For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಎವರ್ ಗ್ರೀನ್ ಹಾಡನ್ನ ಮತ್ತೆ ಬಳಸಿದ ಶಿವಣ್ಣ

  |

  ಹಳೆಯ ಸೂಪರ್ ಹಿಟ್ ಹಾಡುಗಳನ್ನ ಹೊಸ ಸಿನಿಮಾದಲ್ಲಿ ಮತ್ತೆ ಬಳಸುವುದು ಇತ್ತೀಚಿನ ಟ್ರೆಂಡ್ ಆಗಿದೆ. ಈಗಷ್ಟೇ ಕೆಜಿಎಫ್ ಚಿತ್ರದಲ್ಲಿ ''ಜೋಕೆ...ನಾನು ಬಳ್ಳಿಯ ಮಿಂಚು'' ಹಾಡು ರೀ-ಕ್ರಿಯೇಟ್ ಮಾಡಲಾಗಿತ್ತು. ಇದೀಗ, ಡಾ ರಾಜ್ ಕುಮಾರ್ ಅವರ ಹಾಡನ್ನ ಪುನಃ ಬಳಸಿಕೊಳ್ಳಲಾಗ್ತಿದೆ.

  ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕವಚ ಚಿತ್ರದಲ್ಲಿ ಅಣ್ಣಾವ್ರ ಎವರ್ ಗ್ರೀನ್ ಹಾಡನ್ನ ಮರುಬಳಕೆ ಮಾಡಿದ್ದಾರಂತೆ.

  1982ರಲ್ಲಿ ತೆರೆಕಂಡಿದ್ದ 'ಹೊಸ ಬೆಳಕು' ಚಿತ್ರದ ಶೀರ್ಷಿಕೆ ಗೀತೆಯನ್ನ 'ಕವಚ' ಚಿತ್ರದಲ್ಲಿ ಮತ್ತೆ ಬಳಸಲಾಗಿದೆ. ಅರ್ಜುನ್ ಜನ್ಯ ಸಂಗೀತ ಹಾಗೂ ವಿಜಯ ಪ್ರಕಾಶ್ ಅವರ ಧ್ವನಿಯಲ್ಲಿ ಹೊಸ ಬೆಳಕು ಹಾಡನ್ನ ರೀಮಿಕ್ಸ್ ಮಾಡಲಾಗಿದೆಯಂತೆ.

  'ಕವಚ' ಚಿತ್ರದ ಆಗಮನಕ್ಕೆ ದಿನಾಂಕ ನಿಗದಿ.!

  ಅಂದ್ಹಾಗೆ, ಕವಚ ಸಿನಿಮಾ ಮಲಯಾಳಂ ಭಾಷೆಯ ಒಪ್ಪಂ ಚಿತ್ರದ ರೀಮೇಕ್ ಆಗಿದ್ದು, ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಕುರುಡನ ಪಾತ್ರದಲ್ಲಿ ಶಿವಣ್ಣನ ಅಭಿನಯ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

  ಜಿ.ವಿ.ಆರ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಇಶಾ ಕೊಪ್ಪಿಕಾರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆ ಕೃತಿಕಾ ಜಯರಾಂ, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. ಜನವರಿ 18 ರಂದು ಈ ಸಿನಿಮಾ ತೆರೆಗೆ ಬರಲಿದೆ.

  English summary
  The latest buzz is that Shivarajkumar's upcoming flick, Kavacha, will feature a remixed version of his father, renowned actor Rajkumar's popular track, Hosa Belaku.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X