ಕೊರೊನಾ ಭೀತಿಯಿಂದ ಮನೆಯಲ್ಲಿದ್ದೀರಾ? ಅಮೆಜಾನ್-ನೆಟ್‌ಫ್ಲಿಕ್ಸ್‌ಗಳಲ್ಲಿ ಈ ಸಿನಿಮಾಗಳನ್ನು ನೋಡಿರಿ
ಕೊರೊನಾ ಭೀತಿಯಿಂದಾಗಿ ಹಲವು ಕಚೇರಿಗಳು ಕೆಲಸ ನಿಲ್ಲಿಸಿವೆ, ಇನ್ನು ಕೆಲವು ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಜನರು ತಮ್ಮ ಬಹುಸಮಯವನ್ನು ಈಗ ಮನೆಯಲ್ಲಿಯೇ ಕಳೆಯುತ್ತಿದ್ದಾರೆ.
Recommended Video
ಮನೆಯಲ್ಲಿದ್ದು ಬೋರ್ ಹೊಡೆಯಿತೆಂದು ಸಿನಿಮಾಕ್ಕೂ ಹೋಗುವಂತಿಲ್ಲ ಚಿತ್ರಮಂದಿರಗಳು, ಮಾಲ್‌ಗಳು ಬಂದ್ ಆಗಿವೆ. ಇಂತಹಾ ಸಮಯದಲ್ಲಿ ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್‌ಗಳೇ ಸಿನಿಮಾ ಪ್ರೀತಿಯ ಮಂದಿಗೆ ಆಸರೆ. ಸಮಯ ಕೊಲ್ಲುವ ಸಂಗಾತಿಗಳು.
ಮನೆಯಲ್ಲೇ ಕೂತು ಸಮಯ ಕೊಲ್ಲಲು ಹೆಣಗುತ್ತಿರುವವರಿಗೆ ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್‌ಗಳು ಜೊತೆಯಾಗಿವೆ. ಇದೇ ಸಮಯವನ್ನು ಉಪಯೋಗಿಸಿಕೊಳ್ಳಲು ಅಮೆಜಾನ್ ಪ್ರೈಂ ಮತ್ತು ನೆಟ್‌ಫ್ಲಿಕ್ಸ್‌ಗಳು ಒಳ್ಳೆಯ ಸಿನಿಮಾಗಳನ್ನು ಬಿಡುಗಡೆ ಮಾಡಿವೆ.

ಅಮೆಜಾನ್ ಪ್ರೈಂ ನಲ್ಲಿ ಉತ್ತಮ, ಹೊಸ ಕನ್ನಡ ಸಿನಿಮಾಗಳು
ಅಮೆಜಾನ್ ಪ್ರೈಂ ನಲ್ಲಿ ಕನ್ನಡದ ಲವ್ ಮಾಕ್‌ಟೇಲ್ ಮತ್ತು ದಿಯಾ ಸಿನಿಮಾಗಳು ಚೆನ್ನಾಗಿ ಸದ್ದು ಮಾಡುತ್ತಿವೆ. ದಿಯಾ, ಲವ್ ಮಾಕ್ಟೆಲ್ ಸಿನಿಮಾಗಳು ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣಲಿಲ್ಲ ಆದರೆ ಅಮೆಜಾನ್ ನಲ್ಲಿ ಬಿಡುಗಡೆ ಆದ ನಂತರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವೆರಡು ನಿಮ್ಮ ಮೊದಲ ಆಯ್ಕೆ ಆಗಲಿ.

ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳು
ಇತ್ತೀಚೆಗೆ ಬಿಡುಗಡೆ ಆಗಿದ್ದ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಸಹ ಅಮೆಜಾನ್ ಪ್ರೈಂ ನಲ್ಲಿದೆ ಅದನ್ನು ಹೊರತುಪಡಿಸಿ ಹಲವು ಹೊಸ, ಹಳೆಯ ಕನ್ನಡ ಸಿನಿಮಾಗಳು ಪ್ರೈಂ ನಲ್ಲಿ ಲಭ್ಯವಿದ್ದು, ಕನ್ನಡ ಸಿನಿ ಪ್ರೇಮಿಗಳು ಆರಾಮವಾಗಿ ಸಮಯ ಕಳೆಯಲು ಬೇಕಾದಷ್ಟು ಸರಕು ಲಭ್ಯವಿದೆ.

ನೆಟ್‌ಫ್ಲಿಕ್ಸ್‌ನದ್ದು ಮತ್ತೊಂದು ಕತೆ
ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ನೆಟ್‌ಫ್ಲಿಕ್ಸ್ ಸ್ವಲ್ಪ ದುಬಾರಿ ಎನಿಸಿದರೂ ಅಳತೆಗೆ ಸಿಗದಷ್ಟು ಮನೊರಂಜನಾ, ಬೌದ್ಧಿಕ ಸರಕು ಹೊಂದಿದೆ. ನೆಟ್‌ಫ್ಲಿಕ್ಸ್ ನ ಬಳಕೆದಾರರು ಅಸಂಖ್ಯ. ಅಮೆಜಾನ್ ಪ್ರೈಂ ಗೆ ಹೋಲಿಸಿದರೆ ಕಂಟೆಂಟ್ ಸಹ ರಿಚ್ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಹೊಕ್ಕರೆ ಹೊರಬರುವುದು ಕಷ್ಟ.

ಕಟ್ಟಿ ಹಾಕುವ ವೆಬ್ ಸೀರೀಸ್‌ಗಳು
ನೆಟ್‌ಫ್ಲಿಕ್ಸ್ ತನ್ನ ವೆಬ್ ಸೀರೀಸ್‌ಗಳಿಗೆ ಬಹಳ ಫೇಮಸ್. ಸೇಕ್ರೆಡ್ ಗೇಮ್ಸ್, ಮನಿ ಹೈಸ್ಟ್, ನಾರ್ಕೋಸ್, ಸ್ಟ್ರೇಂಜರ್ ಥಿಂಗ್ಸ್, ಸೆಕ್ಸ್ ಎಜುಕೇಶನ್, ಬ್ರೇಕಿಂಗ್ ಬ್ಯಾಡ್, ಕ್ವಾಂಟಿಕೋ ಜೊತೆಗೆ ನೆಟ್‌ಫ್ಲಿಕ್ಸ್ ಒರಿಜಿನಲ್ಸ್‌ಗಳು ಭರಪೂರ ಮನರಂಜನೆ ಒದಗಿಸುತ್ತವೆ.


Click it and Unblock the Notifications











