ಹೊಸ ಆರಂಭಕ್ಕೆ ಹೆಸರಿಡುವ ಸಮಯ: ಪುನೀತ್-ಪವನ್ ಸಿನಿಮಾದ ಟೈಟಲ್ ಅನಾವರಣಕ್ಕೆ ದಿನಾಂಕ ಫಿಕ್ಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪವನ್ ಕುಮಾರ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿರುವ ವಿಚಾರವನ್ನು ಕೆಲವು ತಿಂಗಳ ಹಿಂದೆಯೇ ಘೋಷಣೆ ಮಾಡಿದ್ರು. ಬಳಿಕ ಈ ಸಿನಿಮಾದ ಬಗ್ಗೆ ಯಾವುದೇ ಸದ್ದು, ಸುದ್ದಿ ಇರಲಿಲ್ಲ. ಸ್ಯಾಂಡಲ್ ವುಡ್ ನ ಪ್ರತಿಷ್ಟಿತ ಹೊಂಬಾಳೆ ಫಿಲಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

Recommended Video

ಅಪ್ಪು ಅಭಿಮಾನಿಗಳಿಗೆ ನಾಳೆ ಸಿಗಲಿದೆ ಭರ್ಜರಿ ಸುದ್ದಿ | Filmibeat Kannada

ಫ್ರೆಶ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಿನಿಮಾದ ಬಿಗ್ ಅಪ್ ಡೇಟ್ ಈಗ ಹೊರಬಿದ್ದಿದೆ. ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು ಎಂದು ಹೇಳುವ ಮೂಲಕ ಹೊಂಬಾಳೆ ಫಿಲಮ್ಸ್ ಅಪ್ಪು ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ ನೀಡಿದೆ. ಹೌದು, ಪುನೀತ್ ಹೊಸ ಸಿನಿಮಾದ ಟೈಟಲ್ ಅನ್ನು ನಾಳೆ ಜುಲೈ 1, ಬೆಳಗ್ಗೆ 11.46ಕ್ಕೆ ಘೋಷಣೆ ಮಾಡುವುದಾಗಿ ಬಹಿರಂಗ ಪಡಿಸಿದೆ.

ಮೊದಲ ಬಾರಿಗೆ ಪವನ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಿರ್ದೇಶನ ಮಾಡುತ್ತಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟೈಟಲ್ ಏನಾಗಿರಲಿದೆ, ಅಪ್ಪು ಪಾತ್ರ ಹೇಗಿರಲಿದೆ, ಯಾವ ರೀತಿಯ ಸಿನಿಮಾ ಎನ್ನುವ ಹತ್ತು ಹಲವಾರು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ.

Hombale Films to Announce Puneeth Rajkumar and Pawan Kumar Movie Title on July 1 at 11.46

ಪವನ್ ಕುಮಾರ್ ಈಗಾಗಲೇ 'ಲೂಸಿಯ', 'ಯು ಟರ್ನ್' ಅಂಥ ಭಿನ್ನ ಸಿನಿಮಾಗಳನ್ನು ನೀಡಿ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿದ್ದಾರೆ. ಹಾಗಾಗಿ ಅಪ್ಪುಗೆ ಯಾವ ರೀತಿಯ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇನ್ನು ಪುನೀತ್ ಜೊತೆ ಹೊಂಬಾಳೆ ಫಿಲಮ್ಸ್ ಗೆ ಇದು ಎರಡನೇ ಸಿನಿಮಾ. ಈ ಮೊದಲು ಹೊಂಬಾಳೆ ಫಿಲಮ್ಸ್ ಪುನೀತ್ ಜೊತೆ 'ಯುವರತ್ನ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

Hombale Films to Announce Puneeth Rajkumar and Pawan Kumar Movie Title on July 1 at 11.46

ಪವರ್ ಸ್ಟಾರ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಜುಲೈ ತಿಂಗಳಿಂದ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಪವನ್ ಕುಮಾರ್ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಅಂದಹಾಗೆ ಹೊಂಬಾಳೆ ಫಿಲಮ್ಸ್ ನಲ್ಲಿ ಮೂಡಿಬರುತ್ತಿರುವ 9ನೇ ಸಿನಿಮಾ ಇದಾಗಿದೆ. 'ಕೆಜಿಎಫ್-2', 'ಸಲಾರ್' ಮತ್ತು 'ಬಘೀರ' ಸಿನಿಮಾ ಬಿಡುಗಡೆಯಾಗಬೇಕಿದೆ.

More from Filmibeat

English summary
Hombale Films to Announce Puneeth Rajkumar and Pawan Kumar Movie Title on July 1 at 11.46.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X