರಲಿಲ್ಲ.

ಆಸ್ಟೇಲಿಯಾದಲ್ಲಿ ಸಂಚಲನ

ದೂರದ ಆಸ್ಟ್ರೇಲಿಯಾದಲ್ಲಿ ಕೆಲ ಭಾರತದ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತವೆ. ಈ ವರ್ಷ ಅಲ್ಲಿ ಹೆಚ್ಚು ಗಳಿಕೆ ಕಂಡ ಸಿನಿಮಾ 'ಕಾಂತಾರ- 1' ಆಗಿದೆ. 'ಛಾವ', 'ಕೂಲಿ' ಸೇರಿ ಹಲವು ಸಿನಿಮಾಗಳ ಗಳಿಕೆಯನ್ನು ರಿಷಬ್ ಶೆಟ್ಟಿ ಸಿನಿಮಾ ಹಿಂದಿಕ್ಕಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪೋಸ್ಟರ್ ಸಮೇತ ಮಾಹಿತಿ ನೀಡಿದೆ.

ಇಂಗ್ಲೀಷ್ ಭಾಷೆಯಲ್ಲಿ ರಿಲೀಸ್

ಇದೀಗ 'ಕಾಂತಾರ- 1' ಸಿನಿಮಾ ಇಂಗ್ಲೀಷ್ ಭಾಷೆಗೆ ಡಬ್ ಆಗಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಈ ಹಿಂದೆ ಭಾರತದ ಕೆಲ ಸಿನಿಮಾಗಳು ಇಂಗ್ಲೀಷ್ ಭಾಷೆಗೆ ಡಬ್ ಆಗಿದ್ದಾವೆ. ಆದರೆ ಚಿತ್ರಮಂದಿರಗಳಲ್ಲಿ ದೊಡ್ಡದಾಗಿ ರಿಲೀಸ್ ಮಾಡಿರಲಿಲ್ಲ. ಇತ್ತೀಚೆಗೆ ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಆದರೆ 'ಕಾಂತಾರ- 1' ಸಿನಿಮಾ ತೆರೆಕಂಡ 20 ದಿನಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ. ಅಂದಹಾಗೆ ಇಂಗ್ಲೀಷ್ ಭಾಷೆಯಲ್ಲಿ ಚಿತ್ರದ ಕಾಲಾವಧಿಯನ್ನು 2 ಗಂಟೆ 14 ನಿಮಿಷಕ್ಕೆ ಇಳಿಸಿದ್ದಾರೆ.

ದೀಪಾವಳಿ ಸಂಭ್ರಮದಲ್ಲಿ 'ಥಮ್ಮ' ಸೇರಿದಂತೆ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಉತ್ತರಭಾರತದಲ್ಲಿ ರಶ್ಮಿಕಾ ನಟನೆಯ ಈ ಹಾರರ್ ಸಿನಿಮಾ ಸದ್ದು ಮಾಡ್ತಿದೆ. ಆದರೂ 'ಕಾಂತಾರ- 1' ಯಶಸ್ವಿ ಪ್ರದರ್ಶನ ಮುಂದುವರೆದಿದೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಕೂಡ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಲೇ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X