Hostel Hudugaru Bekagiddare: ಪವನ್ ಕಲ್ಯಾಣ್ ಚಿತ್ರ ಬಿಡುಗಡೆಯಾದರೂ ತಗ್ಗದ ಹಾಸ್ಟೆಲ್ ಹುಡುಗ್ರು ಹಾವಳಿ

ಜುಲೈ 21ರ ಶುಕ್ರವಾರದಂದು ಬಿಡುಗಡೆಗೊಂಡ ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ದೊಡ್ಡ ದೊಡ್ಡ ಸಿನಿಮಾಗಳನ್ನೇ ಹಿಂದಿಕ್ಕಿ ಪಾರುಪತ್ಯ ಮೆರೆಯುತ್ತಿದೆ. ಹೌದು, ಅದೇ ದಿನ ಬಿಡುಗಡೆಗೊಂಡ ಹಾಲಿವುಡ್‌ನ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳಿಗೂ ಸಹ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ನೀಡಿದೆ.

ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾದಾಗ ಕರ್ನಾಟಕದಲ್ಲಿಯೇ ಕನ್ನಡ ಚಿತ್ರಗಳು ಪ್ರದರ್ಶನಗಳು ಸಿಗದೇ ಹಿನ್ನಡೆ ಅನುಭವಿಸಿರುವ ಹಲವಾರು ಉದಾಹರಣೆಗಳನ್ನು ನೀವೆಲ್ಲಾ ನೋಡಿರುತ್ತೀರಿ. ಅದೇ ರೀತಿ ಕೆಲವೊಂದು ಕನ್ನಡ ಚಿತ್ರಗಳು ಪರಭಾಷಾ ದೊಡ್ಡ ಚಿತ್ರಗಳು ಬಿಡುಗಡೆಯಾದಾಗ ಅವುಗಳನ್ನು ಮಣಿಸಿ ಒಳ್ಳೆಯ ಗಳಿಕೆಯನ್ನು ಮಾಡಿ, ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡ ಗೆದ್ದು ಬೀಗಿದ ಉದಾಹರಣೆಗಳೂ ಸಹ ಇವೆ.

Hostel Hudugaru Bekagiddare: Movie got good shows even after Pawan Kalyans bro movie release

ಹೌದು, ಸಣ್ಣ ಪ್ರಮಾಣದ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಪರಭಾಷೆಯ ದೊಡ್ಡ ದೊಡ್ಡ ಚಿತ್ರಗಳ ಜತೆ ಬಿಡುಗಡೆಗೊಂಡ ಕೆಲ ಕನ್ನಡ ಚಿತ್ರಗಳು ತಮ್ಮ ಕಂಟೆಂಟ್‌ನಿಂದಾಗಿ ನಂತರದ ದಿನಗಳಲ್ಲಿ ಆ ದೊಡ್ಡ ಚಿತ್ರಗಳ ಪ್ರದರ್ಶನಗಳನ್ನು ಕಸಿದುಕೊಂಡು ಅಬ್ಬರಿಸಿವೆ. ಈ ಸಾಲಿಗೆ ಇದೀಗ ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಸಹ ಸೇರ್ಪಡೆಗೊಂಡಿದೆ.

ಹೌದು, ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳಿಗಿಂತ ಕಡಿಮೆ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ನಂತರದ ದಿನಗಳಲ್ಲಿ ಹೆಚ್ಚು ಶೋಗಳನ್ನು ಪಡೆದುಕೊಂಡು ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳ ಪ್ರದರ್ಶನಗಳನ್ನು ಕಸಿದುಕೊಂಡಿದೆ. ಇನ್ನು ಈ ಶುಕ್ರವಾರ ( ಜುಲೈ 28 ) ತೆಲುಗಿನ ಪವನ್ ಕಲ್ಯಾಣ್ ನಟನೆಯ ಬ್ರೋ ಚಿತ್ರ ಬಿಡುಗಡೆಗೊಂಡಿದ್ದು, ಬೆಂಗಳೂರಿನಲ್ಲಿ ಸದ್ಯಕ್ಕೆ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿರುವ ಸಿನಿಮಾವಾಗಿದೆ. ಹೀಗಾಗಿ ಕಳೆದ ವಾರ ಬಿಡುಗಡೆಗೊಂಡ ಚಿತ್ರಗಳ ಪ್ರದರ್ಶನಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಮಾತ್ರ ತನ್ನ ಪ್ರದರ್ಶನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಜುಲೈ 21 :

ಆಪನ್‌ಹೈಮರ್ - 394 ಪ್ರದರ್ಶನಗಳು

ಬಾರ್ಬಿ - 218 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 157 ಪ್ರದರ್ಶನಗಳು

ಬೇಬಿ - 139 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 132 ಪ್ರದರ್ಶನಗಳು

ಜುಲೈ 22:

ಆಪನ್‌ಹೈಮರ್ - 383 ಪ್ರದರ್ಶನಗಳು

ಬಾರ್ಬಿ - 228 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 162 ಪ್ರದರ್ಶನಗಳು

ಜುಲೈ 23:

ಆಪನ್‌ಹೈಮರ್ - 380 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಬಾರ್ಬಿ - 246 ಪ್ರದರ್ಶನಗಳು

ಜುಲೈ 24:

ಆಪನ್‌ಹೈಮರ್ - 362 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 274 ಪ್ರದರ್ಶನಗಳು

ಬಾರ್ಬಿ - 241 ಪ್ರದರ್ಶನಗಳು

ಜುಲೈ 25:

ಆಪನ್‌ಹೈಮರ್ - 354 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 281 ಪ್ರದರ್ಶನಗಳು

ಬಾರ್ಬಿ - 240 ಪ್ರದರ್ಶನಗಳು

ಜುಲೈ 26:

ಆಪನ್‌ಹೈಮರ್ - 350 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 290 ಪ್ರದರ್ಶನಗಳು

ಬಾರ್ಬಿ - 237 ಪ್ರದರ್ಶನಗಳು

ಜುಲೈ 28:

ಬ್ರೋ: 355 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 242 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 211 ಪ್ರದರ್ಶನಗಳು

ಆಪನ್‌ಹೈಮರ್ - 201 ಪ್ರದರ್ಶನಗಳು

ಬಾರ್ಬಿ - 129 ಪ್ರದರ್ಶನಗಳು

ಜುಲೈ 29:

ಬ್ರೋ: 320 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 240 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 221 ಪ್ರದರ್ಶನಗಳು

ಆಪನ್‌ಹೈಮರ್ - 198 ಪ್ರದರ್ಶನಗಳು

ಬಾರ್ಬಿ - 139 ಪ್ರದರ್ಶನಗಳು

ಜುಲೈ 30:

ಬ್ರೋ: 332 ಪ್ರದರ್ಶನಗಳು

ರಾಕಿ ಔರ್ ರಾಣಿ ಪ್ರೇಮ್ ಕಹಾನಿ - 234 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 221 ಪ್ರದರ್ಶನಗಳು

ಆಪನ್‌ಹೈಮರ್ - 193 ಪ್ರದರ್ಶನಗಳು

ಬಾರ್ಬಿ - 147 ಪ್ರದರ್ಶನಗಳು

More from Filmibeat

English summary
Hostel Hudugaru Bekagiddare: Movie got good shows even after Pawan Kalyan's bro movie release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X