Hostel Hudugaru 11th Day Occupancy: ಜುಲೈ 31ರಂದು ಯಾವ ಚಿತ್ರಕ್ಕೆ ಹೆಚ್ಚು ಶೋಗಳು? ಹಾಸ್ಟೆಲ್ ಹುಡುಗ್ರ ಅಬ್ಬರ ಬಲು ಜೋರು

ಪ್ರಸ್ತುತ ಚಿತ್ರಮಂದಿರಗಳಲ್ಲಿ ಹಲವು ಭಾಷೆಯ ಸಿನಿಮಾಗಳು ಒಟ್ಟಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿದ್ದು, ಹಲವು ದಿನಗಳ ಬಳಿಕ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾದಂತಿದೆ. ಅದರಲ್ಲಿಯೂ ಪರಾಭಾಷಾ ದೈತ್ಯ ಚಿತ್ರಗಳ ಎದುರು ಕನ್ನಡ ಚಿತ್ರ ಬಿಡುಗಡೆಗೊಂಡು ತೀವ್ರ್ ಪೈಪೋಟಿ ನೀಡಿದ್ದನ್ನು ಕಂಡು ತಿಂಗಳುಗಳೇ ಕಳೆದಿವೆ.

ಅಂತಹ ಪೈಪೋಟಿಯನ್ನು ನೀಡುತ್ತಿರುವುದು ಕನ್ನಡದ ಯುವ ಕಲಾವಿದರ ತಂಡ. ಹೌದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ತಯಾರಿಸಿರುವ ತಂಡದ ಸದ್ದು ಸದ್ಯ ಕರ್ನಾಟಕದಾಚೆಗೂ ಮುಟ್ಟಿದೆ. ನಿತಿನ್ ಕೃಷ್ಣಮೂರ್ತಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದು ಅತಿದೊಡ್ಡ ಸಂಚಲನ ಹಾಗೂ ಭರವಸೆ ಸೃಷ್ಟಿಸಿದ್ದಾರೆ.

Hostel Hudugaru Bekagiddare: Movie getting excellent shows even on its 11th day

ಕಳೆದ ಜುಲೈ 21ರ ಶುಕ್ರವಾರದಂದು ಬಿಡುಗಡೆಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಅದೇ ದಿನ ಬಿಡುಗಡೆಗೊಂಡ ಹಾಲಿವುಡ್‌ನ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳಿಗೆ ತೀವ್ರ ಪೈಪೋಟಿಯನ್ನು ನೀಡುತ್ತಾ ಬಂದಿದೆ. ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳಿಗಿಂತ ಕಡಿಮೆ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ನಂತರದ ದಿನಗಳಲ್ಲಿ ಹೆಚ್ಚು ಶೋಗಳನ್ನು ಪಡೆದುಕೊಂಡು ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳ ಪ್ರದರ್ಶನಗಳನ್ನು ಕಸಿದುಕೊಂಡಿದೆ. ಇನ್ನು ಈ ಶುಕ್ರವಾರ ( ಜುಲೈ 28 ) ತೆಲುಗಿನ ಪವನ್ ಕಲ್ಯಾಣ್ ನಟನೆಯ ಬ್ರೋ ಚಿತ್ರ ಬಿಡುಗಡೆಗೊಂಡಿದ್ದು, ಬೆಂಗಳೂರಿನಲ್ಲಿ ಸದ್ಯಕ್ಕೆ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿರುವ ಸಿನಿಮಾವಾಗಿದೆ. ಹೀಗಾಗಿ ಕಳೆದ ವಾರ ಬಿಡುಗಡೆಗೊಂಡ ಚಿತ್ರಗಳ ಪ್ರದರ್ಶನಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಮಾತ್ರ ತನ್ನ ಪ್ರದರ್ಶನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬೇರೆ ಚಿತ್ರಗಳಿಗೆ ನೀಡುತ್ತಿರುವ ಪೈಪೋಟಿ ಈ ಕೆಳಕಂಡಂತಿದೆ..

ಜುಲೈ 21 :

ಆಪನ್‌ಹೈಮರ್ - 394 ಪ್ರದರ್ಶನಗಳು

ಬಾರ್ಬಿ - 218 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 157 ಪ್ರದರ್ಶನಗಳು

ಬೇಬಿ - 139 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 132 ಪ್ರದರ್ಶನಗಳು

ಜುಲೈ 22:

ಆಪನ್‌ಹೈಮರ್ - 383 ಪ್ರದರ್ಶನಗಳು

ಬಾರ್ಬಿ - 228 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 162 ಪ್ರದರ್ಶನಗಳು

ಜುಲೈ 23:

ಆಪನ್‌ಹೈಮರ್ - 380 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಬಾರ್ಬಿ - 246 ಪ್ರದರ್ಶನಗಳು

ಜುಲೈ 24:

ಆಪನ್‌ಹೈಮರ್ - 362 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 274 ಪ್ರದರ್ಶನಗಳು

ಬಾರ್ಬಿ - 241 ಪ್ರದರ್ಶನಗಳು

ಜುಲೈ 25:

ಆಪನ್‌ಹೈಮರ್ - 354 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 281 ಪ್ರದರ್ಶನಗಳು

ಬಾರ್ಬಿ - 240 ಪ್ರದರ್ಶನಗಳು

ಜುಲೈ 26:

ಆಪನ್‌ಹೈಮರ್ - 350 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 290 ಪ್ರದರ್ಶನಗಳು

ಬಾರ್ಬಿ - 237 ಪ್ರದರ್ಶನಗಳು

ಜುಲೈ 28:

ಬ್ರೋ: 355 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 242 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 211 ಪ್ರದರ್ಶನಗಳು

ಆಪನ್‌ಹೈಮರ್ - 201 ಪ್ರದರ್ಶನಗಳು

ಬಾರ್ಬಿ - 129 ಪ್ರದರ್ಶನಗಳು

ಜುಲೈ 29:

ಬ್ರೋ: 320 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 240 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 221 ಪ್ರದರ್ಶನಗಳು

ಆಪನ್‌ಹೈಮರ್ - 198 ಪ್ರದರ್ಶನಗಳು

ಬಾರ್ಬಿ - 139 ಪ್ರದರ್ಶನಗಳು

ಜುಲೈ 30:

ಬ್ರೋ: 332 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 234 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 221 ಪ್ರದರ್ಶನಗಳು

ಆಪನ್‌ಹೈಮರ್ - 193 ಪ್ರದರ್ಶನಗಳು

ಬಾರ್ಬಿ - 147 ಪ್ರದರ್ಶನಗಳು

ಜುಲೈ 31:

ಬ್ರೋ: 322 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 233 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 223 ಪ್ರದರ್ಶನಗಳು

ಆಪನ್‌ಹೈಮರ್ - 178 ಪ್ರದರ್ಶನಗಳು

ಬಾರ್ಬಿ - 139 ಪ್ರದರ್ಶನಗಳು

More from Filmibeat

English summary
Hostel Hudugaru Bekagiddare: Movie getting excellent shows even on it's 11th day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X