twitter
    For Quick Alerts
    ALLOW NOTIFICATIONS  
    For Daily Alerts

    ಹಂಸಲೇಖ-ಬರಗೂರು ರಾಮಚಂದ್ರಪ್ಪ ಸೇರಿ ಬರೆದರು 'ಹೊಸ ಅಧ್ಯಾಯ'

    |

    ಖ್ಯಾತ ನಿರ್ದೇಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಸಹಯೋಗದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟದ ಸ್ಫೂರ್ತಿದಾಯಕ ವಿಡಿಯೋ ಆಲ್ಬಮ್ 'ಹೊಸ ಅಧ್ಯಾಯ' ಹೊರಬಂದಿದೆ.

    ಕೊರೊನಾ ವೈರಸ್ ಪಿಡುಗು ಜನಜೀವನದ ಮೇಲೆ ನಡೆಸಿರುವ ದಾಳಿ, ಅದರ ವಿರುದ್ಧದ ಹೋರಾಟ ಹಾಗೂ ಈ ಹೋರಾಟದಲ್ಲಿ ಗೆಲುವು ಕಂಡುಕೊಳ್ಳುತ್ತೇವೆ ಎಂದು ಭರವಸೆ ತುಂಬುವ ಸಾಲುಗಳನ್ನು ಬರಗೂರು ರಾಮಚಂದ್ರಪ್ಪ ರಚಿಸಿದ್ದಾರೆ. ಇದಕ್ಕೆ ಹಂಸಲೇಖ ಹಿನ್ನೆಲೆ ಸಂಗೀತ ನೀಡಿರುವುದಲ್ಲದೆ, ಆ ಸಾಲುಗಳಿಗೆ ಧ್ವನಿ ಕೊಟ್ಟಿದ್ದಾರೆ.

    ಕಿರುತೆರೆಯ ಮೇಲೆ ಕೊರೊನಾ ಎಫೆಕ್ಟ್: ನಿರ್ದೇಶಕ ಸೀತಾರಾಮ್ ವಿಶ್ಲೇ‍ಷಣೆಕಿರುತೆರೆಯ ಮೇಲೆ ಕೊರೊನಾ ಎಫೆಕ್ಟ್: ನಿರ್ದೇಶಕ ಸೀತಾರಾಮ್ ವಿಶ್ಲೇ‍ಷಣೆ

    'ದೇಶವಿದೇಶದ ಸಂಚಾರಿ, ಕಣ್ಣಿಗೆ ಕಾಣದ ಸಂಹಾರಿ

    ಅಂಟಿದ ನಂಟನು ತಂದವನು

    ಜೀವ ಜೀವನ ಕೊಂದವನು

    Hosa Adhyaya Video Album By Baraguru Ramachandrappa Hamsalekha

    ಕೊರೊನಾ ಕೊರೊನಾ ನಿಶ್ಚಿತ ನಿನ್ನ ಪಲಾಯನ' ಎಂದು ಆರಂಭವಾಗುವ ಸಾಲುಗಳು ಕೊರೊನಾದ ದಾಳಿಯ ಪರಿಣಾಮವನ್ನು ವಿವರಿಸುವುದರ ಜತೆಗೆ ಅದನ್ನು ಹಿಮ್ಮೆಟ್ಟಿಸುತ್ತೇವೆ ಎಂಬ ಭರವಸೆಯನ್ನೂ ಮೂಡಿಸುತ್ತವೆ.

    ರಾಜ್ ಕುಮಾರ್ ಜನ್ಮದಿನಕ್ಕೆ ಹಂಸಲೇಖ ನೀಡಿದ ಸುಂದರ ಹಾಡಿನ ಉಡುಗೊರೆರಾಜ್ ಕುಮಾರ್ ಜನ್ಮದಿನಕ್ಕೆ ಹಂಸಲೇಖ ನೀಡಿದ ಸುಂದರ ಹಾಡಿನ ಉಡುಗೊರೆ

    ಲಾಕ್ ಡೌನ್ ಕಾರಣದಿಂದ ಸ್ತಬ್ಧವಾಗಿರುವ ನಗರ, ಸಂಕಷ್ಟದಲ್ಲಿರುವ ಜನ ಸಾಮಾನ್ಯರು, ದುಡಿಮೆ ಇಲ್ಲದೆ ಕಂಗಾಲಾಗಿರುವ ಕಾರ್ಮಿಕರು, ನಿರೀಕ್ಷೆಗಳನ್ನು ತುಂಬಿಕೊಂಡು ಕಾದಿರುವ ಜನರ ಚಿತ್ರಣಗಳನ್ನು ಸಾಹಿತ್ಯಕ್ಕೆ ಅನುಗುಣವಾಗಿ ಸೆರೆಹಿಡಿದು ಚಿತ್ರಿಸಿದ್ದಾರೆ ನಿರ್ದೇಶಕ ವಿಶ್ವಾಸ್ ಮಾದಿಸೆಟ್ಟಿ. ಸಂಕಲನದ ಕಾರ್ಯವನ್ನೂ ಅವರೇ ನಿರ್ವಹಿಸಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣ, ಕೊರೊನಾ ವೈರಸ್ ಹಾವಳಿ ಬೀರಿರುವ ಪರಿಣಾಮವನ್ನು ಮನಮುಟ್ಟುವಂತೆ ಚಿತ್ರಿಸಿದೆ.

    ಸಲಿಕೆ ಹಿಡಿದು ರಸ್ತೆ ರಿಪೇರಿ ಮಾಡಿದ ನಾದಬ್ರಹ್ಮ ಹಂಸಲೇಖಸಲಿಕೆ ಹಿಡಿದು ರಸ್ತೆ ರಿಪೇರಿ ಮಾಡಿದ ನಾದಬ್ರಹ್ಮ ಹಂಸಲೇಖ

    'ಹೊಸ ಅಧ್ಯಾಯ' ವಿಡಿಯೋ ಆಲ್ಬಮ್ ಕಲಾಕ್ಷಯ ಸ್ಟುಡಿಯೋಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಕೊರೊನಾ ವೈರಸ್ ಕಾರಣದಿಂದ ದಿಕ್ಕೆಟ್ಟಿರುವ ಜನರಲ್ಲಿ ಆತ್ಮವಿಶ್ವಾಸ ಮತ್ತು ಸ್ಫೂರ್ತಿ ತುಂಬುವಂತಿದೆ.

    English summary
    Vishwas Madisetty directed video album Hosa Adhyaya written by Baraguru Ramachandrappa with BGM and voice of Dr Hamsalekha released on Youtube.
    Sunday, May 31, 2020, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X