Hostel Hudugaru Bekagiddare: ಹಾಸ್ಟೆಲ್ ಹುಡುಗರು 5 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು?

ಕಳೆದ ಶುಕ್ರವಾರ ( ಜುಲೈ 21 ) ಹಾಲಿವುಡ್‌ನ ಬೃಹತ್ ಚಿತ್ರಗಳಾದ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳ ಜತೆ ಕನ್ನಡದ ಹಲವಾರು ಚಿತ್ರಗಳು ತೆರೆಗೆ ಬಂದವು. ಈ ಪೈಕಿ ಈ ಎರಡು ದೈತ್ಯ ಸಿನಿಮಾಗಳನ್ನು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಓವರ್ ಟೇಕ್ ಮಾಡಿದ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎನಿಸಿಕೊಂಡಿದೆ.

ಹೌದು, ಹೊಸಬರ ತಂಡ ಸೇರಿ ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಮೊದಲ ದಿನಕ್ಕಿಂತ ಎರಡು ಹಾಗೂ ಮೂರನೇ ದಿನದ ಪ್ರದರ್ಶನಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಕಲೆಕ್ಷನ್ ಅನ್ನು ಮಾಡಿ ಕನ್ನಡ ಸಿನಿ ರಸಿಕರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ರೀತಿ ಗೆದ್ದು ಬೀಗುವವರು ಬೇಕಾಗಿದ್ದಾರೆ ಎಂದು ಕನ್ನಡ ಸಿನಿ ರಸಿಕರು ಹಾಡಿ ಹೊಗಳುತ್ತಿದ್ದಾರೆ.

Hostel Hudugaru Bekagiddare 5 days collection: Movie grossed 7 crores in Karnataka Box Office

ಇನ್ನು ಬಿಡುಗಡೆಯ ದಿನ 89 ಲಕ್ಷ ರೂಪಾಯಿ ಗಳಿಕೆಯನ್ನು ಮಾಡುವುದರ ಮೂಲಕ ಸಾಮಾನ್ಯ ಓಪನಿಂಗ್ ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಎರಡನೇ ದಿನ 1.92 ಕೋಟಿ ರೂಪಾಯಿ ಗಳಿಕೆ ಮಾಡಿತು ಹಾಗೂ ಮೂರನೇ ದಿನ 2.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಮೊದಲ ವಾರಾಂತ್ಯಕ್ಕೆ ಬರೋಬ್ಬರಿ 4.96 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿನ್ನೆಗೆ ( ಜುಲೈ 25 ) ಐದು ದಿನಗಳ ಓಟವನ್ನು ಪೂರೈಸಿದ್ದು, ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ 7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ್ದು, ಐದು ಲಕ್ಷಕ್ಕೂ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಬಾಕ್ಸ್ ಆಫೀಸ್ ಪಂಡಿತರು ತಿಳಿಸಿದ್ದಾರೆ.

ಹೊರ ರಾಜ್ಯಗಳಿಗೂ ಹಬ್ಬಿದ ಹಾಸ್ಟೆಲ್ ಹುಡುಗರ ಹಾವಳಿ:

ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಿಗೂ ಸಹ ತಲುಪಿದೆ. ಹೈದರಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಚೆನ್ನೈನ ವೆಲಚೆರಿಯ ಐನಾಕ್ಸ್, ನೆಲ್ಸನ್ ಮಣಿಕಮ್ ರಸ್ತೆಯ ಪಿವಿಆರ್, ರಾಯಪೆಟ್ಟಾದ ಎಸ್ ಪಿ ಐ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಲಾ ಒಂದೊಂದು ಪ್ರದರ್ಶನವನ್ನು ಕಾಣುತ್ತಿದೆ. ಹೈದರಾಬಾದ್‌ನ ಮಾದಾಪುರ್‌ನಲ್ಲಿರುವ ಪಿವಿಆರ್ ಐಕಾನ್ ಹಾಗೂ ಕುಕಟ್‌ಪಲ್ಲಿಯಲ್ಲಿರುವ ಪಿವಿಆರ್ ನೆಕ್ಸಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ತಲಾ ಒಂದೊಂದು ಪ್ರದರ್ಶನವನ್ನು ಕಾಣುತ್ತಿದೆ.

ಬುಕ್‌ ಮೈ ಶೋನಲ್ಲಿ 8000 ವೋಟ್ಸ್ ಮುಟ್ಟಿದ ಹಾಸ್ಟೆಲ್ ಹುಡುಗರು; ರೇಟಿಂಗ್‌ನಲ್ಲೂ ಅಬ್ಬರ:

ಪ್ರಸಿದ್ಧ ಆನ್‌ಲೈನ್ ಮೂವಿ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಆದ ಬುಕ್ ಮೈ ಶೋನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಸದ್ಯ 8000 ವೋಟ್‌ಗಳನ್ನು ಪಡೆದುಕೊಂಡಿದೆ. ಅಲ್ಲದೇ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರ 10ಕ್ಕೆ 8.9 ರೇಟಿಂಗ್ ಪಡೆದುಕೊಂಡಿದೆ. ಅಲ್ಲದೇ ಐಎಂಡಿಬಿ ವೆಬ್ ತಾಣದಲ್ಲಿ ಹತ್ತಕ್ಕೆ 8.5 ರೇಟಿಂಗ್ ಹಾಗೂ ಗೂಗಲ್‌ನಲ್ಲಿ ಐದಕ್ಕೆ 3.9 ರೇಟಿಂಗ್ ಅನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತನ್ನದಾಗಿಸಿಕೊಂಡಿದೆ.

More from Filmibeat

English summary
Hostel Hudugaru Bekagiddare 5 days collection: Movie grossed 7 crores in Karnataka Box Office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X