'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಿಡುಗಡೆ ದಿನಾಂಕ ಪ್ರಕಟಿಸಿದ ರಕ್ಷಿತ್ ಶೆಟ್ಟಿ

ಚಂದನವನದ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಯುವ ತಂಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಹ ಒಂದು. ನಿತಿನ್ ಕೃಷ್ಣಮೂರ್ತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಈ ಹಿಂದಿನಿಂದಲೂ ತನ್ನ ವಿಭಿನ್ನ ಪ್ರಚಾರದ ವಿಧಾನಗಳಿಂದಾಗಿ ಸದ್ದು ಮಾಡಿತ್ತು.

ಪುನೀತ್ ರಾಜ್‌ಕುಮಾರ್, ರಮ್ಯಾ ರೀತಿಯ ಸ್ಟಾರ್‌ಗಳನ್ನು ವಿಭಿನ್ನ ಪ್ರಚಾರಗಳಿಗಾಗಿ ಬಳಸಿಕೊಂಡು ಸಿನಿ ರಸಿಕರ ಗಮನ ಸೆಳೆದಿದ್ದ ಈ ಚಿತ್ರತಂಡ ಹಾಡಿನ ಮೂಲಕ ಮತ್ತಷ್ಟು ಪ್ರಚಾರ ಪಡೆದುಕೊಂಡಿತ್ತು. ಹೀಗೆ ಪ್ರಚಾರಗಳಿಂದಲೇ ನಿರೀಕ್ಷೆ ಹುಟ್ಟುಹಾಕಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಇದೀಗ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

hostel-hudugaru-bekagiddare-release-date

ಗುಲ್‌ಮೊಹುರ್ ಫಿಲ್ಮ್ಸ್ ಹಾಗೂ ವರುಣ್ ಸ್ಟುಡಿಯೊಸ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ತಮ್ಮ ಪರಮ್‌ವ್ಹಾ ಸ್ಟುಡಿಯೊಸ್ ಬ್ಯಾನರ್ ಅಡಿಯಲ್ಲಿ ಕೈಜೋಡಿಸಿದ್ದಾರೆ. ಹೀಗಾಗಿ ರಕ್ಷಿತ್ ಶೆಟ್ಟಿ ಇಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ "ನಗಲು ಇಚ್ಛಿಸುವವರೇ, ದಯವಿಟ್ಟು ಗಮನಿಸಿ. ನಮ್ಮ ಹಾಸ್ಟೆಲ್ ಹುಡುಗರು ಜುಲೈ 21ಕ್ಕೆ ಬರ್ತಿದ್ದಾರೆ! ದಿನಾಂಕವನ್ನು ಸೇವ್ ಮಾಡಿಕೊಳ್ಳಿ" ಎಂದು ಬರೆದುಕೊಂಡು ಪೋಸ್ಟರ್ ಶೇರ್ ಮಾಡಿದ್ದಾರೆ.

ಚಿತ್ರ ಇದೇ ತಿಂಗಳು ತೆರೆಗೆ ಬರುತ್ತಿದ್ದು, ಸಿನಿ ರಸಿಕರು ಚಿತ್ರವನ್ನು ವೀಕ್ಷಿಸಲು ಕಾತರರಾಗಿದ್ದೇವೆ ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Hostel Hudugaru Bekagiddare movie to hit big screen on July 21st. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X