Hostel Hudugaru Bekagiddare: 'ಕಾಂತಾರ' ರೀತಿ ಹೊರ ರಾಜ್ಯಗಳತ್ತ ಹಾಸ್ಟೆಲ್ ಬಾಯ್ಸ್ ದಂಡಯಾತ್ರೆ: ಅದೊಂದೇ ಪ್ರಾಬ್ಲಂ?
ತುಂಗಾ ಹಾಸ್ಟೆಲ್ ಬಾಯ್ಸ್ ಕ್ವಾಟ್ಲೆಗೆ ಪ್ರೇಕ್ಷಕರು ಬಿದ್ದು ಬಿದ್ದು ನಗ್ತಿದ್ದಾರೆ. ಬಹಳ ದಿನಗಳ ನಂತರ ಒಂದೊಳ್ಳೆ ಎಂಟರ್‌ಟೈನ್‌ಮೆಂಟ್ ಸಿನಿಮಾ ನೋಡಿದ ಖುಷಿಯಲ್ಲಿದ್ದಾರೆ. ಹೊಸಬರ ಸಿನಿಮಾ ಆದ್ರು ಮನರಂಜನಗೆ ಬರವಿಲ್ಲ. ಮೌತ್ ಟಾಕ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಟಾಕ್ ಚಿತ್ರಕ್ಕೆ ಪ್ಲಸ್ ಆಗ್ತಿದೆ. ನಿಧಾನವಾಗಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಪರಭಾಷಿಕರನ್ನು ಸೆಳೀತಿದೆ.
ಕಳೆದ ಶುಕ್ರವಾರ ರಾಜ್ಯದ್ಯಂತ 130ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನ ಸಿಕ್ಕ ರೆಸ್ಪಾನ್ಸ್ ನೋಡಿ ಶನಿವಾರ ಮತ್ತು ಭಾನುವಾರ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಲಾಗಿತ್ತು. ಸೋಮವಾರ ಕೂಡ ಕೆಲವೆಡೆ ಸಿನಿಮಾ ಹೌಸ್‌ಫುಲ್ ಆಗಿತ್ತು. ವಾರದ ದಿನದಲ್ಲೂ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ನಿಧಾನವಾಗಿ ಚಿತ್ರವನ್ನು ವಿದೇಶಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೀತಿದೆ. ಈಗಾಗಲೇ ಸಿನಿಮಾ ರಾಜ್ಯದಲ್ಲಿ 6 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸ್ಯಾಂಡಲ್‌ವುಡ್ ತಾರೆಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ನಿಧಾನವಾಗಿ ಹೊರ ರಾಜ್ಯಗಳಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಸದ್ದು ಮಾಡ್ತಿದೆ. ಈಗಾಗಲೇ ಚೆನ್ನೈ, ಹೈದರಾಬಾದ್ ಹಾಗೂ ಕೊಚ್ಚಿಯಲ್ಲಿ ಕೆಲ ಶೋಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದನ್ನು ದೊಡ್ಡಮಟ್ಟದಲ್ಲಿ ಕೊಂಡೊಯ್ಯಲು ಚಿತ್ರತಂಡ ಮುಂದಾಗಿದ್ದಾರೆ. ರಿಷಬ್ ಶೆಟ್ಟಿ 'ಕಾಂತಾರ' ರೀತಿಯಲ್ಲೇ ಬೇರೆ ಕಡೆಗಳಲ್ಲಿ ಹಾಸ್ಟೆಲ್ ಹುಡುಗರ ಹಾವಳಿ ಶುರುವಾಗಲಿದೆ.
ಆಂಧ್ರ, ತೆಲಂಗಾಣಕ್ಕೆ ಹಾಸ್ಟೆಲ್ ಹುಡುಗ್ರು
ಹೌದು ಇದೀಗ ಹಾಸ್ಟೆಲ್ ಹುಡುಗ್ರು ಹೊರ ರಾಜ್ಯಕ್ಕೆ ಹೊರಟು ನಿಂತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಈಗಾಗಲೇ ಒಂದೆರಡು ಶೋ ಸಿಕ್ಕಿದೆ. ಅಲ್ಲಿನ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಚಿತ್ರವನ್ನು ಅಲ್ಲಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಶುರುವಾಗಿದೆ. ದೊಡ್ಡ ವಿತರಕರು ಅಥವಾ ಸ್ಟಾರ್ ನಟನ ಸಹಕಾರದೊಂದಿಗೆ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಬಿಡುಗಡೆ ಲೆಕ್ಕಾಚಾರ ಶುರುವಾಗಿದೆ.

ಹೊರ ರಾಜ್ಯಗಳಲ್ಲಿ 'ಕಾಂತಾರ' ಹವಾ
ಕಳೆದ ವರ್ಷ ರಿಷಬ್ ಶೆಟ್ಟಿ ನಿರ್ದೇಶಿಸಿದ ನಟಿಸಿದ 'ಕಾಂತಾರ' ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಕರಾವಳಿ ಮಣ್ಣಿನ ಕಥೆಯನ್ನು ನಮ್ಮ ಭಾಷೆಯಲ್ಲಿ ಮಾತ್ರ ಹೇಳಬೇಕು ಎನ್ನುವುದು ರಿಷಬ್ ಆಸೆ ಆಗಿತ್ತು. ಆದರೆ ಸಿನಿಮಾ ರಾಜ್ಯದಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದಂತೆ ಹೊರ ರಾಜ್ಯಗಳಿಂದ ಸಿನಿಮಾ ಡಬ್ ಮಾಡಿ ಕೊಡುವಂತೆ ಬೇಡಿಕೆ, ಒತ್ತಡ ಶುರುವಾಗಿತು. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಕಡೆ ಗೆಲುವಿನ ನಗೆ ಬೀರಿತ್ತು.
ಡಬ್ ಮಾಡೋಕೆ ಪ್ರಾಬ್ಲಂ
ನಿತಿನ್ ಕೃಷ್ಣಮೂರ್ತಿ ಸಾರಥ್ಯದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಯೂನಿವರ್ಸಲ್ ಸಬ್ಜೆಕ್ಟ್ ಎನ್ನಬಹುದು. ಇದರಲ್ಲಿ ಯಾವುದೇ ನೇಟಿವಿಟಿ ಸಮಸ್ಯೆ ಆಗುವುದಿಲ್ಲ. ಒಂದು ಹಾಸ್ಟೆಲ್‌ನಲ್ಲಿ ನಡೆಯುವ ಕಥೆ ಎಲ್ಲಾ ರಾಜ್ಯಗಳಲ್ಲಿ, ದೇಶಗಳಲ್ಲಿ ಇರುವ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಆದರೆ ಚಿತ್ರವನ್ನು ತೆಲುಗಿಗೆ ಡಬ್ ಮಾಡೋದು ಕಷ್ಟ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲೇ ಕನ್ನಡದಲ್ಲೇ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಸನ್ನಿವೇಶಗಳು ಬಗಳ ವೇಗವಾಗಿ ನಡೀತಿರುತ್ತದೆ. ಅದಕ್ಕೆ ತಕ್ಕಂತೆ ಬಹುತೇಕ ಡೈಲಾಗ್ಸ್ ಬಹಳ ವೇಗವಾಗಿ ಡೆಲಿವರಿ ಆಗುತ್ತೆ. ಅದನ್ನು ತೆಲುಗಿಗೆ ಬದಲಾಯಿಸಿ ಡಬ್ ಮಾಡೋದು ಅಷ್ಟು ಸುಲಭ ಅಲ್ಲ. ಇದರಿಂದ ಆ ಮಜಾ ಮಿಸ್ ಆಗುವ ಸಾಧ್ಯತೆಯಿದೆ. ಅದಕ್ಕೆ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗ್ತಿದೆ.
ವಿದೇಶಗಳಲ್ಲಿ ಸಿನಿಮಾ ರಿಲೀಸ್
ಇದೇ ಶುಕ್ರವಾರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಕೆನಡಾ, ಸೌತ್ ಆಫ್ರಿಕಾ, ಜರ್ಮನಿ, ಬ್ರಿಟನ್‌ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಕರ್ನಾಟದಲ್ಲಿ ಸಿನಿಮಾ 6 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಮತ್ತಷ್ಟು ಕೊಳ್ಳೆ ಹೊಡೆಯುವ ಸಾಧ್ಯತೆಯಿದೆ.


Click it and Unblock the Notifications











