For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಫಸ್ಟ್ ಕಾಪಿ ನೋಡಿದವರು ಹೇಳಿದ್ದೇನು? ಓವರ್‌ಸೀಸ್ ರಿಲೀಸ್ ಪ್ಲ್ಯಾನ್ ಹೇಗಿದೆ ಗೊತ್ತಾ?

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ ನೋಡಿದವರು ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂದು ಫಿಕ್ಸ್ ಆಗ್ಬಿಟ್ಟಿದ್ದಾರೆ. ರಿಲೀಸ್ ಡೇಟ್ ಹತ್ತಿರ ಬಂದರೂ ಪ್ರಮೋಷನ್ ಮಾಡ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೂ ಚಿತ್ರತಂಡ ನಿಧಾನವಾಗಿ ಪ್ರಮೋಷನ್ ಶುರು ಮಾಡಿದೆ.

  ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಕಾಂತಾರ' ಸಿನಿಮಾ ನಿರ್ಮಾಣವಾಗಿದೆ. ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಕಿಶೋರ್ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ 'ಕಾಂತಾರ' ಚಿತ್ರಕ್ಕೆ ಅರವಿಂದ್. ಎಸ್‌. ಕಶ್ಯಪ್ ಛಾಯಾಗ್ರಹಣ ಇದೆ. ಅಜನೀಶ್ ಲೋಕನಾಥ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದಲ್ಲೇ ದೇಶ ವಿದೇಶದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

  ಬಗೆ ಬಗೆ ವೇಷ.. ಆವೇಶ: 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ!ಬಗೆ ಬಗೆ ವೇಷ.. ಆವೇಶ: 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ!

  'ಕಾಂತಾರ' ಸಿನಿಮಾ ಅದ್ಬುತವಾಗಿ ಮೂಡಿ ಬಂದಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿತ್ತು. ಸದ್ಯ ಫಸ್ಟ್ ಕಾಪಿ ಸಿದ್ಧವಾಗಿದ್ದು, ಸಿನಿಮಾ ನೋಡಿದವರು ಥ್ರಿಲ್ಲಾಗಿದ್ದಾರೆ. ಇನ್ನು ಓವರ್‌ಸೀಸ್‌ನಲ್ಲೂ ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ.

  ಮೈಸೂರು ಯುವ ದಸರಾದಲ್ಲಿ 'ಕಾಂತಾರ'

  ಮೈಸೂರು ಯುವ ದಸರಾದಲ್ಲಿ 'ಕಾಂತಾರ'

  ಸಿನಿಮಾ ಬಿಡುಗಡೆಗೆ 15 ದಿನ ಬಾಕಿಯಿದೆ. ಸರಿಯಾಗಿ ಪ್ರಮೋಷನ್ ಮಾಡ್ತಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಇದೀಗ ಸಿನಿಮಾ ಪ್ರಮೋಷನ್ ಶುರು ಮಾಡಿದೆ ಚಿತ್ರತಂಡ. ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಸಿನಿಮಾ ಟ್ರೈಲರ್ ಪ್ರದರ್ಶಿಸಲಾಗಿದೆ. ನಿರ್ದೇಶಕ-ನಟ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ವೇದಿಕೆಯಲ್ಲಿ ಮಾತನಾಡಿ ಸಿನಿಮಾವನ್ನು ನೋಡಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

  Kantara Trailer: ಸೇಡಿನ ಕಥೆ ಹೇಳುವ 'ಕಾಂತಾರ' ಟ್ರೈಲರ್!Kantara Trailer: ಸೇಡಿನ ಕಥೆ ಹೇಳುವ 'ಕಾಂತಾರ' ಟ್ರೈಲರ್!

   'ಕಾಂತಾರ' ಫಸ್ಟ್ ಕಾಪಿ ಹೇಗಿದೆ?

  'ಕಾಂತಾರ' ಫಸ್ಟ್ ಕಾಪಿ ಹೇಗಿದೆ?

  ಕರಾವಳಿ ಮಣ್ಣಿನ ಸೊಗಡು ಈ ಸಿನಿಮಾದಲ್ಲಿದೆ ಅನ್ನೋದು ಟ್ರೈಲರ್ ನೋಡಿದ್ರೆ, ಗೊತ್ತಾಗುತ್ತೆ. ದಟ್ಟ ಕಾಡು, ಭೂತಕೋಲ, ಕಂಬಳ ಕ್ರೀಡೆ ಸೇರಿದಂತೆ ಅಲ್ಲಿನ ಸಂಪ್ರದಾಯಗಳು, ಆಚಾರ ವಿಚಾರಗಳನ್ನು 'ಕಾಂತಾರ' ಚಿತ್ರದಲ್ಲಿ ಹಾಸು ಹೊಕ್ಕಾಗಿದೆ. ಈಗಾಗಲೇ ಕೆಆರ್‌ಜಿ ಫಿಲ್ಮ್ಸ್‌ನ ನಿರ್ಮಾಪಕ ಕಾರ್ತಿಕ್ ಗೌಡ ಚಿತ್ರದ ಫಸ್ಟ್ ಕಾಪಿ ನೋಡಿ ಥ್ರಿಲ್ಲಾಗಿದ್ದಾರೆ. "ಕೊನೆಗೂ ಫಸ್ಟ್ ಕಾಪಿ ನೋಡ್ದೆ. ನಮ್ಮ ನೆಲದ ನಿಜವಾದ ಕಥೆ, ನಮ್ಮ ಮಣ್ಣಿನ ಕಥೆ, ಕನ್ನಡಿಗರ ಹೆಮ್ಮೆ" ಎಂದು ಟ್ವೀಟ್ ಮಾಡಿದ್ದಾರೆ.

  ಒಂದು ದಿನ ಮೊದಲೇ ವಿದೇಶದಲ್ಲಿ ಪ್ರೀಮಿಯರ್

  ಒಂದು ದಿನ ಮೊದಲೇ ವಿದೇಶದಲ್ಲಿ ಪ್ರೀಮಿಯರ್

  ಹೋಮ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ 'ಕಾಂತಾರ' ಚಿತ್ರದ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ. ಯುಎಸ್‌ನಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಒಂದು ದಿನ ಮೊದಲೇ ಅಂದರೆ ಸೆಪ್ಟೆಂಬರ್ 29ಕ್ಕೆ ಕೆಲವೆಡೆ ಪ್ರೀಮಿಯರ್‌ ಶೋಗಳು ಶುರುವಾಗಲಿದೆ. ಕರ್ನಾಟಕದಲ್ಲೂ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗದಲ್ಲಿ ಪೇಯ್ಡ್ ಪ್ರೀಮಿಯರ್‌ ಶೋ ನಡೆಯುವ ಸಾಧ್ಯತೆಯಿದೆ.

  ದಸರಾ ಸಂಭ್ರಮದಲ್ಲಿ 'ಕಾಂತಾರ' ಕಿಚ್ಚು

  ದಸರಾ ಸಂಭ್ರಮದಲ್ಲಿ 'ಕಾಂತಾರ' ಕಿಚ್ಚು

  ದಸರಾ ಹಬ್ಬದ ಸಂಭ್ರಮದಲ್ಲಿ ಬೇರೆ ಭಾಷೆಗಳಲ್ಲೂ ದೊಡ್ಡದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿದೆ. ತಮಿಳಿನ 'ಪೊನ್ನಿಯಿನ್ ಸೆಲ್ವನ್', 'ನಾನೇ ವರುವೇನ್', ತೆಲುಗಿನ 'ಗಾಡ್‌ಫಾದರ್', 'ಘೋಸ್ಟ್' ಸಿನಿಮಾಗಳ ಜೊತೆಗೆ ಕನ್ನಡದಲ್ಲಿ ಜಗ್ಗೇಶ್ ನಟನೆಯ 'ತೋತಾಪುರಿ' ಸಿನಿಮಾ ರಿಲೀಸ್ ಆಗ್ತಿದೆ. ಹಾಗಾಗಿ 'ಕಾಂತಾರ' ಚಿತ್ರಕ್ಕೆ ಭಾರಿ ಪೈಪೋಟಿ ಎದುರಾಗಲಿದೆ. ಇನ್ನು ಬೇರೆ ಭಾಷೆಗೆ ಡಬ್ ಮಾಡದೇ ಕನ್ನಡ ವರ್ಷನ್‌ನ ವಿಶ್ವದಾದ್ಯಂತ ರಿಲೀಸ್ ಮಾಡಲಾಗ್ತಿದೆ.

  English summary
  Home Screen Entertainment bags Rishab Shetty Starrer Kantara overseas distribution rights. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X