Hostel Hudugaru Bekagiddare: ಹಾಸ್ಟೆಲ್ ಹುಡುಗ್ರ ಹಾವಳಿಗೆ ಮಂಕಾದ ಹಾಲಿವುಡ್‌ನ ಆಪನ್‌ಹೈಮರ್, ಬಾರ್ಬಿ!

ಕಳೆದ ಶುಕ್ರವಾರ ( ಜುಲೈ 21 ) ಹಾಲಿವುಡ್‌ನ ಎರಡು ಬೃಹತರ್ ಸಿನಿಮಾಗಳಾದ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳು ತೆರೆಗೆ ಬಂದವು. ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ದೊಡ್ಡ ಮಟ್ಟದ ಸದ್ದನ್ನು ಮಾಡಿದ್ದ ಈ ಚಿತ್ರಗಳು ಸಾಧಾರಣವಾಗಿ ದೊಡ್ಡ ಹೈಪ್ ಗಿಟ್ಟಿಸಿಕೊಂಡಿದ್ದವು. ಹೀಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರಗಳಿಗೆ ಬೇಡಿಕೆಯೂ ಸಹ ದೊಡ್ಡ ಮಟ್ಟದಲ್ಲಿಯೇ ಇತ್ತು. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಕರ್ನಾಟಕದಲ್ಲಿಯೂ ಸಹ ಈ ಚಿತ್ರಗಳಿಗೆ ಹೈಪ್ ಚೆನ್ನಾಗಿತ್ತು.

ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕ್ರಿಸ್ಟಫರ್ ನೋಲನ್ ನಿರ್ದೇಶನವಿರುವ ಆಪನ್‌ಹೈಮರ್ ಬಿಡುಗಡೆಯ ದಿನ ಬಿಡುಗಡೆಯಾಗುವ ಪ್ರಾದೇಶಿಕ ಚಿತ್ರಗಳು ಹೆಚ್ಚು ಸದ್ದು ಮಾಡುವುದು ಕಷ್ಟ ಎಂಬ ಮಾತುಗಳೂ ಸಹ ಈ ಹಿಂದೆ ಕೇಳಿಬಂದಿದ್ದವು. ಆದರೆ ಕನ್ನಡದ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಆಪನ್‌ಹೈಮರ್ ಚಿತ್ರವನ್ನು ಹಿಂದಿಕ್ಕಿ ಭರ್ಜರಿ ಪ್ರದರ್ಶನ ಕಾಣುವುದರ ಮೂಲಕ ಆ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದವರಿಗೆ ಟಾಂಗ್ ನೀಡಿದೆ.

ಹೌದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಬಿಡುಗಡೆಯಾದ ದಿನ ತೆರೆಗೆ ಬಂದು ಬೆಂಗಳೂರಿನಲ್ಲಿ ಆ ದಿನ ಆ ಎರಡೂ ಚಿತ್ರಗಳಿಗಿಂತ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಆದರೆ ಚಿತ್ರಕ್ಕೆ ಜನರು ಕೊಟ್ಟ ಪ್ರತಿಕ್ರಿಯೆ ಹಾಗೂ ವಿಮರ್ಶೆ ಈ ಅಂಕಿಅಂಶಗಳನ್ನು ಎರಡನೇ ದಿನದಿಂದಲೇ ಉಲ್ಟಾ ಮಾಡಿದೆ. ದಿನದಿಂದ ದಿನಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬೆಂಗಳೂರಿನ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದ್ದು, ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳಿಗೆ ಮೊದಲ ದಿನ ಸಿಕ್ಕಿದ್ದ ಪ್ರದರ್ಶನಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಕಸಿದುಕೊಂಡಿದೆ.

Hostel Hudugaru Bekagiddare: Movie beats Barbie and Oppenheimer in Bangalore region

ಹಾಗಿದ್ದರೆ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ( ಜುಲೈ 25 ) ಒಟ್ಟು ಐದು ದಿನಗಳಲ್ಲಿ ಯಾವ ದಿನ ಯಾವ ಚಿತ್ರ ಎಷ್ಟು ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿತ್ತು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಜುಲೈ 21 :

ಆಪನ್‌ಹೈಮರ್ - 394 ಪ್ರದರ್ಶನಗಳು

ಬಾರ್ಬಿ - 218 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 157 ಪ್ರದರ್ಶನಗಳು

ಬೇಬಿ - 139 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 132 ಪ್ರದರ್ಶನಗಳು

ಜುಲೈ 22:

ಆಪನ್‌ಹೈಮರ್ - 383 ಪ್ರದರ್ಶನಗಳು

ಬಾರ್ಬಿ - 228 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 162 ಪ್ರದರ್ಶನಗಳು

ಜುಲೈ 23:

ಆಪನ್‌ಹೈಮರ್ - 380 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಬಾರ್ಬಿ - 246 ಪ್ರದರ್ಶನಗಳು

ಜುಲೈ 24:

ಆಪನ್‌ಹೈಮರ್ - 362 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 274 ಪ್ರದರ್ಶನಗಳು

ಬಾರ್ಬಿ - 241 ಪ್ರದರ್ಶನಗಳು

ಜುಲೈ 25:

ಆಪನ್‌ಹೈಮರ್ - 354 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 281 ಪ್ರದರ್ಶನಗಳು

ಬಾರ್ಬಿ - 240 ಪ್ರದರ್ಶನಗಳು

More from Filmibeat

English summary
Hostel Hudugaru Bekagiddare: Movie beats Barbie and Oppenheimer in Bangalore region.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X