Hostel Hudugaru Bekagiddare collection: ಪ್ರೇಕ್ಷಕರ ಮನಗೆದ್ದ ಹಾಸ್ಟೆಲ್ ಹುಡುಗರು 2 ದಿನಕ್ಕೆ ಗಳಿಸಿದ್ದೆಷ್ಟು?

ಗುಲ್‌ಮೊಹರ್ ಫಿಲ್ಮ್ಸ್ ಮ್ತು ವರುಣ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನಕ್ಕಿಂದ 2 ದಿನ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗಿದೆ. 3ನೇ ದಿನ ಮತ್ತಷ್ಟು ಅದ್ಭುತ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ. ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿದೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ.

ಹೊಸಬರ ವಿನೂತನ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡಿದರೆಲ್ಲಾ ಮೆಚ್ಚಿಕೊಂಡಾಡುತ್ತಿದ್ದು ಸಹಜವಾಗಿಯೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 2ನೇ ದಿನ ಹಲವೆಡೆ ಥಿಯೇಟರ್‌ಗಳು ಹೌಸ್‌ಫುಲ್ ಆಗಿತ್ತು. ನಿತಿನ್ ಕೃಷ್ಣಮೂರ್ತಿ ಅಂಡ್ ಟೀಂ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ ಬಗ್ಗೆ ಕೂಡ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಒಂದಷ್ಟು ಗೊಂದಲಗಳಿಂದ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು. ಆದರೆ ಎಲ್ಲವನ್ನು ಮೀರಿ ಸಿನಿಮಾ ಗೆದ್ದಿದೆ.

Hostel Hudugaru Bekagiddare 2 days box office collection

ಹೊಸ ತಂಡಕ್ಕೆ ರಿಷಬ್ ಶೆಟ್ಟಿ, ದಿಗಂತ್, ರಮ್ಯಾ, ರಕ್ಷಿತ್ ಶೆಟ್ಟಿ ಬೆಂಬಲ ಕೂಡ ಸಿಕ್ಕಿದೆ. ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಥಿಯೇಟರ್ ಬರ ಎದುರಿಸಿದ್ದ ಕನ್ನಡ ಚಿತ್ರರಂಗ ಖುಷಿಪಡುವಂತಾಗಿದೆ. ನಟ ಶಿವರಾಜ್‌ಕುಮಾರ್ ಕೂಡ ಚಿತ್ರತಂಡದ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಸಿನಿಮಾ ಸಕ್ಸಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಸಿನಿಮಾ 2 ದಿನಗಳ ಕಲೆಕ್ಷನ್?

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೊಸಬರ ಸಿನಿಮಾ. ಹಾಗಾಗಿ 150 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನವೇ ಸಿನಿಮಾ 90 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ. ಇನ್ನು 2ನೇ ದಿನ ಸಿನಿಮಾ 1 ಕೋಟಿ 80 ಲಕ್ಷದವರೆಗೆ ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಮೊದಲ ದಿನಕ್ಕಿಂತ 2ನೇ ದಿನ ರೆಸ್ಪಾನ್ಸ್ ಅದ್ಭುತವಾಗಿತ್ತು. ಹಾಗಾಗಿ ಕಲೆಕ್ಷನ್ ಡಬಲ್ ಆಗಿತ್ತು. ಈಗಾಗಲೇ ಒಟ್ಟು 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿರುವ ಅಂದಾಜಿದೆ. ಹೊಸಬರ ಚಿತ್ರಕ್ಕೆ ಈಮಟ್ಟಿಗೆ ರೆಸ್ಪಾನ್ಸ್ ಸಿಗುತ್ತಿರುವುದು ವಿಶೇಷ.

3ನೇ ದಿನ ಭರ್ಜರಿ ಗಳಿಕೆ ನಿರೀಕ್ಷೆ

ಮೊದಲ ದಿನಕ್ಕಿಂತ 2ನೇ ದಿನ ಹಾಸ್ಟೆಲ್ ಹುಡುಗರನ್ನು ನೋಡೋಕೆ ಬಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿತ್ತು. 3ನೇ ದಿನ ಅದಕ್ಕಿಂತ ಹೆಚ್ಚಾಗುವ ಸುಳಿವು ಸಿಕ್ತಿದೆ. ಹಾಗಾಗಿ ಭಾನುವಾರ ದೊಡ್ಡಮಟ್ಟದಲ್ಲಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಸದ್ಯ 80ಕ್ಕೂ ಅಧಿಕ ಶೋಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. 3ನೇ ದಿನ 3 ಕೋಟಿ ಗಡಿ ದಾಟುವ ಲೆಕ್ಕಾಚಾರ ನಡೀತಿದೆ. ಪ್ರೇಕ್ಷಕರು ಇದು ಮತ್ತೊಂದು 'ಕಿರಿಕ್ ಪಾರ್ಟಿ' ಎಂದು ಚಿತ್ರವನ್ನು ಮೆರೆಸುತ್ತಿದ್ದಾರೆ.

Hostel Hudugaru Bekagiddare 2 days box office collection

ವಿಭಿನ್ನ ಪ್ರಯತ್ನಕ್ಕೆ ಸಕ್ಸಸ್?

ಕನ್ನಡದಲ್ಲಿ ಹಾಸ್ಟೆಲ್ ಹುಡುಗರ ಕಥೆಯನ್ನು ಸಿನಿಮಾ ಮಾಡುವ ಪ್ರಯತ್ನ ಯಾರು ಮಾಡಿರಲಿಲ್ಲ. ಅದು ಕೂಡ ಇಡೀ ಸಿನಿಮಾ ಒಂದೇ ಹಾಸ್ಟೆಲ್ ಒಳಗೆ ಅನ್ನುವ ಕಾನ್ಸೆಪ್ಟ್ ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಸಿನಿಮಾ ಒಳಗೆ ಸಿನಿಮಾ ನಿರ್ಮಾಣದ ಕಥೆಗಳು ಬಂದಿದೆ. ಆದರೆ ಸಿನಿಮಾದೊಳಗೆ ಒಂದು ಶಾರ್ಟ್ ಫಿಲ್ಮ್ ಮಾಡುವ ಐಡಿಯಾ? ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋ ಪ್ರಯತ್ನ ಇದೇ ಮೊದಲು ಎನ್ನಬಹುದು. ಇನ್ನು ಚಿತ್ರದಲ್ಲಿ ನಟಿಸಿರುವವರೆಲ್ಲಾ ಹೊಸಬರೇ. ರಿಷಬ್ ಶೆಟ್ಟಿ, ರಮ್ಯಾ ಅವರದ್ದು ಕೂಡ ಬರೀ ಗೆಸ್ಟ್ ಅಪಿಯರೆನ್ಸ್ ಅಷ್ಟೇ.

ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್!

ಇನ್ನು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ಲೀಕಾಸುರರ ಕಾಟವೂ ಶುರುವಾಗಿದೆ. ಕೆಲ ಆನ್‌ಲೈನ್ ಸೈಟ್‌ಗಳಲ್ಲಿ ಚಿತ್ರದ ಥಿಯೇಟರ್ ಪ್ರಿಂಟ್ ಲೀಕ್ ಆಗಿದೆ ಎನ್ನಲಾಗ್ತಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಸಿನಿಮಾಗಳಿಗೆ ಇದೇ ಕಾಟ ಶುರುವಾಗಿದೆ. ಆದರೆ ಹೊಸಬರ ಪ್ರಯತ್ನವನ್ನು ಪ್ರೇಕ್ಷಕರು ಥಿಯೇಟರ್‌ನಲ್ಲೇ ನೋಡಿ ಗೆಲ್ಲಿಸಬೇಕಿದೆ.

More from Filmibeat

English summary
Hostel Hudugaru Bekagiddare box office collection. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X