Hostel Hudugaru Bekagiddare: 6ನೇ ದಿನವೂ ಬಾರ್ಬಿ, ಆಪನ್‌ಹೈಮರ್ ವಿರುದ್ಧ ಬಿಗಿಹಿಡಿತ ಸಾಧಿಸಿದ ಹಾಸ್ಟೆಲ್ ಹುಡುಗ್ರು!

ಸದ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ. ಸೆಟ್ಟೇರಿದಾಗಿನಿಂದಲೂ ವಿಭಿನ್ನ ಪ್ರಚಾರ ಉಪಾಯಗಳಿಂದ ಸಿನಿ ರಸಿಕರನ್ನು ತನ್ನತ್ತ ಸೆಳೆಯುತ್ತಾ ಬಂದಿದ್ದ ಈ ಚಿತ್ರ ಬಿಡುಗಡೆಯಾದ ಮೇಲೆ ಆ ಸಿನಿ ರಸಿಕರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿರುವ ಈ ಚಿತ್ರ ಕಳೆದ ಶುಕ್ರವಾರ ( ಜುಲೈ 21 ) ಬಿಡುಗಡೆಗೊಂಡಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಮೂಲಕ ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಉಂಟಾಗಿದ್ದ ಹಿಟ್ ಬರವನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ನೀಗಿಸಿದ್ದು, ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 7 ಕೋಟಿಗೂ ಅಧಿಕ ಗಳಿಕೆಯನ್ನು ಮಾಡಿದೆ.

hostel-hudugaru-bekagiddare

ಬಿಡುಗಡೆಯ ದಿನ 89 ಲಕ್ಷ ರೂಪಾಯಿ ಗಳಿಕೆಯನ್ನು ಮಾಡುವುದರ ಮೂಲಕ ಸಾಮಾನ್ಯ ಓಪನಿಂಗ್ ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಎರಡನೇ ದಿನ 1.92 ಕೋಟಿ ರೂಪಾಯಿ ಗಳಿಕೆ ಮಾಡಿತು ಹಾಗೂ ಮೂರನೇ ದಿನ 2.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಮೊದಲ ವಾರಾಂತ್ಯಕ್ಕೆ ಬರೋಬ್ಬರಿ 4.96 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿನ್ನೆಗೆ ( ಜುಲೈ 25 ) ಐದು ದಿನಗಳ ಓಟವನ್ನು ಪೂರೈಸಿದ್ದು, ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ 7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ.

ಇನ್ನು ಈ ಚಿತ್ರ ಅದೇ ಶುಕ್ರವಾರ ಬಿಡುಗಡೆಗೊಂಡಿದ್ದ ಹಾಲಿವುಡ್‌ನ ದೊಡ್ಡ ಚಿತ್ರಗಳಾದ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳಿಗೆ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ಕೊಡುತ್ತಿದ್ದು, ಈ ಎರಡೂ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಸಿಕ್ಕಿದ್ದ ಪ್ರದರ್ಶನಗಳನ್ನು ಕಸಿದುಕೊಂಡಿದೆ. ಹೌದು, ಮೊದಲ ದಿನ ಕಡಿಮೆ ಸಂಖ್ಯೆಯ ಪ್ರದರ್ಶನಗಳನ್ನು ಬೆಂಗಳೂರು ವಲಯದಲ್ಲಿ ಪಡೆದುಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಂತರ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ. ಸದ್ಯ ಇಂದು ( ಜುಲೈ 26 ) ಆರನೇ ದಿನದ ಪ್ರದರ್ಶನವನ್ನು ಚಿತ್ರ ಕಾಣುತ್ತಿದ್ದು, ಇಂದೂ ಸಹ ತನ್ನ ಹವಾ ಮುಂದುವರಿಸಿದೆ. ಹಾಗಿದ್ದರೆ ಈ 6 ದಿನಗಳಲ್ಲಿ ಈ ಮೂರು ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಜುಲೈ 21 :

ಆಪನ್‌ಹೈಮರ್ - 394 ಪ್ರದರ್ಶನಗಳು

ಬಾರ್ಬಿ - 218 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 157 ಪ್ರದರ್ಶನಗಳು

ಬೇಬಿ - 139 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 132 ಪ್ರದರ್ಶನಗಳು

ಜುಲೈ 22:

ಆಪನ್‌ಹೈಮರ್ - 383 ಪ್ರದರ್ಶನಗಳು

ಬಾರ್ಬಿ - 228 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಮಿಷನ್ ಇಂಪಾಸಿಬಲ್ - 162 ಪ್ರದರ್ಶನಗಳು

ಜುಲೈ 23:

ಆಪನ್‌ಹೈಮರ್ - 380 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 214 ಪ್ರದರ್ಶನಗಳು

ಬಾರ್ಬಿ - 246 ಪ್ರದರ್ಶನಗಳು

ಜುಲೈ 24:

ಆಪನ್‌ಹೈಮರ್ - 362 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 274 ಪ್ರದರ್ಶನಗಳು

ಬಾರ್ಬಿ - 241 ಪ್ರದರ್ಶನಗಳು

ಜುಲೈ 25:

ಆಪನ್‌ಹೈಮರ್ - 354 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 281 ಪ್ರದರ್ಶನಗಳು

ಬಾರ್ಬಿ - 240 ಪ್ರದರ್ಶನಗಳು

ಜುಲೈ 26:

ಆಪನ್‌ಹೈಮರ್ - 350 ಪ್ರದರ್ಶನಗಳು

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - 290 ಪ್ರದರ್ಶನಗಳು

ಬಾರ್ಬಿ - 237 ಪ್ರದರ್ಶನಗಳು

More from Filmibeat

English summary
Hostel Hudugaru Bekagiddare: Movie got more shows than Barbie and Oppenheimer in Bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X