twitter
    For Quick Alerts
    ALLOW NOTIFICATIONS  
    For Daily Alerts

    ನಿರೀಕ್ಷೆ ಹುಟ್ಟಿಸಿದ 'ನಿರೀಕ್ಷೆ': 'ಹೋಪ್' ಸಿನಿಮಾ ಟ್ರೈಲರ್ ಬಿಡುಗಡೆ

    By ಫಿಲ್ಮಿಬೀಟ್ ಡೆಸ್ಕ್
    |

    ಪ್ರಾಮಾಣಿಕ ಅಧಿಕಾರಿಯೊಬ್ಬರ ವರ್ಗಾವಣೆ ಅದರ ಸುತ್ತ ನಡೆವ ರಾಜಕೀಯ, ಕಾನೂನು ಹೋರಾಟ, ಜನಾಂಧೋಲನ, ಭ್ರಷ್ಟರ ಚಾಣಾಕ್ಷ ಆಟ, ವರ್ಗಾವಣೆಗೆ ಗುರಿಯಾಗಿರುವ ಅಧಿಕಾರಿಯ ಮಾನಸಿಕ ತೊಳಲಾಟ, ತುಮುಲ ಅಸಹಾಯಕತೆಗಳ ಒಟ್ಟಾರೆ ಮಿಶ್ರಣ ಕನ್ನಡ ಸಿನಿಮಾ 'ಹೋಪ್'.

    'ಹೋಪ್' ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್ ಗಮನ ಸೆಳೆಯುತ್ತಿದೆ. ಹೋಪ್ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಈಗಾಗಲೆ ಪೋಸ್ಟರ್, ಟೀಸರ್ ಗಳ ಮೂಲಕ ಸದ್ದು ಮಾಡಿರುವ ಹೋಪ್ ಟ್ರೇಲರ್ ಅನ್ನು ಸಚಿವ ಅಶ್ವತ್ಥ್ ನಾರಾಯಣ್ ಇಂದು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

    ಸಚಿವರಾದ ಅಶ್ವತ್ಥ್ ನಾರಾಯಣ್ ಮಾತಾನಾಡಿ, ''ಬಹಳ ಒಳ್ಳೆಯ ಕಥಾವಸ್ತು ಆಯ್ಕೆ ಮಾಡಿಕೊಂಡಿದ್ದೀರಾ. ವರ್ಗಾವಣೆ ಸರ್ಕಾರದ ಮುಖ್ಯ ಭಾದೆ. ನಾವು ಅದರಲ್ಲೇ ಮುಳುಗಿರುವವರು. ನಾನು ಅದನ್ನು ತುಂಬ ಅರ್ಥ ಮಾಡಿಕೊಂಡಿದ್ದೇನೆ. ವರ್ಗಾವಣೆ ಅನ್ನೋದು ಪಿಡುಗು. ಅದೊಂದು ಚಾಲೆಂಜ್. ಹೀಗಾಗಿ ಇದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿರುವುದು ಶ್ಲಾಘನೀಯ. ಇದು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಜಾಗೃತಿ ಮೂಡಿಸುವ ಕೆಲಸವೆಲ್ಲಾ ಆಗ್ಬೇಕು ಅನ್ನುವ ಪ್ರಯತ್ನವನ್ನು ಸಿನಿಮಾ ಮೂಲಕ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದು ಆಗಲಿ'' ಎಂದರು.

    ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ನಿರ್ಮಾಣ

    ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ನಿರ್ಮಾಣ

    ನಿರ್ಮಾಪಕಿ ವರ್ಷಾ ಸಂಜೀವ್, ಜುಲೈ 8ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಟ್ರೇಲರ್ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ. ಪ್ರತಿಯೊಬ್ಬರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಕೋವಿಡ್ ಟೈಮ್ ನಲ್ಲಿಯೂ ಕಲಾವಿದರು ಕೆಲಸ ಮಾಡಿದ್ದಾರೆ. ಒಳ್ಳೆ ಔಟ್ ಫುಟ್ ಬಂದಿದೆ. ರಾಜಕೀಯ ಒತ್ತಡದಿಂದ ವರ್ಗಾವಣೆ ಹೇಗೆಲ್ಲಾ ನಡೆಯುತ್ತಿದೆ ಅನ್ನೋದನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ'' ಎಂದು ಕತೆಯ ಸಾರಾಂಶ ಹೇಳಿದರು.

    ಶ್ವೇತಾ ಶ್ರೀವತ್ಸ ಹೇಳಿದ್ದು ಏನು?

    ಶ್ವೇತಾ ಶ್ರೀವತ್ಸ ಹೇಳಿದ್ದು ಏನು?

    ನಟಿ ಶ್ವೇತಾ ಶ್ರೀವಾಸ್ತವ್ ಮಾತಾನಾಡಿ, ಏಳು ವರ್ಷದ ನಂತರ ಎಲ್ಲರೂ ಭೇಟಿಯಾಗ್ತಿರೋದು ಖುಷಿ ಕೊಟ್ಟಿದೆ. ವೈಯಕ್ತಿಕವಾಗಿ ಈ ಕಥೆ ಕನೆಕ್ಟ್ ಆಯ್ತು. ಸಮಾಜವನ್ನು ಕಣ್ತೆರೆಸುವ ಕಥೆ ಇದು. ತುಂಬಾ ಸೂಕ್ಷ್ಮ ಸಬೆಕ್ಟ್ ಇದು. ಸಿನಿಮಾದಲ್ಲಿ ಒಳ್ಳೆ ಕಲಾವಿದರು ಇದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ'' ಎಂದರು.

    ಸುಮಲತಾ ಅಂಬರೀಶ್ ಸಹ ನಟಿಸಿದ್ದಾರೆ

    ಸುಮಲತಾ ಅಂಬರೀಶ್ ಸಹ ನಟಿಸಿದ್ದಾರೆ

    ಚಿತ್ರರಂಗದಿಂದ ಒಂದಷ್ಟು ಗ್ಯಾಪ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಹೋಪ್ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ, ಸಿನಿಮಾದಲ್ಲಿ ಅವರು ಕೆಎಎಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕೆಎಎಸ್ ಅಧಿಕಾರಿ ವರ್ಗಾವಣೆ ಜನ ಸಾಮಾನ್ಯರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಥಾವಸ್ತುವನ್ನು ಇಟ್ಕೊಂಡು ಸಿನಿಮಾ ಮಾಡಲಾಗಿದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

    ಸ್ನೂಕರ್ ಆಟಗಾರ್ತಿ ವರ್ಷಾ ನಿರ್ಮಾಣ

    ಸ್ನೂಕರ್ ಆಟಗಾರ್ತಿ ವರ್ಷಾ ನಿರ್ಮಾಣ

    ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್, ಹೋಪ್ ಸಿನಿಮಾಗೆ ಕಥೆ ಬರೆದು ನಿರ್ಮಾಣ ಸಹ ಮಾಡಿದ್ದಾರೆ. ಈ ಹಿಂದೆ 'ಜ್ವಲಂತ' ಸಿನಿಮಾ ನಿರ್ದೇಶಿಸಿದ ಅಂಬರೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಸ್.ಹಲ್ಲೇಶ್ ಕ್ಯಾಮರಾ ವರ್ಕ್ ಮಾಡಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿರುವ ಹೋಪ್ ಇದೇ ಜುಲೈ 8ರಂದು ಬಿಡುಗಡೆ ಆಗುತ್ತಿದೆ.

    English summary
    Hope Kannada movie trailer released by minister Ashwath Narayan. Movie is about a KAS officer's transfer.
    Saturday, June 25, 2022, 23:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X