Hostel Hudugaru Bekagiddare: ಫಸ್ಟ್ ವೀಕೆಂಡ್ ಬೇಜಾನ್ ಹಾವಳಿ ಇಟ್ಟ ಹಾಸ್ಟೆಲ್ ಹುಡುಗರ ಕಥೆ 4ನೇ ದಿನ ಏನಾಯ್ತು?

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್ ಹುಡುಗುರು ಬೇಕಾಗಿದ್ದಾರೆ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರ ರಿವ್ಯೂ ನೋಡಿದ ಹೊರರಾಜ್ಯದ ಕನ್ನಡಿಗರು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಹೊಸಬರ ಚಿತ್ರವೊಂದಕ್ಕೆ ಈ ಮಟ್ಟಿಗಿನ ರೆಸ್ಪಾನ್ಸ್ ಸಿಗುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ತಾರೆಯರು ಕೂಡ ವಿಭಿನ್ನ ಪ್ರಯತ್ನದ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ವರುಣ್ ಸ್ಟುಡಿಯೋಸ್ ಮತ್ತು ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಹಾಸ್ಟೆಲ್ ಹುಡುಗುರು ಬೇಕಾಗಿದ್ದಾರೆ' ಸಿನಿಮಾ ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ದೋಚುವ ಸುಳಿವು ಸಿಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಹೊಸಬರ ಚಿತ್ರಕ್ಕೆ ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್‌ಗಳು ಬೀಳ್ತಿದೆ. ಯಾವುದೇ ಸಿನಿಮಾ ಭವಿಷ್ಯ ಫಸ್ಟ್ ವೀಕೆಂಡ್ ಮುಗಿದು ಮೊದಲ ಸೋಮವಾರ ಗೊತ್ತಾಗುತ್ತದೆ.

Hostel Hudugaru Bekagiddare Day 4: Nithin Krishnamurthy directorial passes Monday test

'ಹಾಸ್ಟೆಲ್ ಹುಡುಗುರು ಬೇಕಾಗಿದ್ದಾರೆ' ಸಿನಿಮಾ ಮೊದಲ 3 ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೊದಲ ದಿನಕ್ಕಿಂತ 2 ಮತ್ತು 3 ದಿನ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡಿತ್ತು. ಶನಿವಾರ, ಭಾನುವಾರ ಅಂತೂ ಸಾಕಷ್ಟು ಶೋಗಳು ಹೌಸ್‌ಫುಲ್ ಆಗಿತ್ತು. ಆದರೆ ಸೋಮವಾರ ಏನಾಗಬಹುದು? ಎನ್ನುವ ಕುತೂಹಲ ಇತ್ತು. ನಿಜ ಹೇಳಬೇಕು ಅಂದರೆ ಸೋಮವಾರ ಕೂಡ ಕೆಲವೆಡೆ ಶೋಗಳು ಫುಲ್ ಆಗಿದ್ದು ಅಚ್ಚರಿ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹೊಸಬರ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡ್ತಿರೋದು ಇದೇ ಮೊದಲು.

ಲಕ್ಷ ಲಕ್ಷ ಟಿಕೆಟ್ ಮಾರಾಟ

ಸೋಮವಾರ ಮಾರ್ನಿಂಗ್ ಶೋ ಹೌಸ್‌ಫುಲ್ ಆಗುತ್ತದೆ ಅಂದರೆ ತಮಾಷೆ ಮಾತಲ್ಲ. ಮೊದಲ 3 ದಿನಗಳಲ್ಲಿ ಬರೀ ಬುಕ್‌ಮೈ ಶೋನಲ್ಲೇ 2 ಲಕ್ಷ ಟಿಕೆಟ್ ಮಾರಾಟವಾದ ಅಂದಾಜಿದೆ. ಮಳೆ, ಚಳಿ ಲೆಕ್ಕಿಸದೇ ಪ್ರೇಕ್ಷಕರು ಥಿಯೇಟರ್‌ಗಳ ಕಡೆ ಮುಖ ಮಾಡಿದ್ದಾರೆ. ಚಿತ್ರಕ್ಕೆ ಸಂಪೂರ್ಣ ಅಂಕಗಳನ್ನು ನೀಡುತ್ತಿದ್ದಾರೆ. ಚಿತ್ರದ ಪ್ರತಿವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹೊಸಬರ ಪ್ರಯತ್ನಕ್ಕೆ ಬಹುಪರಾಕ್ ಹೇಳುತ್ತಿದ್ದಾರೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಸೋಮವಾರ ಪರೀಕ್ಷೆಯಲ್ಲೂ ತುಂಗಾ ಹಾಸ್ಟೆಲ್ ಬಾಯ್ಸ್ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ.

4 ದಿನಕ್ಕೆ ₹7 ಕೋಟಿ ಗಳಿಕೆ?

ಫಸ್ಟ್ ವೀಕೆಂಡ್‌ನಲ್ಲಿ 'ಹಾಸ್ಟೆಲ್ ಹುಡುಗುರು ಬೇಕಾಗಿದ್ದಾರೆ' 6 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸೋಮವಾರ ಕೂಡ ಗಳಿಕೆ ಒಂದು ಕೋಟಿ ದಾಟಿಸುವ ಸಾಧ್ಯತೆಯಿದೆ. ಹಾಗಾಗಿ ಮೊದಲ 4 ದಿನಗಳಲ್ಲಿ ಸಿನಿಮಾ ಅಂದಾಜು ₹7 ಕೋಟಿ ಕೊಳ್ಳೆ ಹೊಡೆದಿದೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳೇ ಫಸ್ಟ್ ವೀಕೆಂಡ್‌ ಪ್ರೇಕ್ಷಕರ ಬರ ಎದುರಿಸುವ ಸಮಯದಲ್ಲಿ ಹೊಸಬರ ಸಿನಿಮಾ ಈ ಪಾಟಿ ಸದ್ದು ಮಾಡ್ತಿರೋದು ಚಿತ್ರರಂಗಕ್ಕೆ ಸಂತಸ ತಂದಿದೆ.

Hostel Hudugaru Bekagiddare Day 4: Nithin Krishnamurthy directorial passes Monday test

ಸ್ಯಾಂಡಲ್‌ವುಡ್ ತಾರೆಯರ ಸಾಥ್

ಮೊದಲಿನಿಂದಲೂ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಬೆಂಬಲ ಸೂಚಿಸುತ್ತಾ ಬಂದಿದ್ದರು. ಪುನೀತ್ ರಾಜ್‌ಕುಮಾರ್ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದರು. ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್, ರಮ್ಯಾ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇತ್ತೀಚೆಗೆ ಶಿವರಾಜ್‌ಕುಮಾರ್ ಚಿತ್ರತಂಡವನ್ನು ಮನೆಗೆ ಕರೆದು ಸಕ್ಸಸ್ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಸೋಮವಾರ ಶಿವಣ್ಣ, ರಮೇಶ್ ಅರವಿಂದ್, ಅಜಯ್, ರಾಜ್‌. ಬಿ ಶೆಟ್ಟಿ, ಸಪ್ತಮಿ ಗೌಡ, ಲವ್ಲಿಸ್ಟಾರ್ ಪ್ರೇಮ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

5ನೇ ದಿನ ಹೇಗಿದೆ ರೆಸ್ಪಾನ್ಸ್?

ಕಳೆದ ಶುಕ್ರವಾರ 'ಹಾಸ್ಟೆಲ್ ಹುಡುಗುರು ಬೇಕಾಗಿದ್ದಾರೆ' ಸಿನಿಮಾ ತೆರೆಕಂಡಿತ್ತು. ಇದೀಗ 5ನೇ ದಿನ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಂಗಳವಾರ ಕೂಡ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿದೆ. ಸಂಜೆ ಶೋಗಳ ನಿಧಾನವಾಗಿ ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಒಟ್ನಲ್ಲಿ ಹೊಸಬರು ಗೆದ್ದಿದ್ದಾರೆ. ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಸೀಕ್ವೆಲ್‌ಗಾಗಿ ಪಟ್ಟು ಹಿಡಿಯುವಂತೆ ಮಾಡಿದ್ದಾರೆ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಬರ ನೀಗಿಸಿದ್ದಾರೆ.

More from Filmibeat

English summary
Hostel Hudugaru Bekagiddare passes the Monday test.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X