Hostel Hudugaru Bekagiddare: ಹೊರ ರಾಜ್ಯ, ವಿದೇಶಗಳಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಕ್ವಾಟ್ಲೆ

ರಾಜ್ಯಾದ್ಯಂತ ಹಾಸ್ಟೆಲ್ ಹುಡುಗರು ದರ್ಬಾರ್ ಜೋರಾಗಿದೆ. ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೀತಿದೆ. ಎಲ್ಲಡೆ ರೆಸ್ಪಾನ್ಸ್ ಜೋರಾಗಿದೆ. ಇದೀಗ ತುಂಗಾ ಹಾಸ್ಟೆಲ್ ಬಾಯ್ಸ್ ಬೇರೆ ಬೇರೆ ಊರುಗಳಿಗೆ ಹೊರಟಿದ್ದಾರೆ. ಈಗಾಗಲೇ ಹೊರ ರಾಜ್ಯಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಇನ್ನೆರಡು ದಿನಗಳಲ್ಲಿ ವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಒಟ್ನಲ್ಲಿ ಎಲ್ಲೆಲ್ಲೂ ಹಾಸ್ಟೆಲ್ ಹುಡುಗರದ್ದೇ ಅಬ್ಬರ.. ಆರ್ಭಟ.

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿತ್ತು. ಯೂತ್ ಎಂಟರ್‌ಟೈನರ್ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಹಾಸ್ಟೆಲ್ ಹುಡುಗರ ತಂಟೆ, ತರಲೆ, ಕಿತಾಪತಿಗಳನ್ನು ನೋಡಿ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕು ಹಗುರಾಗುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡಿ ಮೆಚ್ಚುಗೆಯ ಮಾತನಾಡಿದ್ದಾರೆ. ಹೊಸಬರು ಸೇರಿ ಮಾಡಿರುವ ಚಿತ್ರಕ್ಕೆ ರಮ್ಯಾ, ರಿಷಬ್ ಶೆಟ್ಟಿ ಸಾಥ್ ಸಿಕ್ಕಿದೆ.

Hostel -Hudugaru- Bekagiddare -Overseas

ರಕ್ಷಿತ್ ಶೆಟ್ಟಿ ಚಿತ್ರವನ್ನು ತಮ್ಮ ಪರಂವಃ ಸ್ಟುಡಿಯೋ ಮೂಲಕ ಚಿತ್ರವನ್ನು ಅರ್ಪಿಸಿದ್ದಾರೆ. ವಿಭಿನ್ನ ರೀತಿಯ ಪ್ರಚಾರ ತಂತ್ರಗಳಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಗಮನ ಸೆಳೆದಿತ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು. ಕೊನೆಗೆ ಟೀಸರ್ ಮತ್ತು ಟ್ರೈಲರ್‌ನಿಂದ ಸಿನಿಮಾ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆ ಹೈಪ್‌ಗೆ ತಕ್ಕಂತೆ ಸಿನಿಮಾ ನೋಡುಗರ ಮನಗೆದ್ದಿದೆ.

ಹೊರ ರಾಜ್ಯಗಳಲ್ಲಿ ಸಿನಿಮಾ ರಿಲೀಸ್

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳು ಹೊರ ರಾಜ್ಯಗಳಲ್ಲೂ ಸದ್ದು ಮಾಡ್ತಿವೆ. ಹೊಸಬರ ಸಿನಿಮಾ ಆದರೂ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೈದರಾಬಾದ್‌, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಈಗಾಗಲೇ ರಿಲೀಸ್ ಆಗಿದೆ. ಕೆಲವೇ ಶೋಗಳಲ್ಲಿ ಪ್ರದರ್ಶನ ಆಗುತ್ತಿದ್ದರೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ನಿಧಾನಗಾಗಿ ತೆಲುಗು ಮಾಧ್ಯಮಗಳಲ್ಲೂ ಸಿನಿಮಾ ಸುದ್ದಿ ಆಗುತ್ತಿದೆ.

Hostel -Hudugaru- Bekagiddare -Overseas

ಓವರ್‌ಸೀಸ್‌ನಲ್ಲಿ ಶೀಘ್ರದಲ್ಲೇ ತೆರೆಗೆ

ಕರ್ನಾಟಕದಲ್ಲಿ ಹಾಸ್ಟೆಲ್ ಹುಡುಗರ ಹಾವಳಿ ಹೇಗಿದೆ ಅನ್ನೋದನ್ನು ವಿದೇಶಗಳಲ್ಲಿರುವ ಕನ್ನಡಿಗರು ಗಮನಿಸುತ್ತಿದ್ದಾರೆ. ಸಿನಿಮಾ ನೋಡಲು ಬಹಳ ಉತ್ಸುಕರಾಗಿದ್ದಾರೆ. ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ರಕ್ಷಿತ್ ಶೆಟ್ಟಿ ತಂಡದ ಜೊತೆಗಿರುವುದು ಚಿತ್ರಕ್ಕೆ ಆನೆಬಲ ಬಂದಂತಾಗಿದೆ.

ಆಸ್ಟ್ರೇಲಿಯಾದಲ್ಲಿ ಬುಕ್ಕಿಂಗ್ ಶುರು

ಇದೇ ಶುಕ್ರವಾರ ದೂರದ ಆಸ್ಟ್ರೇಲಿಯಾದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆರೆಗಪ್ಪಳಿಸುತ್ತಿದೆ. ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಅಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುತ್ತಿದೆ. 10ಕ್ಕೂ ಅಧಿಕ ಸ್ಕ್ರೀನ್‌ನಲ್ಲಿ ಸಿನಿಮಾ ಅಲ್ಲಿ ರಿಲೀಸ್ ಆಗುತ್ತಿದೆ. ಇಂಗ್ಲೀಷ್ ಸಬ್‌ಟೈಟಲ್ಸ್ ಜೊತೆಗೆ ಕನ್ನಡದಲ್ಲಿ ಸಿನಿಮಾ ಆಸ್ಟ್ರೇಲಿಯಾ ಪ್ರೇಕ್ಷಕರನ್ನು ರಂಜಿಸಲಿದೆ.

6 ಕೋಟಿ ರೂ. ಕಲೆಕ್ಷನ್

ಹೊಸಬರ ಚಿತ್ರಕ್ಕೆ ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಸಂಗೀತ ಪ್ಲಸ್ ಆಗಿದೆ. ಎಲ್ಲರೂ ಚಿತ್ರದ ಸಿನಿಮಾಟೋಗ್ರಫಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. 4 ದಿನಕ್ಕೆ ಸಿನಿಮಾ 6 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ನಿಧಾನವಾಗಿ ಪ್ರೇಕ್ಷಕರು ಪದೇ ಪದೇ ಥಿಯೇಟರ್‌ಗೆ ಹೋಗಲು ಆರಂಭಿಸಿದ್ದಾರೆ. ಹಾಗಾಗಿ ದೊಡ್ಡಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ.

More from Filmibeat

English summary
Hostel Hudugaru Bekagiddare Overseas Release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X