For Quick Alerts
  ALLOW NOTIFICATIONS  
  For Daily Alerts

  ಜುಲೈ 11ಕ್ಕೆ ಹೊಂಬಾಳೆ ಹೊಸ ಸಿನಿಮಾ ಘೋಷಣೆ: ಹೀರೋ ಯಾರು?

  |

  ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಬೇಕಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸಲಾರ್' ನಡೆಯುತ್ತಿದೆ. ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಜೋಡಿಯ 'ದ್ವಿತ್ವ' ಟೈಟಲ್ ಪೋಸ್ಟರ್ ಪ್ರಕಟಿಸಿದೆ. ಇದೀಗ, ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದೆ ಹೊಂಬಾಳೆ ಫಿಲಂಸ್.

  'ದ್ವಿತ್ವ' ತಮ್ಮ ಪ್ರೊಡಕ್ಷನ್‌ನಲ್ಲಿ ಬರುತ್ತಿರುವ ಒಂಬತ್ತನೇ ಸಿನಿಮಾ. ಈಗ ಹತ್ತನೇ ಚಿತ್ರ ಪ್ರಕಟಿಸಿದ್ದಾರೆ. ಜುಲೈ 11 ರಂದು ಸಿನಿಮಾದ ಫಸ್ಟ್ ಲುಕ್ ಹಾಗೂ ಇನ್ನಿತರ ವಿವರ ನೀಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿದೆ. ಈ ಚಿತ್ರ ಯಾವುದು? ಹೀರೋ ಯಾರು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಜುಲೈ 11 ದಿನಾಂಕ ಎಂದಾಕ್ಷಣ ಇಬ್ಬರು ಸ್ಟಾರ್ ಹೀರೋಗಳಿಗೆ ಲಿಂಕ್ ಮಾಡಿ ನೆಟ್ಟಿಗರು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ, ಹೊಂಬಾಳೆ 10ನೇ ಚಿತ್ರದ ನಾಯಕ ಯಾರು? ಮುಂದೆ ಓದಿ....

  ಸ್ಟಾರ್ ನಿರ್ದೇಶಕಿ ಜೊತೆ ಹೊಂಬಾಳೆ ಹೊಸ ಸಿನಿಮಾ? ಹೀರೋ ಬಗ್ಗೆ ಚರ್ಚೆಸ್ಟಾರ್ ನಿರ್ದೇಶಕಿ ಜೊತೆ ಹೊಂಬಾಳೆ ಹೊಸ ಸಿನಿಮಾ? ಹೀರೋ ಬಗ್ಗೆ ಚರ್ಚೆ

  ರಕ್ಷಿತ್ ಶೆಟ್ಟಿ ಫಿಕ್ಸ್?

  ರಕ್ಷಿತ್ ಶೆಟ್ಟಿ ಫಿಕ್ಸ್?

  ರಕ್ಷಿತ್ ಶೆಟ್ಟಿ ಜೊತೆ ಹೊಂಬಾಳೆ ಫಿಲಂಸ್ ಸಿನಿಮಾವೊಂದು ಮಾಡಲಿದ್ದಾರೆ ಎನ್ನುವ ವಿಚಾರ ಬಹಳ ದಿನಗಳಿಂದಲೇ ಚರ್ಚೆಯಲ್ಲಿದೆ. ಇದೀಗ, ಜುಲೈ 11 ಎಂದು ಹೊಂಬಾಳೆ ಪ್ರಕಟಿಸಿದ ನಂತರ ಪಕ್ಕಾ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಹೀರೋ ಎಂದು ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣನೂ ಇದೆ.

  ಜುಲೈ 11ರ ನಂಟು ಏನು?

  ಜುಲೈ 11ರ ನಂಟು ಏನು?

  ಜುಲೈ 11ನೇ ತಾರೀಕಿಗಾಗಿ ರಕ್ಷಿತ್ ಶೆಟ್ಟಿ ಹಾಗೂ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ಆರೋಪಕ್ಕೆ ಜುಲೈ 11 ರಂದು ಉತ್ತರ ಕೊಡ್ತೇನೆ ಎಂದು ರಕ್ಷಿತ್ ಸವಾಲು ಹಾಕಿದ್ದರು. ಈಗ ಹೊಂಬಾಳೆ ಅದೇ ದಿನ ಹೊಸ ಸಿನಿಮಾ ಪ್ರಕಟಿಸುತ್ತಿದೆ. ಬಹುಶಃ ಇದು ರಕ್ಷಿತ್ ಸಿನಿಮಾನೇ ಇರಬಹುದಾ ಎಂಬ ಅನುಮಾನ ಕಾಡ್ತಿದೆ.

  ಜುಲೈ 12ಕ್ಕೆ ಶಿವಣ್ಣ ಹುಟ್ಟುಹಬ್ಬ

  ಜುಲೈ 12ಕ್ಕೆ ಶಿವಣ್ಣ ಹುಟ್ಟುಹಬ್ಬ

  ಇನ್ನು ಸರ್ಪ್ರೈಸ್ ಎಂಬಂತೆ ಶಿವಣ್ಣ ಹೆಸರು ಸಹ ಚರ್ಚೆಗೆ ಬಂದಿದೆ. ಜುಲೈ 12 ರಂದು ಶಿವರಾಜ್ ಕುಮಾರ್ ಹುಟ್ಟುಹಬ್ಬವಿದ್ದು, ಆ ಹಿನ್ನೆಲೆ ಹ್ಯಾಟ್ರಿಕ್ ಹೀರೋ ಜೊತೆಗಿನ ಸಿನಿಮಾ ಅನೌನ್ಸ್ ಮಾಡಬಹುದು ಎಂಬ ನಿರೀಕ್ಷೆಯೂ ಹುಟ್ಟಿಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿವಣ್ಣ ಜೊತೆ ಹೊಂಬಾಳೆ ನಿರ್ಮಾಪಕರು ಕಾಣಿಸಿಕೊಂಡಿರುವ ಉದಾಹರಣೆ ಇಲ್ಲ.

  ಸುಧಾ ಕೊಂಗರಾ ಸಿನಿಮಾ?

  ಸುಧಾ ಕೊಂಗರಾ ಸಿನಿಮಾ?

  ಸೂರರೈ ಪೊಟ್ರು ನಿರ್ದೇಶಕಿ ಸುಧಾ ಕೊಂಗರಾ ಜೊತೆಯೂ ಹೊಂಬಾಳೆ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಬಹುಶಃ ಈ ಚಿತ್ರವನ್ನು ಅಧಿಕೃತವಾಗಿ ಆರಂಭಿಸಬಹುದಾ?

  ಅಪ್ಪು-ಸಂತೋಷ್ ಸಿನಿಮಾ?

  ಅಪ್ಪು-ಸಂತೋಷ್ ಸಿನಿಮಾ?

  ಯುವರತ್ನ ಬಳಿಕ ಪುನೀತ್ ರಾಜ್ ಕುಮಾರ್ ಜೊತೆ ಸಂತೋಷ್ ಆನಂದ್ ರಾಮ್ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಖಚಿತಪಡಿಸಿದ್ದರು. ಈ ಚಿತ್ರಕ್ಕೂ ಹೊಂಬಾಳೆ ಸಂಸ್ಥೆಯೇ ಬಂಡವಾಳ ಹಾಕುತ್ತಿದೆ. ಈ ಸಿನಿಮಾ ಅನೌನ್ಸ್ ಆಗಬಹುದಾ?

  Dr Shiva Rajkumar Biography | ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada
  ಯಶ್ ಜೊತೆ ಮತ್ತೆ ಸಿನಿಮಾ

  ಯಶ್ ಜೊತೆ ಮತ್ತೆ ಸಿನಿಮಾ

  ಕೆಜಿಎಫ್ ಚಾಪ್ಟರ್ 2 ಬಳಿಕ ಯಶ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ತಮ್ಮ ಸಂಸ್ಥೆಗೆ ಪ್ಯಾನ್ ಇಂಡಿಯಾ ಸಕ್ಸಸ್ ಕೊಟ್ಟಿರುವ ಯಶ್ ಜೊತೆ ಹೊಂಬಾಳೆ ಮತ್ತೆ ಹೊಸ ಸಿನಿಮಾ ಕೈಗೆತ್ತಿಕೊಳ್ಳಬಹುದಾ ಎಂಬ ನಿರೀಕ್ಷೆಯೂ ಅಭಿಮಾನಿಗಳಲ್ಲಿದೆ. ಇದಕ್ಕೆಲ್ಲಾ ಉತ್ತರ ಜುಲೈ 11ಕ್ಕೆ ಕಾಯಬೇಕಿದೆ.

  English summary
  Kannada Famous Banner Hombale Films to Launch Their 10th Movie Titlel on July 11 at 12.51 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X