For Quick Alerts
  ALLOW NOTIFICATIONS  
  For Daily Alerts

  ಮಧ್ಯರಾತ್ರಿ ಕಿಚ್ಚ ಸುದೀಪ್‌ ಬ್ರೇಕಿಂಗ್ ನ್ಯೂಸ್: ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಾದ್‌ಶಾ ಮುಂದಿನ ಸಿನಿಮಾ?

  |

  ಹೊಂಬಾಳೆ ಫಿಲ್ಮ್ಸ್ ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾ ನಿರ್ಮಾಣ ಸಂಸ್ಥೆಯಾಗಿದ್ದು, ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಿಟ್‌ ಸಿನಿಮಾಗಳನ್ನೇ ನೀಡಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರ 'ಯುವರತ್ನ', 'ರಾಜಕುಮಾರ' ಹಾಗೂ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ 'ಕೆಜಿಎಫ್‌' ಹಾಗೂ 'ಕೆಜಿಎಫ್' ಚಾಪ್ಟರ್‌ 2 ನಂತಹ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.

  ಈವರೆಗೆ ಎಲ್ಲಾ ಹಿಟ್‌ ಸಿನಿಮಾಗಳನ್ನೇ ನೀಡಿರುವ ಹೊಂಬಾಳೆ ಫಿಲ್ಮ್ಸ್ ಸದ್ಯ ರಿಷಬ್‌ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದ ಯಶಸ್ಸಿನಲ್ಲಿದೆ. 'ಕಾಂತಾರ' ಚಿತ್ರ ಎಲ್ಲೆಡೆ ಧೂಳೆಬ್ಬಿಸುತ್ತಿದ್ದು, ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಯಶಸ್ಸನ್ನು ಸಾಧಿಸಿದೆ. ಹೊಂಬಾಳೆ ಫಿಲ್ಮ್ಸ್ ಸದ್ಯ ಕನ್ನಡ ಮಾತ್ರಲ್ಲದೇ ಇತರ ಭಾಷೆಗಳ ಚಿತ್ರವನ್ನು ಸಹ ನಿರ್ಮಾಣ ಮಾಡುತ್ತಿದೆ.

  ಲೂಸಿಯಾ ಪವನ್ - ಫಹಾದ್ ಫಾಸಿಲ್ ಚಿತ್ರ ಘೋಷಿಸಿದ ಹೊಂಬಾಳೆ; ಇದೇನಾ ಅಪ್ಪು ಮಾಡಬೇಕಿದ್ದ ದ್ವಿತ್ವ?ಲೂಸಿಯಾ ಪವನ್ - ಫಹಾದ್ ಫಾಸಿಲ್ ಚಿತ್ರ ಘೋಷಿಸಿದ ಹೊಂಬಾಳೆ; ಇದೇನಾ ಅಪ್ಪು ಮಾಡಬೇಕಿದ್ದ ದ್ವಿತ್ವ?

  ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಚಿತ್ರಗಳನ್ನೇ ನೀಡಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾ ನಿರ್ಮಾಣವಾಗಿದೆ. ಯುವರಾಜಕುಮಾರ್‌ನ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲೇ ಮತ್ತೊಂದು ಬಿಗ್‌ ಬಜೆಟ್‌ ಚಿತ್ರವನ್ನು ನಿರ್ಮಾಣ ಮಾಡಲು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಜ್ಜಾಗಿದೆ.

  ಹೊಂಬಾಳೆ ಫಿಲ್ಮ್ಸ್ ಜೊತೆ ಬಾದ್‌ ಶಾ ಮುಂದಿನ ಚಿತ್ರ?

  ಹೊಂಬಾಳೆ ಫಿಲ್ಮ್ಸ್ ಜೊತೆ ಬಾದ್‌ ಶಾ ಮುಂದಿನ ಚಿತ್ರ?

  ಈಗಾಗಲೇ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ನಾಲ್ಕೈದು ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಬಾದ್‌ ಶಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಮುಂದಿನ ಚಿತ್ರಕ್ಕೆ ಬಂಡವಾಳ ಹಾಕಲು ಸಜ್ಜಾಗಿದೆ. ಹೊಂಬಾಳೆ ಫಿಲ್ಮ್ಸ್ ಕ್ರಿಯೆಟಿವ್‌ ಪ್ರೊಡ್ಯೂಸರ್‌ ಕಾರ್ತಿಕ್‌ ಗೌಡ ಈ ವಿಚಾರದ ಸುಳಿವನ್ನು ನೀಡಿದ್ದಾರೆ. ಕಾರ್ತಿಕ್‌ ಗೌಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಕಿಚ್ಚ ಸುದೀಪ್‌ ಅವರೊಂದಿಗೆ ಫೋಟೋ ಶೇರ್‌ ಮಾಡಿದ್ದು, ಹೊಸ ಆರಂಭ ಎಂದು ಬರೆದುಕೊಂಡಿದ್ದಾರೆ.

  ಕಿಚ್ಚ ಸುದೀಪ್‌ ಅಭಿಮಾನಿಗಳು ಫುಲ್ ಖುಷ್‌

  ಕಿಚ್ಚ ಸುದೀಪ್‌ ಅಭಿಮಾನಿಗಳು ಫುಲ್ ಖುಷ್‌

  ಕಾರ್ತಿಕ್‌ ಗೌಡ ಅವರ ಈ ಪೋಸ್ಟ್‌ ತುಂಬಾ ಕುತೂಹಲ ಕೆರಳಿಸಿದೆ. ಈ ಮೂಲಕ ಕಿಚ್ಚ ಸುದೀಪ್‌ ನಟನೆಯ ಮುಂದಿನ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹಾಕುತ್ತಿರುವುದು ಬಹುತೇಕ ಖಚಿತವಾಗಿದ್ದು, ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದರಲ್ಲಿ ಎರಡು ಮಾತಿಲ್ಲ. ಕಾರ್ತಿಕ್‌ ಗೌಡ ಪೋಸ್ಟ್‌ನಿಂದ ಕಿಚ್ಚ ಸುದೀಪ್‌ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ಬಹಿರಂಗ ಪಡಿಸಬೇಕಿದ್ದು, ಈ ಚಿತ್ರದ ಮುಂದಿನ ಅಪ್ಡೇಟ್‌ ತಿಳಿಯಲು ಸುದೀಪ್‌ ಅಭಿಮಾನಿಗಳು ಕಾತುರರಾಗಿದ್ದಾರೆ.

  ಕಿಚ್ಚ ಸುದೀಪ್‌ ಮುಂದಿನ ಚಿತ್ರ ಯಾವುದು..?

  ಕಿಚ್ಚ ಸುದೀಪ್‌ ಮುಂದಿನ ಚಿತ್ರ ಯಾವುದು..?

  'ವಿಕ್ರಾಂತ್‌ ರೋಣ' ಯಶಸ್ಸಿನ ಬಳಿಕ ಕಿಚ್ಚ ಸುದೀಪ್‌ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಸದ್ಯ ನಟ ಸುದೀಪ್‌ ಅವರ ಕೈಯಲ್ಲಿ 'ಬಿಲ್ಲ ರಂಗ ಬಾಷ' ಚಿತ್ರವಿದ್ದು, ಈ ಸಿನಿಮಾದ ಬಗ್ಗೆ ಹಲವು ದಿನಗಳಿಂದ ಸಾಕಷ್ಟು ವಿಚಾರಗಳು ಹರಿದಾಡುತ್ತಿದೆ. ಸುದೀಪ್ ಹಾಗೂ ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ 'ಬಿಲ್ಲ ರಂಗ ಬಾಷ' ಚಿತ್ರದ ಬಗ್ಗೆಯೂ ಹೊಸ ಅಪ್ಡೇಟ್‌ ಹೊರಬೀಳಬೇಕಿದೆ. ಈ ಮಧ್ಯೆ ಇದೀಗ ಕಾರ್ತಿಕ್‌ ಗೌಡ ಹೊಸ ವಿಚಾರ ಹಂಚಿಕೊಂಡಿರುವುದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

  ಫಹಾದ್‌ ಫಾಸಿಲ್‌ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ

  ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ಸಪ್ಟೆಂಬರ್‌ 30ರಂದು ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತಗೊಳಿಸಿತ್ತು. ಇದೀಗ ಮಲಯಾಳಂ ನಟ ಫಹಾದ್‌ ಫಾಸಿಲ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಲೂಸಿಯ ಖ್ಯಾತಿಯ ಪವನ್‌ ಕುಮಾರ್‌ ನಿರ್ದೇಶನದ ಚಿತ್ರದ ಟೈಟಲ್‌ ಅನ್ನು ಈಗಾಗಲೇ ರಿವೀಲ್‌ ಮಾಡಲಾಗಿದ್ದು, 'ಧೂಮ್‌' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಫಹಾದ್‌ ಫಾಸಿಲ್‌ಗೆ ಜೋಡಿಯಾಗಿ ಅಪರ್ಣ ಬಾಲಮುರಳಿ ಕಾಣಿಸಿಕೊಳ್ಳಲಿದ್ದು, ಅಕ್ಟೋಬರ್ 9ರಿಂದ ಚಿತ್ರೀಕರಣ ಆರಂಭವಾಗುತ್ತದೆ ಎನ್ನಲಾಗಿದೆ.

  English summary
  Hombale films Creative Producer Karthik gowda share photo with kiccha sudeep and caption it To new beginnings.
  Thursday, October 6, 2022, 9:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X