For Quick Alerts
  ALLOW NOTIFICATIONS  
  For Daily Alerts

  ಹಾರರ್ ಥ್ರಿಲ್ಲರ್ 'ಶ್ವೇತ' ಸಿನಿಮಾ ಈ ವಾರ ತೆರೆಗೆ

  By Suneel
  |

  ಚಂದನವನದಲ್ಲಿ ಇತ್ತೀಚೆಗೆ ಹಾರರ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಷ್ಟೇ ಉತ್ತಮವಾಗಿ ಪ್ರೇಕ್ಷಕರಿಂದ ರೆಸ್ಪಾನ್ಸ್ ಸಹ ಸಿಗುತ್ತಿದೆ.

  ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಮ್ಮಿ ಸೇವ್ ಮಿ' ಚಿತ್ರ ಬಾಕ್ಸ್ ಆಪೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಅಲ್ಲದೇ ಕಳೆದ ವಾರವಷ್ಟೆ ಬಿಡುಗಡೆ ಆದ ಶರ್ಮಿಳಾ ಮಾಂಡ್ರೆ ಮತ್ತು ಚಿರಂಜೀವಿ ಸರ್ಜಾ ಅಭಿನಯದ 'ಆಕೆ' ಸಹ ಹಾಲಿವುಡ್ ರೇಂಜ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಈಗ ಇವುಗಳ ಸಾಲಿಗೆ ಸೈಲೆಂಟಾಗಿಯೇ ಚಿತ್ರೀಕರಣ ಮುಗಿಸಿರುವ 'ಶ್ವೇತ' ಎಂಬ ಹಾರರ್ ಥ್ರಿಲ್ಲರ್ ಸಿನಿಮಾ ಸೇರ್ಪಡೆ ಆಗಲು ಸಜ್ಜಾಗಿದೆ.

  ಹೌದು, ಹಾರರ್ ಪ್ರಿಯರಿಗೆ ಸಖತ್ ಥ್ರಿಲ್ ನೀಡುವ ಹೊಸಬರ ಚಿತ್ರ 'ಶ್ವೇತ' ಈ ವಾರ (ಜುಲೈ 21) ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಅಕ್ಷತಾ ಮಾರ್ಲಾ ಎಂಬುವವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಉಳಿದಂತೆ ಜಯಶೀಲ ಗೌಡ, ಶ್ರೀನಿವಾಸ್ ಪ್ರಭು, ಕಿರಣ್ ವಾಟಿ ಮತ್ತು ಮುಂತಾದವರು ನಟಿಸಿದ್ದಾರೆ.

  'ಶ್ವೇತ' ಚಿತ್ರಕ್ಕೆ ರಾಜೇಶ್ ಆರ್ ಬಲಿಪ ಎಂಬುವರು ಆಕ್ಷನ್ ಕಟ್ ಹೇಳಿದ್ದು, 'ಎಸ್‌.ಆರ್‌.ವಿ ಪ್ರೊಡಕ್ಷನ್' ಅಡಿಯಲ್ಲಿ ಪಿ.ಎಂ.ರಾಮಚಂದ್ರ ರೆಡ್ಡಿ ಎಂಬುವರು ನಿರ್ಮಾಣ ಮಾಡಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ, ನಾಗಾರ್ಜುನ್ ಡಿ ಛಾಯಾಗ್ರಹಣ, ಹೃದಯ ಶಿವ ರವರ ಸಂಭಾಷಣೆ ಮತ್ತು ಸಾಹಿತ್ಯ ಇದೆ. ಸಿನಿಮಾಗೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ 'U/A' ಸರ್ಟಿಫಿಕೇಟ್ ಸಹ ಪಡೆಯಲಾಗಿದೆ.

  ಹಾರರ್ ಪ್ರಿಯರು 'ಶ್ವೇತ' ಚಿತ್ರದ ಟ್ರೈಲರ್ ನೋಡಿಲ್ಲದಿದ್ದಲ್ಲಿ ಈ ಲಿಂಕ್ ಕ್ಲಿಕ್ ಮಾಡಿ ಟ್ರೈಲರ್ ನೋಡಿ.

  English summary
  Horror Thriller Kannada Movie 'Shwethaa' will release on July 21st. The Movie is directed by Rajesh R Balipa, features Akshatha Marla, Jayasheela Gowda, Srinivas Prabhu in the leas role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X