Hostel Hudugaru Bekagiddare: ಗೆದ್ದ ಹಾಸ್ಟೆಲ್ ಹುಡುಗ್ರ 'ಶೈಕ್ಷಣಿಕ ಪ್ರವಾಸ' ಶುರು; ನಿಮ್ಮ ಊರಿಗೆ ಯಾವಾಗ?

ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿಭಿನ್ನ ಪ್ರಚಾರ ಕಾರ್ಯಗಳಿಂದ ಹೈಪ್ ಹುಟ್ಟುಹಾಕುತ್ತಾ ಬಂದಿರುವ ಚಿತ್ರವೆಂದರೆ ಅದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಂದ ಚಿತ್ರದ ಟೈಟಲ್ ಹಾಗೂ ಕಾನ್ಸೆಪ್ಟ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಕನ್ನಡದ ಇನ್ನೂ ಹಲವಾರು ನಟರನ್ನು ಬಳಸಿಕೊಂಡು ಪ್ರೋಮೊಗಳನ್ನು ಮಾಡಿ ಸಿನಿ ರಸಿಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಚಿತ್ರರಂಗದ ಇತಿಹಾಸದಲ್ಲಿಯೇ ತಯಾರಿಸಿದ ಅತಿಕೆಟ್ಟ ಸಿನಿಮಾ ಎಂಬ ಸಾಲನ್ನು ಪೋಸ್ಟರ್‌ನಲ್ಲಿ ಬರೆದುಕೊಳ್ಳುವ ಮೂಲಕ ಡಿಫರೆಂಟ್ ಎನಿಸಿಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬಿಡುಗಡೆಯಾದ ನಂತರ ತನ್ನೆಲ್ಲಾ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು, ಜುಲೈ 21ರ ಶುಕ್ರವಾರದಂದು ಬಿಡುಗಡೆಗೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದ್ದು, ಅದೇ ದಿನ ಬಿಡುಗಡೆಗೊಂಡ ಹಾಲಿವುಡ್‌ನ ದೈತ್ಯ ಸಿನಿಮಾಗಳಾದ ಆಪನ್‌ಹೈಮರ್ ಹಾಗೂ ಬಾರ್ಬಿಗಳಿಗೆ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ನೀಡುತ್ತಿದೆ.

hostel-hudugaru-bekagiddare-movie

ಹೀಗೆ ದೊಡ್ಡ್ ಚಿತ್ರಗಳ ಜತೆ ಬಿಡುಗಡೆಗೊಂಡು ಅಬ್ಬರದ ಗೆಲುವು ಸಾಧಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಈ ವರ್ಷ ಕನ್ನಡದ ಯಾವುದೇ ಸಿನಿಮಾವೂ ಸಹ ಪಡೆದುಕೊಳ್ಳದಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದು ವರ್ಷದ ಮೊದಲ ಕ್ಲೀನ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಹೌದು, ಈ ವರ್ಷ ಕನ್ನಡದ ಯಾವ ಚಿತ್ರವೂ ಗಳಿಸದಷ್ಟು ಯಶಸ್ಸು ಹಾಸ್ಟೆಲ್ ಹುಡುಗ್ರ ಪಾಲಾಗಿದ್ದು, ಚಿತ್ರ ಯಶಸ್ವಿ ಹತ್ತು ದಿನಗಳ ಪ್ರದರ್ಶನವನ್ನು ಪೂರೈಸಿದ ಬಳಿಕ ಇದೀಗ ಸಕ್ಸಸ್ ಟೂರ್ ಶುರು ಮಾಡಿದೆ.

ಇಂದಿನಿಂದ ( ಆಗಸ್ಟ್ 1 ) ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಈ ಸಕ್ಸಸ್ ಟೂರ್ ಅನ್ನು ಶುರು ಮಾಡಿದ್ದು, ಇದಕ್ಕೆ "ತುಂಗಾ ಬಾಯ್ಸ್ ಹಾಸ್ಟೆಲ್ ಶೈಕ್ಷಣಿಕ ಪ್ರವಾಸ" ಎಂಬ ವಿಭಿನ್ನ ಹೆಸರನ್ನು ಇಟ್ಟಿದೆ. ಮೊದಲ ದಿನ ಶಿವಮೊಗ್ಗದಲ್ಲಿ ಈ ಶೈಕ್ಷಣಿಕ ಪ್ರವಾಸವನ್ನು ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರು ಕೈಗೊಂಡಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜು, ಭಾರತ್ ಸಿನಿಮಾಸ್ ಹಾಗೂ ವೀರಭದ್ರೇಶ್ವರ ಚಿತ್ರಮಂದಿರಗಳಿಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಇಂದು ಭೇಟಿ ನೀಡುತ್ತಿದೆ. ಈ ರೀತಿಯ ಪ್ರವಾಸವನ್ನು ಕಾಲೇಜು ಹಾಗೂ ಚಿತ್ರಮಂದಿರಗಳಿಗೆ ಚಿತ್ರತಂಡ ಕೈಗೊಳ್ಳುತ್ತಿರುವುದರಿಂದ ಮತ್ತಷ್ಟು ಹೆಚ್ಚಿನ ಪ್ರಚಾರ ಚಿತ್ರತಂಡಕ್ಕೆ ಸಿಗಲಿದ್ದು, ಚಿತ್ರಮಂದಿರಕ್ಕೆ ಮತ್ತಷ್ಟು ಹೆಚ್ಚಿನ ಜನರು ಬರುವುದು ಪಕ್ಕಾ.

More from Filmibeat

English summary
Hostel Hudugaru Bekagiddare: Movie team doing success tour from August 1st
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X