For Quick Alerts
  ALLOW NOTIFICATIONS  
  For Daily Alerts

  ಕಾಂತಾರಕ್ಕೆ ಬೇಕಾದ ಬಜೆಟ್ ನಮ್ಮತ್ರ ಇರಲಿಲ್ಲ, ಬೆನ್ನ ಹಿಂದೆ ನಿಂತದ್ದು ಆ ಇಬ್ಬರು ಎಂದ ಪ್ರಮೋದ್ ಶೆಟ್ಟಿ

  |

  ಕಾಂತಾರ.. ಕಾಂತಾರ.. ಕಾಂತಾರ.. ಕರ್ನಾಟಕದ ಸಿನಿ ಪ್ರಿಯರ ಬಾಯಲ್ಲಿ ಸದ್ಯ ಹೆಚ್ಚು ಮಟ್ಟದಲ್ಲಿ ಹರಿದಾಡುತ್ತಿರುವಂತ ಹೆಸರಿದು. ಕಾಂತಾರ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ ಎಂದಾಗಲೇ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು, ಚಿತ್ರದ ಫೋಟೋಗಳು, ಟೀಸರ್ ಹಾಗೂ ಟ್ರೈಲರ್ ಬಿಡುಗಡೆಯಾದಾಗ ಆ ನಿರೀಕ್ಷೆ ದುಪ್ಪಟ್ಟಾಯಿತು. ಹೀಗೆ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಾ ಹೋಯಿತು ಹಾಗೂ ಹುಟ್ಟಿಸಿದ್ದ ಆ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಲಿಲ್ಲ ಕಾಂತಾರ ಚಿತ್ರ.

  ಪ್ರೀಮಿಯರ್ ಶೋ ಮುಕ್ತಾಯವಾದಾಗ ಶುರುವಾದ ಕಾಂತಾರ ಚಿತ್ರದ ಕುರಿತ ಪ್ರಶಂಸೆಯ ಜಪ ಇಂದಿಗೂ ಸಹ ಮುಂದುವರಿಯುತ್ತಲೇ ಇದೆ. ಕರಾವಳಿ ಭಾಗದ ಜನರ ಪ್ರಮುಖ ಆಚರಣೆಯಾದ ದೈವಾರಾಧನೆ ಮತ್ತು ಭೂತ ಕೋಲದ ಕುರಿತಾದ ಮಾಹಿತಿ ಜತೆಗೆ ಪರಿಸರ ಮತ್ತು ಮಾನವನ ನಡುವಿನ ಸಂಘರ್ಷದ ಕತೆಯನ್ನು ಹೇಳಿದ ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ತಮ್ಮ ಅಮೋಘ ಅಭಿನಯದಿಂದ ನಾಯಕನಾಗಿಯೂ ಗೆಲುವು ಸಾಧಿಸಿದರು.

  ಕೆಂಪಾದವೋ ಎಲ್ಲಾ ಕೆಂಪಾದವೋ.. ಬ್ಲಾಕ್‌ಬಸ್ಟರ್ 'ಕಾಂತಾರ' ಪರ ರಮ್ಯಾ ಭರ್ಜರಿ ಪ್ರಚಾರ!ಕೆಂಪಾದವೋ ಎಲ್ಲಾ ಕೆಂಪಾದವೋ.. ಬ್ಲಾಕ್‌ಬಸ್ಟರ್ 'ಕಾಂತಾರ' ಪರ ರಮ್ಯಾ ಭರ್ಜರಿ ಪ್ರಚಾರ!

  ಚಿತ್ರದುದ್ದಕ್ಕೂ ಪ್ರೇಕ್ಷಕರ ಮನ ಗೆಲ್ಲುವಂತಹ ನಟನೆ ಮಾಡಿರುವ ರಿಷಬ್ ಶೆಟ್ಟಿ ಕೊನೆಯ ಇಪ್ಪತ್ತು ನಿಮಿಷಗಳಲ್ಲಂತೂ ಚಿತ್ರಮಂದಿರಕ್ಕೆ ಬಂದಿದ್ದ ಪ್ರೇಕ್ಷಕ ನಿಬ್ಬೆರಗಾಗುವಂತೆ ನಟನೆ ಮಾಡಿದ್ದಾರೆ. ಹೀಗೆ ಕಾಂತಾರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ನಡುವೆಯೇ ಚಿತ್ರತಂಡ ಸಕ್ಸಸ್ ಮೀಟ್ ನಡೆಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಶೆಟ್ಟಿ ಚಿತ್ರದ ಕುರಿತು ಹಾಗೂ ಅದರಲ್ಲಿಯೂ ವಿಶೇಷವಾಗಿ ಚಿತ್ರದ ಬಜೆಟ್ ಕುರಿತು ಮಾತನಾಡಿದ್ದಾರೆ.

  ಲೋ ಬಜೆಟ್ ಚಿತ್ರ ಮಾಡಿ ಹತ್ತಿಪ್ಪತ್ತು ಕೋಟಿ ದುಡೀತಾರೆ ಅಂತಿದ್ರು!

  ಲೋ ಬಜೆಟ್ ಚಿತ್ರ ಮಾಡಿ ಹತ್ತಿಪ್ಪತ್ತು ಕೋಟಿ ದುಡೀತಾರೆ ಅಂತಿದ್ರು!

  ಮೊದಲಿಗೆ ಮಾತು ಆರಂಭಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಮೋದ್ ಶೆಟ್ಟಿ ಚಿತ್ರದ ಬಜೆಟ್ ಕುರಿತಾಗಿ ಮಾತನಾಡಲು ಆರಂಭಿಸಿದರು. ಈ ಹಿಂದೆ ನಾವು ನಾವೇ ಬಂಡವಾಳವನ್ನು ಹೂಡಿ ಚಿತ್ರ ನಿರ್ಮಿಸುತ್ತಿದ್ದೆವು. ಆಗ ಇವರೇನು ಸಣ್ಣ ಬಂಡವಾಳ ಹೂಡಿ ಹತ್ತಿಪ್ಪತ್ತು ಕೋಟಿ ಸಂಪಾದಿಸಿ ಬಿಡುತ್ತಾರೆ ಎಂದು ಟ್ಯಾಗ್ ಲೈನ್ ನೀಡಿ ಬಿಟ್ಟಿದ್ದರು. ಆದರೆ ಆ ಚಿತ್ರಕ್ಕೆ ಎಷ್ಟು ದೊಡ್ಡ ಮಟ್ಟದಲ್ಲಿ ಹಣ ಹಾಕುತ್ತಿದ್ದೆವು ಎಂಬುದು ನಮಗೆ ಮಾತ್ರ ತಿಳಿದಿತ್ತು ಎಂದು ಪ್ರಮೋದ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಶೆಟ್ಟಿ ಗ್ಯಾಂಗ್ ಈ ಹಿಂದೆ ಹೆಚ್ಚು ಮೊತ್ತ ಹೂಡಿಯೇ ಚಿತ್ರ ನಿರ್ಮಿಸುತ್ತಿದ್ದು ಎಂಬುದನ್ನು ಪ್ರಮೋದ್ ಶೆಟ್ಟಿ ಹೇಳಿಕೊಂಡಿದ್ದಾರೆ.

   ನಮ್ಮ ಬಳಿ ಬಜೆಟ್ ಇರಲಿಲ್ಲ, ಕೈಹಿಡಿದದ್ದು ಆ ಇಬ್ಬರು

  ನಮ್ಮ ಬಳಿ ಬಜೆಟ್ ಇರಲಿಲ್ಲ, ಕೈಹಿಡಿದದ್ದು ಆ ಇಬ್ಬರು

  ಮಾತು ಮುಂದುವರಿಸಿದ ಪ್ರಮೋದ್ ಶೆಟ್ಟಿ ಆದರೆ ಈ ಬಾರಿ ಬಜೆಟ್ ತುಂಬ ದೊಡ್ಡದಿತ್ತು ಹಾಗೂ ನಮ್ಮ ಕೈನಲ್ಲಿ ಇದು ಆಗುವುದಿಲ್ಲ ಎಂಬುದು ಸಹ ತಿಳಿದಿತ್ತು, ಈ ಸಂದರ್ಭದಲ್ಲಿ ನಮ್ಮ ಬೆನ್ನಿಗೆ ನಿಂತದ್ದು ಕಾರ್ತಿಕ್ ಗೌಡ ಹಾಗೂ ವಿಜಯ್ ಕಿರಗಂದೂರು ಸರ್ ಎಂದು ಹೇಳಿಕೆ ನೀಡಿದರು. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಪ್ರಮೋದ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

   ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತಿತು

  ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತಿತು

  ದೊಡ್ಡ ಮೊತ್ತ ಹೂಡಲು ನಮ್ಮಿಂದ ಆಗದೇ ಇದ್ದಾಗ ಬಂದ ಹೊಂಬಾಳೆ ಫಿಲ್ಮ್ಸ್ ನಮಗೆ ಬೆನ್ನೆಲುಬಾಗಿ ನಿಂತಿತು ಎಂದು ಪ್ರಮೋದ್ ಶೆಟ್ಟಿ ಪ್ರಶಂಸಿಸಿದ್ದಾರೆ. ಛಾಯಾಗ್ರಾಹಕ ಅರವಿಂದ್ ಅವರು ಕೇಳಿದ ಸಲಕರಣೆಗಳನ್ನೆಲ್ಲ ನೀಡಿದರು, ರಿಷಬ್ ಶೆಟ್ಟಿ ಎಷ್ಟು ದಿನ ಚಿತ್ರೀಕರಣ ಬೇಕೆಂದು ಕೇಳಿದರೋ ಅಷ್ಟು ದಿನ ಚಿತ್ರೀಕರಣ ಮಾಡಲು ಬಂಡವಾಳ ಹೂಡಿದರು ಹಾಗೂ ನಮಗೆಲ್ಲಾ ಒಳ್ಳೊಳ್ಳೆ ಸಂಭಾವನೆಯನ್ನು ಸಹ ನೀಡಿದರು ಎಂದು ಪ್ರಮೋದ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

  English summary
  Hombale Films stood as backbone for Kantara when we failed to arrange budget says Pramod Shetty. Read on
  Sunday, October 2, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X