For Quick Alerts
  ALLOW NOTIFICATIONS  
  For Daily Alerts

  ಜೂ.24ರಂದು ಬೆಳ್ಳಿತೆರೆಗೆ ಹಾರರ್ ಥ್ರಿಲ್ಲರ್ ಹೋಂ ಸ್ಟೇ

  By ಕುಸುಮ
  |

  ಕನ್ನಡದಲ್ಲಿ 'ಹೋಂ ಸ್ಟೇ' ಅನ್ನುವ ಚಿತ್ರವೊಂದು ಮುಹೂರ್ತ ಮಾಡಿಕೊಂಡು ಮೂರು ವರ್ಷವಾಯಿತು. ಚಿತ್ರ ತಯಾರಾಗಿಯೂ ಎರಡು ವರ್ಷಗಳಾಯಿತು. ಬಾಲಿವುಡ್ ಬ್ಯೂಟಿ ಸಯಾಲಿ ಭಗತ್ ಕನ್ನಡದ ಹಿರಿಯ ನಟಿ ಶೃತಿ, ರವಿ ಕಾಳೆ ಮತ್ತು ನಿರ್ದೇಶಕ ವೃಷಬ್ ಶೆಟ್ಟಿ ಅಭಿನಯದ ಚಿತ್ರ ಕನ್ನಡ, ಹಿಂದಿ ಮತ್ತು ತಮಿಳು ಈ ಮೂರೂ ಭಾಷೆಗಳಲ್ಲಿ ಮುಂದಿನವಾರ ತೆರೆಗೆ ಬರುತ್ತಿದೆ.

  ಚಿತ್ರದ ನಿರ್ದೇಶಕ ಸಂತೋಷ್ ಕೊಡೆಂಕಿರಿ. ಚಿತ್ರದಲ್ಲಿ ನೈಜ ಘಟನೆಯನ್ನು ವಸ್ತುವಾಗಿಸಿ ಅದಕ್ಕೆ ಹಾರರ್ ಟಚ್ ನೀಡಿರುವ ನಿರ್ದೇಶಕರು ಸೆನ್ಸಾರ್ ಮಾಡಿಸೋಕೆ ಒಂದಿಡೀ ವರ್ಷ ಅಲೆದಾಡಿದ್ದಾರಂತೆ. [ತಮಿಳಲ್ಲಿ 'ದಿಗಿಲ್' ಆದ ಕನ್ನಡದ ಹಾರರ್ 'ಹೋಂ ಸ್ಟೇ']


  ಶಾಹಿದ್ ಕಪೂರ್, ಆಲಿಯಾ ಭಟ್ ಅಭಿನಯದ 'ಉಡ್ತಾ ಪಂಜಾಬ್' ಚಿತ್ರ ಕೂಡ ಇದೇ ತರಹದ ಸಮಸ್ಯೆಗಳನ್ನು ಸೆನ್ಸಾರ್ ಮಂಡಳಿಯಿಂದ ಎದುರಿಸಿ ದೊಡ್ಡ ಸುದ್ದಿಯಾಗಿತ್ತು. [ಉಡ್ತಾ ಪಂಜಾಬ್ ಬಿಡುಗಡೆ ತಡೆಗೆ ಸುಪ್ರೀಂ ನಕಾರ]

  ಆದರೆ ಕನ್ನಡದ ಹೋಂ ಸ್ಟೇಗೆ 5 ಕತ್ತರಿ ಪ್ರಯೋಗ ಮತ್ತು ಎ ಸರ್ಟಿಫಿಕೇಟ್ ಕೊಟ್ಟ ಕನ್ನಡ ಸೆನ್ಸಾರ್ ಮಂಡಳಿಯ ಮುಂದೆ ರಿವೈಸಿಂಗ್ ಕಮಿಟಿಯ ಮುಂದೆ ಹೋದ ಸಂತೋಷ್ರಿಗೆ ಬಾಂಬೆಯ ರಿವೈಸಿಂಗ್ ಕಮಿಟಿ ಅದೇ ಚಿತ್ರಕ್ಕೆ ಯಾವುದೇ ಕಟ್ಸ್ ಗಳಿಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದೆ. [ಕನ್ನಡದ ಸಸ್ಪೆನ್ಸ್ ಥ್ರಿಲ್ಲರ್ 'ಹೋಮ್ ಸ್ಟೇ' ಹೈಲೈಟ್ಸ್]


  ಇದಕ್ಕಾಗಿ ಪರದಾಡಿರುವ ಸಂತೋಷ್ ಕೊನೆಗೂ ಮೂರೂ ಭಾಷೆಗಳಲ್ಲಿ ಇದೇ ಜೂನ್ 24ರಂದು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಚಿತ್ರ ಮಂಗಳೂರಿನಲ್ಲಿ 4 ವರ್ಷ ಹಿಂದೆ ನಡೆದು ಸುದ್ದಿಯಾದ ರೇವ್ ಪಾರ್ಟಿಯ ಕಥೆಯ ಹಿನ್ನೆಲೆಯನ್ನು ಹೊಂದಿರಲಿದೆ. ಇದಕ್ಕೆ ಹಾರರ್ ಟಚ್ ನೀಡಿರುವ ಹೋಂ ಸ್ಟೇ ನಿರ್ದೇಶಕ ಕನ್ನಡ ಚಿತ್ರರಸಿಕರಿಗೆ ಭಯದ ಮನೋರಂಜನೆ ನೀಡೋಕೆ 24ರಂದು ರಾಜ್ಯಾದ್ಯಂತ ಲಗ್ಗೆ ಇಡುತ್ತಿದ್ದಾರೆ.
  English summary
  Home Stay, a horror movie based on home stay incident in Mangaluru is hitting silver screen on 24th June, with U/A certificate. Karnataka censor board had suggested 5 cuts with A certificate. Bollywood actress Sayali Bhagat, Kannada actress Shruti, Ravi Kale are in the lead.
  Thursday, June 16, 2016, 18:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X