»   » 'ರಾಜಕುಮಾರ' ಚಿತ್ರದ ಯಶಸ್ವಿ ಜೋಡಿಯಿಂದ ಮತ್ತೊಂದು ಹೊಸ ಚಿತ್ರ

'ರಾಜಕುಮಾರ' ಚಿತ್ರದ ಯಶಸ್ವಿ ಜೋಡಿಯಿಂದ ಮತ್ತೊಂದು ಹೊಸ ಚಿತ್ರ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಯಶಸ್ವಿ ನೂರು ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಜುಲೈ 7 ರಂದು ಅರಮನೆ ಮೈದಾನದಲ್ಲಿ 'ರಾಜಕುಮಾರ' ಚಿತ್ರದ ಸೆಂಚುರಿ ಸಂಭ್ರಮವನ್ನ ಆಚರಿಸಲಿದೆ. ಈ ಮಧ್ಯೆ 'ರಾಜಕುಮಾರ' ನಿರ್ಮಾಪಕರಿಂದ ಮತ್ತೊಂದು ಗುಡ್ ನ್ಯೂಸ್ ಬಂದಿದೆ.

'ರಾಜಕುಮಾರ' ಎಂಬ ಮೆಗಾ ಸೂಪರ್ ಹಿಟ್ ಸಿನಿಮಾ ನೀಡಿದ ಯಶಸ್ವಿ ಜೋಡಿ ಮತ್ತೆ ಒಂದಾಗುತ್ತಿದೆ. 'ರಾಜಕುಮಾರ' ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಮತ್ತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಜೊತೆಯಲ್ಲಿ ಕೆಲಸ ಮಾಡಲಿದ್ದಾರಂತೆ. 'ಹೊಂಬಾಳೆ ಫಿಲಂಸ್'ನ ಮುಂದಿನ ಚಿತ್ರಕ್ಕೆ ಕೂಡ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಚಿತ್ರಜಗತ್ತು ಮೆಚ್ಚುವ ಕೆಲಸಕ್ಕೆ ಮುಂದಾದ 'ರಾಜಕುಮಾರ' ನಿರ್ಮಾಪಕ

Hombale Films Will Produce Santhosh Anandram's Next Movie

ಹೌದು, ಈ ಸುದ್ದಿಯನ್ನ 'ರಾಜಕುಮಾರ' ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಅವರೇ ಖಚಿತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕಾರ್ತಿಕ್ ಗೌಡ, ''ಹೊಂಬಾಳೆ ಫಿಲಂಸ್ ಮತ್ತು ಸಂತೋಷ್ ಆನಂದ್ ರಾಮ್ ಮತ್ತೆ ಒಂದಾಗುತ್ತಿದ್ದೇವೆ. ಈ ಚಿತ್ರದ ಬಗ್ಗೆ ಮುಂದಿನ ತಿಂಗಳು ವಿವರ ನೀಡುತ್ತೇವೆ'' ಎಂದು ಟ್ವೀಟ್ ಮಾಡಿದ್ದಾರೆ.

ಅಪ್ಪು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಸುದೀಪ್, ಯಶ್, ಉಪೇಂದ್ರ.!

ಮತ್ತೊಂದೆಡೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮುಂದಿನ ಚಿತ್ರ ಯಾವುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ ಶಿವರಾಜ್ ಕುಮಾರ್ ಅವರ ಜೊತೆ ಸಂತೋಷ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ನಿರ್ದೇಶಕರು ಎಲ್ಲಿಯೂ ಬಹಿರಂಗಪಡಿಸಿಲ್ಲ. ಈ ಮಧ್ಯೆ ಹೊಂಬಾಳೆ ಫಿಲಂಸ್, ಸಂತೊಷ್ ಅವರ ಮುಂದಿನ ಚಿತ್ರಕ್ಕೆ ನಾವೇ ಪ್ರೊಡ್ಯೂಸರ್ ಎಂದಿದೆ. ಬಹುಶಃ ಇದು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿರುವ ಮೂರನೇ ಚಿತ್ರವೇ ಇರಬಹುದು?

Hombale Films Will Produce Santhosh Anandram's Next Movie

'ರಾಜಕುಮಾರ' ಚಿತ್ರದ ಯಶಸ್ವಿ ಜೋಡಿಯ ಮುಂದಿನ ಚಿತ್ರದ ಬಗ್ಗೆ ತಿಳಿದುಕೊಳ್ಳಲು ಫಿಲ್ಮಿಬೀಟ್ ಓದುತ್ತಿರಿ.....

English summary
Santhosh Anandram and Hombale Films Will Collaborate Once Again for Next Project Says Producer Karthika Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada